ಮಾಯಿಶ್ಚರೈಸರ್ ಗಾಗಿ, ಎರಡು ಚಮಚ ಹಾಲಿಗೆ, ರೋಸ್ ವಾಟರ್ ಬೆರೆಸಿ ಮುಖಕ್ಕೆ ಹಚ್ಚಿರಿ. 10 ನಿಮಿಷ ಬಿಟ್ಟು ತೊಳೆಯಿರಿ. ಇದು ಪೋಷಣೆ ನೀಡುತ್ತದೆ. ಮುಖದ ಸ್ಕ್ರಬ್ ಗಾಗಿ ಹಾಲು, ಓಟ್ ಮೀಲ್ ಮತ್ತು ಬಾಳೆಹಣ್ಣನ್ನು ಬೆರೆಸಿ ಪೇಸ್ಟ್ ಮಾಡಿ. ಮುಖಕ್ಕೆ ಹಚ್ಚಿ, ಮಸಾಜ್ ಮಾಡಿ. ನಂತರ ತೊಳೆಯಿರಿ. ಫೇಸ್ ಪ್ಯಾಕ್ ಮಾಡಲು ಹಾಲಿಗೆ,ಕಡಲೆ ಬೇಳೆ ಹಿಟ್ಟು, ಅರಿಶಿನ, ಜೇನುತುಪ್ಪ ಬೆರೆಸಿ. ಮುಖಕ್ಕೆ ಹಚ್ಚಿ, ಸ್ವಲ್ಪ ಸಮಯದ ನಂತರ ತೊಳೆಯಿರಿ.