Giloy Benefits: ಡಯಾಬಿಟಿಸ್​ನಿಂದ ತೂಕ ಇಳಿಕೆಯವರೆಗೆ ಗಿಲೋಯ್ ಪ್ರಯೋಜನಗಳಿವು

ಆಯುರ್ವೇದದಲ್ಲಿ ಹಲವು ಗಿಡಮೂಲಿಕೆಗಳು ಹಲವು ಕಾಯಿಲೆಗಳ ನಿವಾರಣೆಗೆ ಬಳಕೆ ಮಾಡಲಾಗುತ್ತದೆ. ಅದರಲ್ಲಿ ಗುಡುಚಿ ಅಂದರೆ ಗಿಲೋಯ್ ಗಿಡಮೂಲಿಕೆ ಸಹ ಒಂದಾಗಿದೆ. ಗಿಲೋಯ್ ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತದೆ. ಗುಡುಚಿಯನ್ನು ಆಯುರ್ವೇದದಲ್ಲಿ ಅಮೃತವೆಂದು ಬಣ್ಣಿಸಲಾಗಿದೆ. ಗುಡುಚಿಯನ್ನು ಅತ್ಯಂತ ಮುಖ್ಯವಾದ ಮತ್ತು ಶಕ್ತಿಶಾಲಿ ಮೂಲಿಕೆ ಎಂದು ಆಯುರ್ವೇದದಲ್ಲಿ ಹೇಳಲಾಗುತ್ತದೆ. ಅದರ ಪ್ರಯೋಜನಗಳ ಬಗ್ಗೆ ನೋಡೋಣ.

First published:

  • 18

    Giloy Benefits: ಡಯಾಬಿಟಿಸ್​ನಿಂದ ತೂಕ ಇಳಿಕೆಯವರೆಗೆ ಗಿಲೋಯ್ ಪ್ರಯೋಜನಗಳಿವು

    ಗುಡುಚಿ ಒಂದು ಶಕ್ತಿಶಾಲಿ ಆಯುರ್ವೇದ ಗಿಡಮೂಲಿಕೆ. ಇದು ಸಾಕಷ್ಟು ಆರೋಗ್ಯ ಲಾಭ ನೀಡುತ್ತದೆ. ನೀವು ಗಿಲೋಯ್ ಹೆಸರು ಕೇಳಿರಬಹುದು. ಗಿಲೋಯ್ ಮೂಲಿಕೆಯು ಜ್ವರ, ಡೆಂಗ್ಯೂ, ಚಿಕೂನ್‌ಗುನ್ಯಾ, ಗೌಟ್, ವೈರಲ್ ಜ್ವರ, ಕೆಮ್ಮು ಮತ್ತು ನೆಗಡಿ ಸಮಸ್ಯೆ ಹಾಗೂ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಮತ್ತು ಕಾಯಿಲೆ ನಿವಾರಿಸುವ ಸಂಪೂರ್ಣ ಸಾಮರ್ಥ್ಯ ಹೊಂದಿದೆ.

    MORE
    GALLERIES

  • 28

    Giloy Benefits: ಡಯಾಬಿಟಿಸ್​ನಿಂದ ತೂಕ ಇಳಿಕೆಯವರೆಗೆ ಗಿಲೋಯ್ ಪ್ರಯೋಜನಗಳಿವು

    ಗಿಲೋಯ್ ಒಂದು ನೈಸರ್ಗಿಕ ಕಾಯಿಲೆ ನಿವಾರಕ ಔಷಧವಾಗಿದೆ. ಇದು ದೇಹದಲ್ಲಿನ ಉರಿಯೂತ ನಿವಾರಣೆಗೆ ಸಹಾಯ ಮಾಡುತ್ತದೆ. ಆ್ಯಂಟಿ ಬಯೋಟಿಕ್, ಆ್ಯಂಟಿ ಏಜಿಂಗ್, ಆ್ಯಂಟಿ ಆಕ್ಸಿಡೆಂಟ್, ಆಂಟಿವೈರಲ್, ಆ್ಯಂಟಿ ಡಯಾಬಿಟಿಕ್ ಮತ್ತು ಆ್ಯಂಟಿ ಕ್ಯಾನ್ಸರ್ ಔಷಧ ಇದಾಗಿದೆ. ಇದನ್ನು ಎಲ್ಲರೂ ಸೇವಿಸಬಹುದು. ವೈದ್ಯರ ಮಾರ್ಗದರ್ಶನ ಪಡೆಯಿರಿ.

    MORE
    GALLERIES

  • 38

    Giloy Benefits: ಡಯಾಬಿಟಿಸ್​ನಿಂದ ತೂಕ ಇಳಿಕೆಯವರೆಗೆ ಗಿಲೋಯ್ ಪ್ರಯೋಜನಗಳಿವು

    ಗಿಲೋಯ್ ಆಯುರ್ವೇದ ಗಿಡಮೂಲಿಕೆಯ ಸೇವನೆಯಿಂದ ದೇಹದ ಶಕ್ತಿಯ ಮಟ್ಟ ಸುಧಾರಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮತ್ತು ಮೆದುಳಿಗೆ ಟಾನಿಕ್ ಆಗಿ ಕೆಲಸ ಮಾಡುತ್ತದೆ. ಇದು ಒತ್ತಡದ ಮಟ್ಟ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ಮೆಮೊರಿ ಸುಧಾರಿಸುತ್ತದೆ. ಮತ್ತು ಮೆದುಳಿನ ಶಕ್ತಿ ಹೆಚ್ಚಿಸುತ್ತದೆ.

    MORE
    GALLERIES

  • 48

    Giloy Benefits: ಡಯಾಬಿಟಿಸ್​ನಿಂದ ತೂಕ ಇಳಿಕೆಯವರೆಗೆ ಗಿಲೋಯ್ ಪ್ರಯೋಜನಗಳಿವು

    ಆಯುರ್ವೇದ ವೈದ್ಯರ ಪ್ರಕಾರ, ಗುಡುಚಿ ಇತರೆ ಆಯುರ್ವೇದ ಗಿಡಮೂಲಿಕೆಗಳಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ವೈರಲ್ ಜ್ವರ, ಹೊಟ್ಟೆ ನೋವು, ಕೆಮ್ಮು, ಶೀತ, ಡೆಂಗ್ಯೂ ಮತ್ತು ಟೈಫಾಯಿಡ್‌ ಆರೋಗ್ಯ ಸಮಸ್ಯೆ ದೂರ ಮಾಡಲು ಸಹಾಯ ಮಾಡುತ್ತದೆ.

    MORE
    GALLERIES

  • 58

    Giloy Benefits: ಡಯಾಬಿಟಿಸ್​ನಿಂದ ತೂಕ ಇಳಿಕೆಯವರೆಗೆ ಗಿಲೋಯ್ ಪ್ರಯೋಜನಗಳಿವು

    ಗಿಲೋಯ್ ಮೂಲಿಕೆಯನ್ನು ಗರ್ಭಾವಸ್ಥೆಯಲ್ಲಿ ಸೇವನೆ ಮಾಡದಂತೆ ವೈದ್ಯರು ಹೇಳ್ತಾರೆ. ಇದನ್ನು ಬಿಸಿ ನೀರಿನಲ್ಲಿ ಕುದಿಸಿ ಸೇವನೆ ಮಾಡುವುದು ಉಪಯೋಗಕಾರಿ ಆಗಿದೆ. ತಾಜಾ ಎಲೆಗಳು ಮತ್ತು ಗಿಲೋಯ್ ಕಾಂಡವನ್ನು ರಾತ್ರಿಯಿಡೀ ನೆನೆಸಿಟ್ಟು, ಬೆಳಗ್ಗೆ 1 ಲೋಟ ನೀರಿನಲ್ಲಿ ಕುದಿಸಿ, ಫಿಲ್ಟರ್ ಮಾಡಿ ಸೇವಿಸಿ. ಇದಕ್ಕೆ ನೀವು ತುಳಸಿ ಎಲೆ, ಅರಿಶಿನ ಮತ್ತು ಲವಂಗ ಹಾಕಿ.

    MORE
    GALLERIES

  • 68

    Giloy Benefits: ಡಯಾಬಿಟಿಸ್​ನಿಂದ ತೂಕ ಇಳಿಕೆಯವರೆಗೆ ಗಿಲೋಯ್ ಪ್ರಯೋಜನಗಳಿವು

    ಮಧುಮೇಹಿಗಳು ರಕ್ತದ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇರಿಸಲು ಗಿಲೋಯ್ ಸೇವನೆ ಸಾಕಷ್ಟು ಸಹಾಯ ಮಾಡುತ್ತದೆ. ಮಧುಮೇಹಿಗಳು ಗುಡುಚಿ ಸೇವನೆ ಮಾಡುವುದು ಅವರಿಗೆ ಕಾಯಿಲೆ ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ರಾತ್ರಿ 400 ಮಿಲಿ ನೀರಿನಲ್ಲಿ 1 ಭಾಗ (10 ಗ್ರಾಂ) ಕ್ವಾತ್ (ಡಿಕಾಕ್ಷನ್) ನೆನೆಸಿಡಿ. ಇದನ್ನು ಬೆಳಿಗ್ಗೆ ಚೆನ್ನಾಗಿ ಕುದಿಸಿ ಫಿಲ್ಟರ್ ಮಾಡಿ ಸೇವಿಸಿ.

    MORE
    GALLERIES

  • 78

    Giloy Benefits: ಡಯಾಬಿಟಿಸ್​ನಿಂದ ತೂಕ ಇಳಿಕೆಯವರೆಗೆ ಗಿಲೋಯ್ ಪ್ರಯೋಜನಗಳಿವು

    ಗಿಲೋಯ್ ಪೌಡರ್ ನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಸೇವನೆ ಮಾಡಬಹುದು. ನೀವು ಒಂದು ಟೀ ಚಮಚ ಗಿಲೋಯ್ ಪುಡಿಯನ್ನು ಬೆಚ್ಚಗಿನ ನೀರು ಮತ್ತು ಜೇನುತುಪ್ಪದ ಜೊತೆ ಸೇವನೆ ಮಾಡಿ. ದಿನಕ್ಕೆ ಊಟದ ಮೊದಲು ಎರಡು ಹೊತ್ತು ಸೇವನೆ ಮಾಡಿದರೆ ಸಿಗುತ್ತದೆ.

    MORE
    GALLERIES

  • 88

    Giloy Benefits: ಡಯಾಬಿಟಿಸ್​ನಿಂದ ತೂಕ ಇಳಿಕೆಯವರೆಗೆ ಗಿಲೋಯ್ ಪ್ರಯೋಜನಗಳಿವು

    ಗಿಲೋಯ್ ರಸವನ್ನೂ ಸಹ ಸೇವನೆ ಮಾಡಬಹುದು. ಇದಕ್ಕಾಗಿ ನೀವು ಪ್ರತಿದಿನ ಬೆಳಿಗ್ಗೆ ಬೆಚ್ಚಗಿನ ನೀರಿನಲ್ಲಿ ಊಟಕ್ಕೆ 1 ಗಂಟೆ ಮೊದಲು ಗಿಲೋಯ್ ರಸ ಸೇವನೆ ಮಾಡಬಹುದು. ಇದು ಜೀರ್ಣಿಸಿಕೊಳ್ಳಲು ಭಾರ. ಹಾಗಾಗಿ ಉತ್ತಮ ಚಯಾಪಚಯ ಹೊಂದಿರುವವರು ಮಾತ್ರ ಸೇವಿಸಬೇಕು ಅಂತಾರೆ ತಜ್ಞರು.

    MORE
    GALLERIES