Weight Loss: ಗೃಹಿಣಿಯರು ತೂಕ ಇಳಿಸಲು 15 ನಿಮಿಷ ಈ ವ್ಯಾಯಾಮ ಮಾಡಿ
ಮನೆಯಲ್ಲೇ ಇರೋ ಮಹಿಳೆಯರು ತೂಕ ಇಳಿಸಲು ಕೆಲವೊಂದು ವ್ಯಾಯಾಮ ಮಾಡಿದ್ರೆ ಸಾಕು. ನಿಮಗೆ ಜಿಮ್ಗೆ ಹೋಗಲು ಸಮಯವಿಲ್ಲದಿದ್ರೆ. ಮನೆಯಲ್ಲಿಯೇ ಇದ್ದು ಪ್ರತಿದಿನ 15 ನಿಮಿಷಗಳ ಕಾಲ ಈ ವ್ಯಾಯಾಮ ಮಾಡಿ ನಿಮ್ಮ ತೂಕ ಕ್ರಮೇಣ ಕಡಿಮೆಯಾಗಲು ಪ್ರಾರಂಭವಾಗುತ್ತದೆ.
ಸ್ಲಿಮ್ ಹಾಗೂ ಆರೋಗ್ಯವಾಗಿರಲು ನೀವು ಕೆಲವು ವ್ಯಾಯಾಮಗಳನ್ನು ಮಾಡಬೇಕು. ಸ್ವಲ್ಪ ಸಮಯದವರೆಗೆ ವ್ಯಾಯಾಮ ಮಾಡಲು ನೀವು ಪ್ರತಿದಿನ 15 ನಿಮಿಷಗಳನ್ನು ತೆಗೆದುಕೊಳ್ಳುತ್ತೀರಿ
2/ 8
ಸ್ಲಿಮ್ ಹಾಗೂ ಆರೋಗ್ಯವಾಗಿರಲು ನೀವು ಕೆಲವು ವ್ಯಾಯಾಮಗಳನ್ನು ಮಾಡಬೇಕು. ಸ್ವಲ್ಪ ಸಮಯದವರೆಗೆ ವ್ಯಾಯಾಮ ಮಾಡಲು ನೀವು ಪ್ರತಿದಿನ 15 ನಿಮಿಷಗಳನ್ನು ತೆಗೆದುಕೊಳ್ಳುತ್ತೀರಿ
3/ 8
ಮನೆಯಲ್ಲಿಯೇ ಇರುವಾಗ ನಿಮ್ಮ ಫಿಟ್ನೆಸ್ ಗುರಿಗಳನ್ನು ನೀವು ಸಾಧಿಸಬಹುದು. ಕೇವಲ 15 ನಿಮಿಷಗಳಲ್ಲಿ ಮಾಡಬಹುದಾದ ಕೆಲವು ಸರಳ ವ್ಯಾಯಾಮಗಳನ್ನು ತಿಳಿದುಕೊಳ್ಳಿ.
4/ 8
ಮಹಿಳೆಯರಿಗೆ ಮನೆಯಲ್ಲಿ ಸಮಯವಿಲ್ಲದೇ ತೂಕ ಇಳಿಸಿಕೊಳ್ಳಲು ಹರಸಾಹಸ ಪಡುತ್ತಾರೆ. ಕೆಲವೊಂದು ವ್ಯಾಯಾಮ ಮಾಡಿದ್ರೆ ನೀವು ಫಿಟ್ ಆಗುತ್ತೀರಿ ಮತ್ತು ನಿಮ್ಮ ತೂಕ ನಿಯಂತ್ರಣದಲ್ಲಿರುತ್ತದೆ.
5/ 8
ಜಾಗಿಂಗ್: ಫಿಟ್ ಆಗಿರಲು ನಿಮ್ಮ ದಿನಚರಿಯಲ್ಲಿ ನಿಖರವಾಗಿ 15 ನಿಮಿಷಗಳ ವಾಕಿಂಗ್ ಅಥವಾ ಜಾಗಿಂಗ್ ಮಾಡಿ. ಪಾರ್ಕ್ಗೆ ಹೋಗಿ ಜಾಗಿಂಗ್ ಮಾಡಿದ್ರೆ ಒಳ್ಳೇ ಗಾಳಿ ಸೇವಿಸಬಹುದು. ವಾಕಿಂಗ್, ಜಾಗಿಂಗ್ ಮಾಡೋದ್ರಿಂದ ಕ್ರಮೇಣ ತೂಕ ಕಡಿಮೆಯಾಗುತ್ತೆ.
6/ 8
ಪುಶ್ ಅಪ್ಸ್: ಇದು ಮನೆಯಲ್ಲಿಯೇ ಮಾಡಬಹುದಾದ ಸುಲಭ ಅತ್ಯಂತ ಪರಿಣಾಮಕಾರಿ ವ್ಯಾಯಾಮ. ನೀವು ಪ್ರತಿದಿನ 15 ನಿಮಿಷಗಳ ಕಾಲ ಮಾತ್ರ ಪುಶ್ ಅಪ್ಗಳನ್ನು ಮಾಡಬೇಕು. ಪುಶ್ ಅಪ್ ಮಾಡೋದ್ರಿಂದ ನಿಮ್ಮ ಸ್ನಾಯುಗಳನ್ನ ಬಲಪಡಿಸುತ್ತದೆ.
7/ 8
ಸೈಡ್ ಲೆಗ್ ವ್ಯಾಯಾಮ: ನಿಮ್ಮ ಕಾಲುಗಳನ್ನು ಸ್ಲಿಮ್ ಮಾಡಲು ಈ ವ್ಯಾಯಾಮ ಮಾಡಿ. ನೀವು ಮನೆಯಲ್ಲಿ ಸೈಡ್ ಲೆಗ್ ವ್ಯಾಯಾಮವನ್ನು ಸುಲಭವಾಗಿ ಮಾಡಬಹುದು. ಚಾಪೆಯ ಮೇಲೆ ಕುಳಿತು ಈ ವ್ಯಾಯಾಮ ಮಾಡಿ. ಇದು ನಿಮ್ಮ ತೊಡೆಯ ಮೇಲೆ ಸಂಗ್ರಹವಾಗಿರುವ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ
8/ 8
ಬ್ರಿಡ್ಜ್ ವ್ಯಾಯಾಮ: ಮಹಿಳೆಯರು ಮನೆಯಲ್ಲಿ ಕೆಲಸ ಮಾಡುವಾಗ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಆದ್ದರಿಂದ ಇದು ನಿಮಗೆ ಉತ್ತಮ ವ್ಯಾಯಾಮವಾಗಿದೆ. ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಬೆನ್ನು ನೋವನ್ನು ನಿವಾರಿಸುತ್ತದೆ.