ತಾಯಂದಿರು ಪ್ರತಿ ಬಾರಿ ಹಾಲುಣಿಸುವಾಗ ತಮ್ಮದೇ ಆದ ಅನುಭವವನ್ನು ಹೊಂದಿರುತ್ತಾರೆ. ಹೆಚ್ಚಿನ ಜನರು ತಮ್ಮ ಮಗುವಿಗೆ ಸಮರ್ಪಕವಾಗಿ ಹಾಲುಣಿಸಲು ಯಾವ ತಂತ್ರಗಳನ್ನು ಅನುಸರಿಸಬೇಕೆಂದು ತಿಳಿದಿರುವುದಿಲ್ಲ. ಇದು ಕಾಲಕಾಲಕ್ಕೆ ಬದಲಾಗುತ್ತಲೇ ಇರುತ್ತದೆ. ಆದಾಗ್ಯೂ, ತಾಯಂದಿರು ಸ್ತನ್ಯಪಾನದ ಬಗ್ಗೆ ಮುಖ್ಯವಾದ ಅಂಶಗಳನ್ನು ತಿಳಿದಿದ್ದರೆ ತಮ್ಮ ಅಗತ್ಯವಾದ ಚಟುವಟಿಕೆಗಳನ್ನು ತ್ವರಿತವಾಗಿ ಬದಲಾಯಿಸಬಹುದು.
ನಿಮ್ಮ ಸುತ್ತಲಿರುವ ಅನೇಕ ಮಹಿಳೆಯರು ಸರಿಯಾಗಿ ಸ್ತನ್ಯಪಾನ ಮಾಡುವುದು ಹೇಗೆ ಎಂದು ಸಲಹೆಯನ್ನು ನೀಡಬಹುದು. ಇದು ನಿಮಗೆ ಮತ್ತು ನಿಮ್ಮ ಮಕ್ಕಳಿಗೆ ಸರಿಯಾಗಿದೆಯೇ ಎಂದು ನೋಡಲು ನೀವು ತಾಳ್ಮೆಯಿಂದ ಆ ತಂತ್ರವನ್ನು ಅನುಸರಿಸಬೇಕಿದೆ. ಬೇರೆಯವರು ಹೇಳುವುದನ್ನು ಕೇಳುವುದಕ್ಕಿಂತ ಪುಸ್ತಕಗಳು ಮತ್ತುತಜ್ಞರು ನೀಡಿರೋ ಸಲಹೆಗಳನ್ನು ಓದುವ ಮೂಲಕ ಸ್ತನ್ಯಪಾನದ ಬಗ್ಗೆ ತಿಳಿದುಕೊಳ್ಳಿ.