ಅನೇಕರು ಮೈ-ಕೈ ನೋವು ಎಂದು ಕಾರಣ ನೀಡಿ ಆಫೀಸಿಗೆ ರಜೆ ಹಾಕುತ್ತಾರೆ. ಆದರೆ ನಿಜವಾಗಿ ಎದುರಾಗುವ ಮೈ-ಕೈ ನೋವಿಗೆ ಹಲವು ಕಾರಣಗಳಿವೆ.
2/ 9
ನಿರ್ದಿಷ್ಟ ಸಮಯಕ್ಕಿಂತ ಹೆಚ್ಚು ಹೊತ್ತು ಕೆಲಸ ಮಾಡಿದರೆ ಮೈ-ಕೈ ನೋವು ಕಾಣಿಸಿಕೊಳ್ಳುತ್ತದೆ. ಅದಲ್ಲದೆ, ದೀರ್ಘ ಕಾಲದ ದೈಹಿಕ ಚಟುವಟಿಕೆಯಿಂದಾಗಿ ದೇಹದಲ್ಲಿ ನೋವು ಕಾಣಿಸುತ್ತದೆ.
3/ 9
ಕೆಲವೊಮ್ಮ ಮೈ-ಕೈ ನೋವಿನಿಂದ ಜ್ವರ ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲಿ ಅನೇಕರು ಔಷಧಿಯನ್ನು ಸೇವಿಸುತ್ತಾರೆ. ಆದರೆ ಮೈ-ಕೈ ನೋವಾದಾಗ ಔಷಧಿ ಸೇವಿಸುವ ಬದಲು ಮನೆಮದ್ದು ಸೇವಿಸಿ ನೋವು ನಿವಾರಿಸಿಕೊಳ್ಳಬಹುದು.
4/ 9
ಮೈ-ಕೈ ನೋವು ಕಾಣಿಸಿಕೊಂಡಾಗ ಉಪ್ಪು ನೀರಿನ ಶಾಖವನ್ನು ಕೊಡಬೇಕು. ಉಪ್ಪುನೀರು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಸ್ನಾಯುನೋವನ್ನು ಕಡಿಮೆ ಮಾಡುತ್ತದೆ.
5/ 9
ಒಂದು ನೀರಿನ ಪಾತ್ರಕ್ಕೆ ಉಪ್ಪು ಸುರಿದು ದಪ್ಪನೆಯ ಬಟ್ಟೆಯಿಂದ ಉಪ್ಪುನೀರಿಗೆ ಅದ್ದಿ ದೇಹದ ಭಾಗಕ್ಕೆ ಮುಟ್ಟಿಸಿದರೆ ನೋವು ಬೇಗ ಕಡಿಮೆಯಾಗುತ್ತದೆ.
6/ 9
ಮಸಾಜ್ ಮಾಡುವ ಮೂಲಕ ಮೈ-ಕೈ ನೋವು ನಿವಾರಣೆ ಮಾಡಬಹುದು. ಸರಿಯಾದ ಕ್ರಮದಲ್ಲಿ ಮಸಾಜ್ ಮಾಡಿದರೆ ಕೊಂಚ ಆರಾಮದಾಯಕ ಅನಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.
7/ 9
ಮೈ-ಕೈಗೆ ಎಣ್ಣೆ ಹಚ್ಚಿ ಮಸಾಜ್ ಮಾಡಬೇಕು ನಂತರ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಮೈ-ಕೈ ನೋವು ನಿವಾರಣೆ ಆಗುತ್ತದೆ.
8/ 9
ಶಾಖ ನೀಡುವ ಮೂಲಕ ಮೈ-ಕೈ ನೋವನ್ನು ಕಡಿಮೆ ಮಾಡಬಹುದಾಗಿದೆ. ಹೀಟ್ ಪ್ಯಾಡ್ಗಳಿಗೆ ಬಿಸಿ ನೀರನ್ನು ತುಂಬಿಸಿ ನಂತರ ನೋವಿರುವ ಭಾಗಗಳಿಗೆ ಮುಟ್ಟಿಸುತ್ತಾ ಹೋಗಬೇಕು.
9/ 9
ನೋವಿನ ಭಾಗಗಳಿಗೆ ಬಿಸಿ ನೀರಿನ್ನು ತಾಗಿಸುತ್ತಾ ಹೋದಂತೆ ಮೈ-ಕೈ ನೋವು ಬೇಗನೆ ನಿವಾರಣೆಯಾಗುತ್ತದೆ.
First published:
19
ಮೈ-ಕೈ ನೋವು ಹೋಗಲಾಡಿಸಲು ಸುಲಭವಾದ ಪರಿಹಾರಗಳಿವು!