Weight loss: ದಿನಕ್ಕೆರಡು ಮೊಟ್ಟೆ ತಿಂದು ಹೊಟ್ಟೆಯನ್ನು ಸುಲಭವಾಗಿ ಕರಗಿಸಬಹುದು!
ನೀವು ತೂಕ ಇಳಿಕೆ ಮಾಡಲು ಹರಸಾಹಸ ಪಡುತ್ತಿದ್ದೀರಾ? ಆರೋಗ್ಯಕರ ಆಹಾರಕ್ರಮ ಮತ್ತು ನಿತ್ಯದ ವ್ಯಾಯಾಮ ಅನಿವಾರ್ಯವಾಗಿದೆ. ಜೊತೆ ಕೆಲವೊಂದು ಆಹಾರ ಬದಲಾವಣೆ ಮೂಲಕ ಕೂಡ ತೂಕ ಇಳಿಸಿಕೊಳ್ಳಬಹುದು.
ಅಧಿಕ ತೂಕ ಅನೇಕರಿಗೆ ದೊಡ್ಡ ಸಮಸ್ಯೆಯಾಗಿದೆ. ತೂಕ ಇಳಿಸಲು ಹಲವು ಪ್ರಯತ್ನಗಳನ್ನು ಮಾಡಿದರೂ ಸಾಧ್ಯವಾಗದೆ ಅದೆಷ್ಟೋ ಮಂದಿ ಹತಾಶರಾಗಿದ್ದಾರೆ. ಈಗ ನಾವು ನೀಡೋ ಟಿಪ್ಸ್ ಫಾಲೋ ಮಾಡಿದ್ರೆ ಒಂದು ವಾರದಲ್ಲಿ ನಿಮ್ಮ ತೂಕದಲ್ಲಿ ಬದಲಾವಣೆಯನ್ನು ಕಾಣಬಹುದು.
2/ 8
ತೂಕ ಎಲ್ಲರಿಗೂ ಅಪಾಯಕಾರಿ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದಕ್ಕಾಗಿಯೇ ತೂಕ ಇಳಿಸುವ ವ್ಯಾಯಾಮ ಮಾಡುವುದು ಒಳ್ಳೆಯದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಮೊದ ಮೊದಲು ನಾನಾ ಕಸರತ್ತು ಮಾಡಿ ಬಳಿಕ ನಿಲ್ಲಿಸುತ್ತೇವೆ. ಇದರಿಂದಾಗಿ ತೂಕ ಇಳಿಸಿಕೊಳ್ಳುವ ಕನಸು ಕನಸಾಗಿಯೇ ಉಳಿಯುತ್ತೆ.
3/ 8
ಮೊಟ್ಟೆಯು ಹಲವಾರು ರೀತಿಯ ಪೋಷಕಾಂಶಗಳನ್ನು ಹೊಂದಿದ್ದು, ಅದರಲ್ಲೂ ಬೇಯಿಸಿದ ಮೊಟ್ಟೆಯು ಬೇರೆಲ್ಲಕ್ಕಿಂತಲೂ ಆರೋಗ್ಯಕ್ಕೆ ಒಲ್ಳೆಯದು.
4/ 8
ಬೇಯಿಸಿದ ಮೊಟ್ಟೆಯಲ್ಲಿ ಕ್ಯಾಲರಿ ಕಡಿಮೆ ಇರುವುದು, ಅತ್ಯಧಿಕ ಪೋಷಕಾಂಶಗಳು, ಪ್ರೋಟೀನ್, ವಿಟಮಿನ್ ಮತ್ತು ಆಂಟಿಆಕ್ಸಿಡೆಂಟ್ ಗಳು ಮೊಟ್ಟೆಯಲ್ಲಿ ಸಮೃದ್ಧವಾಗಿದೆ. ಇದು ಪ್ರತಿರೋಧಕ ಶಕ್ತಿ ವೃದ್ಧಿಸಲು ಅದ್ಭುತವಾಗಿ ಕೆಲಸ ಮಾಡುವುದು. ತೂಕ ಇಳಿಸಲು ಕೂಡ ಇದು ಸಹಾಯ ಮಾಡುತ್ತದೆ
5/ 8
ದೇಹದ ತೂಕ ಇಳಿಸಿಕೊಳ್ಳಲು ಬಯಸುವವರು ಬೇಯಿಸಿದ ಮೊಟ್ಟೆಯ ಆಹಾರ ಕ್ರಮ ಬಳಸಿಕೊಳ್ಳಬೇಕು. ಅವರು ದಿನದಲ್ಲಿ ಹಲವಾರು ಸಲ ಬೇಯಿಸಿದ ಮೊಟ್ಟೆ ಸೇವಿಸಬೇಕು.
6/ 8
ತೂಕ ಇಳಿಸಬೇಕಾದರೆ ಆಗ ಆಹಾರ ಕ್ರಮದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ.
7/ 8
ಇದಕ್ಕಾಗಿ ಬೇಯಿಸಿದ ಮೊಟ್ಟೆಯ ಆಹಾರ ಕ್ರಮದೊಂದಿಗೆ ಲೀನ್ ಪ್ರೋಟೀನ್ ಮತ್ತು ಪಿಷ್ಠವು ಕಡಿಮೆ ಇರುವಂತಹ ತರಕಾರಿಗಳು, ಕಡಿಮೆ ಕ್ಯಾಲೋರಿ ಇರುವ ಹಣ್ಣುಗಳನ್ನು ಇದಕ್ಕೆ ಸೇರಿಸಿಕೊಳ್ಳಬೇಕು. ನೀರು, ಗ್ರೀನ್ ಟೀ ಇತ್ಯಾದಿಗಳನ್ನು ಸೇವನೆ ಮಾಡುವ ಜತೆಗೆ ಎಣ್ಣೆ ಹಾಕಿದಂತಹ ಸಲಾಡ್ ಗಳನ್ನು ಮಿತವಾಗಿ ಸೇವಿಸಿ.
8/ 8
ಈ ಆಹಾರ ಪಥ್ಯವನ್ನು ಕೆಲವು ವಾರಗಳ ತನಕ ಪಾಲಿಸಿಕೊಂಡು ಹೋಗಬೇಕು ಮತ್ತು ಇದರ ಬಳಿಕ ನೀವು ಮತ್ತೆ ಆರೋಗ್ಯಕಾರಿ ಆಹಾರ ಸೇವನೆಗೆ ಮರಳಬಹುದು. ತೂಕ ಇಳಿಸಲು ಮೊಟ್ಟೆ ಹಾಗೂ ನೀರಿನ ಆಹಾರ ಕ್ರಮವೂ ಇದೆ.