ಮಲ್ಲೇಶ್ವರಂ ಹಾಗೂ ಸುತ್ತ-ಮುತ್ತಲಿನ ಜನರು ರುಚಿಯಾದ ಮಸಾಲೆ ದೋಸೆ ತಿನ್ನಲು ಬಸವನಗುಡಿಗೆ ಹೋಗ್ಬೇಕಿಲ್ಲ. ಮಲ್ಲೇಶ್ವರಂನಲ್ಲೇ (Malleswaram) ವಿದ್ಯಾರ್ಥಿ ಭವನ ದೋಸೆ ಸವಿಯೋ ಅವಕಾಶ ಸಿಕ್ಕಿದೆ. ಅದೇ ಪಾರಂಪರಿಕ ರುಚಿ ಇಲ್ಲೂ ಸಿಗಲಿದೆ. ಬೆಂಗಳೂರಿನಲ್ಲಿ ಎಲ್ಲಿ ಹುಡುಕಿದ್ರು ವಿದ್ಯಾರ್ಥಿ ಭವನದಲ್ಲಿ (Vidhyarthi Bhavan) ಸಿಗೋ ದೋಸೆ ಮತ್ತೆಲ್ಲೂ ಸಿಗೋದೇ ಇಲ್ಲ
ಬೆಂಗಳೂರಲ್ಲಿ ಬೆಸ್ಟ್ ಮಸಾಲೆ ದೋಸೆ ಸಿಗೋದು ವಿದ್ಯಾರ್ಥಿ ಭವನದಲ್ಲಿ ಅಂತಾನೆ ಹೇಳ್ಬೋದು. ಯಾಕಂದ್ರೆ ಅಷ್ಟು ಫೇಮಸ್ ಆಗಿದೆ ಇಲ್ಲಿ ಸಿಗೋ ದೋಸೆ. ರುಚಿಯಾದ ಮಸಾಲೆ ದೋಸೆ ತಿನ್ನೋಕೆ ಒಮ್ಮೆ ಇಲ್ಲಿಗೆ ಭೇಟಿ ಕೊಡಲೇಬೇಕು. ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರೋ ವಿದ್ಯಾರ್ಥಿ ಭವನ ಎಲ್ಲರಿಗೂ ಗೊತ್ತೇ ಇದೆ. ಇದೀಗ ಮಲ್ಲೇಶ್ವರಂನಲ್ಲೂ ಮತ್ತೊಂದು ಶಾಖೆ ತೆರೆಯಲಾಗಿದೆ.
2/ 8
ಬೆಂಗಳೂರಿನ ಅತ್ಯಂತ ಪಾರಂಪರಿಕ ಮತ್ತು ಜನಪ್ರಿಯ ಹೋಟೆಲ್ ಹಾಗೂ ತನ್ನದೇ ರುಚಿಕರವಾದ ದೋಸೆಗಳಿಂದ ಪ್ರಸಿದ್ದವಾಗಿರೋ ವಿದ್ಯಾರ್ಥಿ ಭವನ ಹೋಟೆಲ್ ಈಗ ಮಲ್ಲೇಶ್ವರಂನಲ್ಲಿ ಓಪನ್ ಆಗಿದೆ.
3/ 8
ಬೆಳಗಿನ ಉಪಹಾರಕ್ಕಾಗಿ ಬೆಂಗಳೂರಿನ ಜನ ಹೆಚ್ಚಾಗಿ ಇಡ್ಲಿ, ದೋಸೆ, ವಡಾ ಮತ್ತು ಕಾಫಿಯನ್ನು ಇಷ್ಟಪಡುತ್ತಾರೆ. ಅದ್ರಲ್ಲೂ ವಿದ್ಯಾರ್ಥಿ ಭವನ ದೋಸೆ ಅಂದ್ರೆ ಅನೇಕರಿಗೆ ಅಚ್ಚುಮೆಚ್ಚು
4/ 8
ಬಾಯಲ್ಲಿ ನೀರೂರಿಸೋ ಮಸಾಲೆ ದೋಸೆ ಜೊತೆಗೆ ಇವ್ರು ಕೊಡೋ ಚಟ್ನಿ ಸಖತ್ ಆಗಿರುತ್ತೆ. ಇಲ್ಲಿ ದೋಸೆಗೆ ಸಾಂಬಾರ್ ಕೊಡೋದಿಲ್ಲ. ವಿದ್ಯಾರ್ಥಿ ಭವನದ ದೋಸೆ ಚಟ್ನಿ ಕಾಂಬಿನೇಷನ್ ಸೂಪರ್ ಆಗಿರುತ್ತೆ.
5/ 8
ವಿದ್ಯಾರ್ಥಿ ಭವನಕ್ಕೆ ನಿತ್ಯ ನೂರಾರು ಜನರ ದಂಡೇ ಹರಿದು ಬರುತ್ತೆ ಹೀಗಾಗಿ ಇಲ್ಲಿ ಕ್ಯೂನಲ್ಲಿ ನಿಂತು ದೋಸೆ ತಿನ್ನಲು ಟೋಕನ್ ಪಡೆದು ಕಾಯಲೇಬೇಕು. ರುಚಿಯಾದ ದೋಸೆ ತಿನ್ನಲು ಎಷ್ಟು ಕಾದ್ರೂ ಬೇಜಾರ್ ಆಗಲ್ಲ ಅಷ್ಟು ಟೇಸ್ಟಿಯಾಗಿರುತ್ತೆ ಇಲ್ಲಿ ಸಿಗೋ ದೋಸೆ
6/ 8
ವಿದ್ಯಾರ್ಥಿ ಭವನ ಹೋಟೆಲ್ 1943 ರಲ್ಲಿ ಸಣ್ಣ ಕ್ಯಾಂಟೀನ್ ಆಗಿ ಪ್ರಾರಂಭವಾಯಿತು, ಆಗ ಸುತ್ತಮುತ್ತಲಿನ ವಿದ್ಯಾರ್ಥಿಗಳು ಆಗಾಗ್ಗೆ ಭೇಟಿ ನೀಡುತ್ತಿದ್ದರು. ಇಲ್ಲಿ ಸಿಗೋ ಗರಿಗರಿ ಮಸಾಲೆ ದೋಸೆಯಿಂದ ವಿದ್ಯಾರ್ಥಿ ಭವನ ಸಖತ್ ಫೇಮಸ್ ಆಗಿದೆ.
7/ 8
ಬೆಂಗಳೂರಿನ ಡಿವಿಜಿ ರಸ್ತೆಯಲ್ಲಿರುವ ಬಸವನಗುಡಿಯಲ್ಲಿರುವ ಪ್ರಸಿದ್ಧ ಹೋಟೆಲ್ ಮತ್ತೊಂದು ಔಟ್ಲೆಟ್ ಅನ್ನು ಘೋಷಿಸಿದೆ. ವ್ಯಾಪಾರವನ್ನು ವಿಸ್ತರಿಸಲು ನಿರ್ಧರಿಸಿದ ಮಾಲೀಕರು ಮಲ್ಲೇಶ್ವರಂನಲ್ಲಿ ಹೊಸ ಹೋಟೆಲ್ ತೆರೆದಿದ್ದಾರೆ.
8/ 8
ಟ್ವಿಟರ್ನಲ್ಲಿ ಮಾಲೀಕರು ಈ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ಪಾರಂಪರಿಕ ರುಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಮಸಾಲೆ ದೋಸೆ ಜೊತೆ ದಕ್ಷಿಣ ಭಾರತ ವಿವಿಧ ತಿಂಡಿಗಳು ಇಲ್ಲಿ ಸಿಗಲಿದೆ