ಪ್ರತಿರಕ್ಷಣಾ ವ್ಯವಸ್ಥೆಗೆ ಕಲ್ಲಂಗಡಿ ಬೀಜಗಳು ಸಹಾಯಕಾರಿಯಾಗಿವೆ: ನಮ್ಮ ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಗೆ ಕಲ್ಲಂಗಡಿ ಬೀಜಗಳು ಸಹಾಯಕಾರಿಯಾಗಿವೆ. ಕಲ್ಲಂಗಡಿ ಬೀಜಗಳಲ್ಲಿ ಜಿಂಕ್ ಅಂಶವು ಹೆಚ್ಚಿರುವ ಕಾರಣ ನಮ್ಮ ದೇಹದ ಇಮ್ಯುನಿಟಿಯನ್ನು ಕಾಪಾಡಿಕೊಳ್ಳುವಲ್ಲಿ ಇವು ಸಹಾಯಕಾರಿಯಾಗಿವೆ. ಈ ಕಲ್ಲಂಗಡಿ ಬೀಜಗಳು ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ.
ಕಲ್ಲಂಗಡಿ ಬೀಜಗಳಲ್ಲಿ ವಿಟಮಿನ್‌ಗಳು, ನಾರಿನಾಂಶಗಳು, ಕೊಬ್ಬುಗಳು ಮತ್ತು ಪ್ರೋಟೀನ್ ಅಂಶಗಳು ಉತ್ತಮವಾಗಿರುವುದರಿಂದ ಅವುಗಳನ್ನು ನೀವು ನಿಯಮಿತವಾಗಿ ಸೇವಿಸಬೇಕು ಎಂದು ಬಿಶ್ಟ್ ಹೇಳುತ್ತಾರೆ. ಆದ್ದರಿಂದ ದೈನಂದಿನ ಬಳಕೆಗಾಗಿ ಸುಮಾರು 30 ಗ್ರಾಂ ಅಥವಾ ಒಂದು ಕಪ್ ಕಲ್ಲಂಗಡಿ ಬೀಜಗಳ ಮೂರನೇ ಒಂದು ಭಾಗದಷ್ಟು ಬೀಜಗಳನ್ನು ಸೇವಿಸಬಹುದು. ಹುರಿದ ಅಥವಾ ಮೊಳಕೆಯೊಡೆದ ಕಲ್ಲಂಗಡಿ ಬೀಜಗಳು ಆರೋಗ್ಯಕರವಾಗಿರುತ್ತವೆ ಏಕೆಂದರೆ ಅವುಗಳು ಜೀರ್ಣಿಸಿಕೊಳ್ಳಲು ಸುಲಭವಾಗಿರುತ್ತವೆ ಮತ್ತು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತವೆ.