ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಾಣುಗಳನ್ನು ತೊಡೆದುಹಾಕಲು ಜನರು ಸಾಮಾನ್ಯವಾಗಿ ಪದಾರ್ಥಗಳನ್ನು ತೊಳೆದ ನಂತರ ತಿನ್ನಲು ಬಯಸುತ್ತಾರೆ. ಆದರೆ ಮೊಟ್ಟೆಗಳನ್ನು ತೊಳೆಯುವುದರಿಂದ ಅವು ಕೆಡುವ ಸಾಧ್ಯತೆ ಹೆಚ್ಚಿರುತ್ತದೆ. ತೊಳೆದ ಮೊಟ್ಟೆಗಳು ಕೋಣೆಯ ಉಷ್ಣಾಂಶದಲ್ಲಿ ಬೇಗನೆ ಹಾಳಾಗುತ್ತವೆ. ಅದಕ್ಕಾಗಿಯೇ ಮೊಟ್ಟೆಗಳನ್ನು ತೊಳೆದ ನಂತರ ಫ್ರಿಡ್ಜ್ನಲ್ಲಿ ಇಡುವುದು ಬಹಳ ಮುಖ್ಯ, ಅದು ದೀರ್ಘಕಾಲದವರೆಗೆ ಕೆಡದಂತೆ ತಡೆಯುತ್ತದೆ.