ಮೊಡವೆ ಹೋಗಲಾಡಿಸಲು ತೆಂಗಿನ ಎಣ್ಣೆ ಜೊತೆಗೆ ಟೀ ಟ್ರೀ ಎಣ್ಣೆಯ ಕೆಲವು ಹನಿಗಳನ್ನು ಮಿಶ್ರಣ ಮಾಡಿ, ಹತ್ತಿಯಿಂದ ಮೊಡವೆ ಮೇಲೆ ಹಚ್ಚಿರಿ. ಜೇನುತುಪ್ಪ ಮೊಡವೆ ಹೋಗಲಾಡಿಸಲು ಉತ್ತಮ ಮನೆಮದ್ದಾಗಿದೆ. ಇದು ತ್ವಚೆಯನ್ನು ತೇವಗೊಳಿಸುತ್ತದೆ. ಬಿರುಕು ಸಮಸ್ಯೆ, ಉರಿಯೂತ, ಕೆಂಪು ದದ್ದು ಕಡಿಮೆ ಮಾಡುತ್ತದೆ. ಜೇನುತುಪ್ಪವನ್ನು ನೇರವಾಗಿ ಮೊಡವೆಗೆ ಹಚ್ಚಿ, 15 ನಿಮಿಷ ಬಿಟ್ಟು ತೊಳೆಯಿರಿ.
ಆಪಲ್ ಸೈಡರ್ ವಿನೆಗರ್ ಅನ್ನು ನೀರಿನಲ್ಲಿ ಬೆರೆಸಿ ಹತ್ತಿಯಿಂದ ನೇರವಾಗಿ ಮೊಡವೆ ಪೀಡಿತ ಪ್ರದೇಶಕ್ಕೆ ಹಚ್ಚಿರಿ 15 ನಿಮಿಷ ಬಿಟ್ಟು, ತೊಳೆಯಿರಿ. ನಿಂಬೆ ರಸ. ಇದು ಚರ್ಮವನ್ನು ಎಫ್ಫೋಲಿಯೇಟ್ ಮಾಡುತ್ತದೆ. ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳು ಚರ್ಮದ ಮೇಲಿನ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತವೆ. ನಿಂಬೆ ರಸವನ್ನು ಹತ್ತಿ ಉಂಡೆಯಿಂದ ಮೊಡವೆ ಸುತ್ತ ಹಚ್ಚಿರಿ. ಮತ್ತು 15 ನಿಮಿಷ ಬಿಟ್ಟು ತೊಳೆಯಿರಿ.
ಬೆಳ್ಳುಳ್ಳಿ. ಇದು ಚರ್ಮದ ಮೇಲಿನ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ ಮತ್ತು ಮೊಡವೆಗಳ ಉರಿಯೂತ ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿಯನ್ನು ನೀರಿನಲ್ಲಿ ಬೆರೆಸಿ ಪೇಸ್ಟ್ ತಯಾರಿಸಿ, ಮೊಡವೆ ಪೀಡಿತ ಪ್ರದೇಶಕ್ಕೆ ಪೇಸ್ಟ್ ಹಚ್ಚಿರಿ. 15 ನಿಮಿಷ ಬಿಟ್ಟು ತೊಳೆಯಿರಿ. ಸೌತೆಕಾಯಿ. ಇದು ಮೊಡವೆಗಳ ಉರಿಯೂತ ಕಡಿಮೆ ಮಾಡತ್ತದೆ. ಸೌತೆಕಾಯಿ ಪೇಸ್ಟ್ ಮಾಡಿ, ಮೊಡವೆಗೆ ಹಚ್ಚಿರಿ. 15 ನಿಮಿಷ ಬಿಟ್ಟು ತೊಳೆಯಿರಿ.