Low BP Remedy: ಲೋ ಬಿಪಿ ಸಮಸ್ಯೆ ಕೂಡ ಅಪಾಯಕಾರಿ, ನಿಮ್ಮ ಅಡುಗೆ ಮನೆಯಲ್ಲಿದೆ ಪರಿಹಾರ
Home Remedies For Low BP: ಬಿಪಿ ಹೆಚ್ಚಿದ್ದರೆ ಅದು ಆರೋಗ್ಯಕ್ಕೆ ಅಪಾಯ ಎಂದು ನಾವು ಕೇಳಿರುತ್ತೇವೆ. ಆದರೆ ಬಿಪಿ ಕಡಿಮೆ ಇದ್ದರೆ ಸಹ ಅದು ಸಮಸ್ಯೆ ಎಂಬುದನ್ನ ಮರೆತುಬಿಡುತ್ತೇವೆ. ಹಲವಾರು ಜನರು ಈ ಲೋ ಬಿಪಿ ಸಮಸ್ಯೆಯಿಂದ ಪರದಾಡುತ್ತಿದ್ದರೆ, ಅದಕ್ಕೆ ಔಷಧಿಗಳನ್ನು ಸಹ ತೆಗೆದುಕೊಳ್ಳುತ್ತಿದ್ದಾರೆ. ಈ ಔಷಧಿಗಳ ಜೊತೆಗೆ ಕೆಲ ಮನೆಮದ್ದುಗಳು ಸಹಾಯ ಮಾಡುತ್ತದೆ. ಆ ಮನೆಮದ್ದುಗಳು ಯಾವುವು ಎಂಬುದು ಇಲ್ಲಿದೆ.
ಲೋ ಬಿಪಿ ಸಮಸ್ಯೆ ಇದ್ದರೆ ಈ ಸಮಯದಲ್ಲಿ ಆಯಾಸ, ತಲೆಸುತ್ತಿವಿಕೆ ಹೀಗೆ ಅನೇಕ ತೊಂದರೆಗಳು ಉಂಟಾಗುತ್ತದೆ. ಇದಕ್ಕೆ ಔಷಧಿಗಳಿದೆ, ಆದರೆ ಮನೆಯಲ್ಲಿ ಸುಲಭವಾಗಿ ಪರಿಹಾರ ಪಡೆಯಲು ಈ ಕೆಳಗಿನ ವಸ್ತುಗಳನ್ನು ಬಳಸಿ.
2/ 8
ಆಗಾಗ ಸಣ್ಣ ಪ್ರಮಾಣದಲ್ಲಿ ತಿನ್ನಿ: ನಿಮಗೆ ಲೋ ಬಿಪಿ ಸಮಸ್ಯೆ ಇದ್ದರೆ ನಿಮ್ಮ ಊಟವನ್ನು 6 ಭಾಗವಾಗಿ ವಿಂಗಡಿಸಿ. ದಿನದಲ್ಲಿ 6 ಬಾರಿ ಸಣ್ಣ ಪ್ರಮಾಣದಲ್ಲಿ ತಿನ್ನುವುದು ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
3/ 8
ಉಪ್ಪು ತಿನ್ನಿ: ಹೇಗೆ ಹೈ ಬಿಪಿ ಸಮಸ್ಯೆ ಇರುವವರು ಅತಿಯಾಗಿ ಉಪ್ಪು ಸೇವನೆ ಮಾಡಬಾರದೋ, ಆದೇ ರೀತಿ ಲೋ ಬಿಪಿ ಇರುವವರು ಸ್ವಲ್ಪ ಉಪ್ಪಿನ ಸೇವನೆಯನ್ನು ಹೆಚ್ಚು ಮಾಡಬೇಕು. ಆಗ ಲೋ ಬಿಪಿ ಸಮಸ್ಯೆ ನಿಯಂತ್ರಣದಲ್ಲಿ ಇರುತ್ತದೆ.
4/ 8
ಲಿಕ್ವಿಡ್ ಸೇವನೆ ಹೆಚ್ಚು ಮಾಡಿ: ನಮ್ಮ ದೇಹಕ್ಕೆ ನೀರಿನ ಅಂಶ ಬಹಳ ಅಗತ್ಯ. ಹಾಗಾಗಿ ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯಿರಿ. ಜೊತೆಗೆ ಬೇರೆ ಲಿಕ್ವಿಡ್ ಪದಾರ್ಥಗಳನ್ನು ಸಹ ಸೇವಿಸಿ.
5/ 8
ಕಾಫಿ: ಕಾಫಿಯಲ್ಲಿರುವ ಕೆಫೀನ್ ಅಂಶಗಳು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಂದರೆ ಇದು ಕೇವಲ ತಾತ್ಕಾಲಿಕವಾಗಿ ಹೆಚ್ಚು ಮಾಡುತ್ತದೆ. ನಿಮಗೆ ಲೋ ಬಿಪಿ ಸಮಸ್ಯೆ ಇದ್ದರೆ ಕಾಫಿ ಸೇವನೆ ಉತ್ತಮ.
6/ 8
ತುಳಸಿ ಎಲೆ: ತುಳಸಿ ಎಲೆಯಲ್ಲಿರುವ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ವಿಟಮಿನ್ ಸಿ ನಿಮ್ಮ ಲೋ ಬಿಪಿ ಸಮಸ್ಯೆಗೆ ಪರಿಹಾರ ನೀಡುತ್ತದೆ. ಜೊತೆಗೆ ಇದು ಕೊಲೆಸ್ಟಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
7/ 8
ಬಾದಾಮಿ ಹಾಲು: ಒಮೆಗಾ -3 ಫ್ಯಾಟಿ ಆ್ಯಸಿಡ್ಗಳನ್ನು ಈ ಬಾದಾಮಿ ಹೊಂದಿದ್ದು, ಕೊಬ್ಬು ಕರಗಿಸಲು ಹಾಗೂ ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇವುಗಳನ್ನು ನೀವು ವಿವಿಧ ಆಹಾರದಲ್ಲಿ ಸೇರಿಸಿ ಸೇವಿಸಬಹುದು.
8/ 8
ದ್ರಾಕ್ಷಿ: ಈ ದ್ರಾಕ್ಷಿ ಹಣ್ಣನ್ನು ರಾತ್ರಿ ಹಾಲಿನಲ್ಲಿ ನೆನೆಸಿಡಿ, ಬೆಳಗ್ಗೆ ಅದನ್ನು ತಿನ್ನಿ. ಹೀಗೆ ಪ್ರತಿದಿನ ಇದನ್ನು ಸೇವನೆ ಮಾಡುವುದು ಲೋ ಬಿಪಿ ನಿಯಂತ್ರಿಸಲು ಸಹಾಯ ಮಾಡುತ್ತದೆ.