ಮೀನು ತಿನ್ನುವಾಗ ತುಂಬಾ ಜಾಗರೂಕರಾಗಿರಿ. ಕೇರ್ಲೆಸ್ ಆಗಿ ತಿನ್ನಬೇಡಿ. ಒಂದು ವೇಳೆ ಮೀನಿನ ಮುಳ್ಳು ಗಂಟಲಲ್ಲಿ ಸಿಲುಕಿಕೊಂಡರೆ ಬಾಳೆಹಣ್ಣು ತಿನ್ನಿ. ಬಾಳೆಹಣ್ಣು ಜಾರು ಸ್ವಭಾವದವು. ಇದು ಗಂಟಲಿನಿಂದ ಮುಳ್ಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಬಾಳೆಹಣ್ಣಿನೊಂದಿಗೆ ಮುಳ್ಳು ಕೂಡ ಹೊಟ್ಟೆಯೊಳಗೆ ಹೋಗುತ್ತದೆ. ಕ್ರಮೇಣ ಆಮ್ಲವು ಮುಳ್ಳನ್ನು ಕರಗಿಸಲು ಸಾಧ್ಯವಾಗುತ್ತದೆ.