ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಸಿಗುವ ಈ ಹಣ್ಣು ತಪ್ಪದೇ ಪ್ರತಿಯೊಬ್ಬರು ಕೂಡ ಸವಿಯುತ್ತಾರೆ. ಇನ್ನೂ ಮಾವಿನ ಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಉಪ್ಪು ಮತ್ತು ಮೆಣಸಿನ ಪುಡಿಯನ್ನು ಉದುರಿಸಿ ತಿನ್ನುವುದರಲ್ಲಿ ಸಿಗೋ ಖುಷಿಯೇ ಬೇರೆ. ಬಾಯಲ್ಲಿ ತುರಿಕೆ ಬಂದರೂ, ಹೊಟ್ಟೆ ಉರಿಯುತ್ತಿದ್ದರೂ ಪರವಾಗಿಲ್ಲ, ಜನ ಮಾವಿನ ಹಣ್ಣನ್ನು ತಿನ್ನುವುದನ್ನು ಮಾತ್ರ ಮಿಸ್ ಮಾಡುವುದಿಲ್ಲ.
ನಾಲಿಗೆಗೆ ರುಚಿ ನೀಡೋ ಮಾವಿನ ಹಣ್ಣನ್ನು ತಿನ್ನುವುದರಲ್ಲಿ ನಿಮಗೆ ಆನಂದವೇನೋ ಸಿಗುತ್ತದೆ. ಆದರೆ ಈ ರೀತಿ ಮಾವಿನ ಹಣ್ಣನ್ನು ತಿಂದರೆ ನಿಮ್ಮ ದೇಹದ ತೂಕ ಹೆಚ್ಚಾಗುತ್ತದೆ ಎಂಬ ಸತ್ಯ ನಿಮಗೆ ತಿಳಿದಿದ್ಯಾ? ಹೌದು, ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಮಾವಿನ ಹಣ್ಣಿನಿಂದ ದೂರವಿರುವುದು ಉತ್ತಮ. ಅದು ಏಕೆ ಅಂತೀರಾ? ಈ ಕುರಿತ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ.
ತಿಂಡಿಯಾಗಿ ತಿನ್ನಬಹುದು: ಕ್ಯಾಲೋರಿ ಹೆಚ್ಚಿರುವುದನ್ನು ನೋಡಿದರೆ ಭಯವಾಗುತ್ತದೆ, ಮಾವಿನ ಹಣ್ಣು ತಿನ್ನಬಾರದೇ? ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಬಹುದು. ಖಂಡಿತ ನೀವು ತಿನ್ನಬಹುದು. ನಿಮ್ಮ ಸಾಮಾನ್ಯ ತಿಂಡಿಗಳನ್ನು ಮಾವಿನ ಹಣ್ಣುಗಳೊಂದಿಗೆ ಬದಲಾಯಿಸಬಹುದು. ವಿಶೇಷವಾಗಿ ವ್ಯಾಯಾಮದ ನಂತರ, ನೀವು ದೇಹಕ್ಕೆ ಅಗತ್ಯವಾದ ಉಲ್ಲಾಸವನ್ನು ಪಡೆಯಲು ಮಾವಿನ ಹಣ್ಣುಗಳನ್ನು ತೆಗೆದುಕೊಳ್ಳಬಹುದು.
ಹಣ್ಣಾಗಿ ತಿನ್ನಿ: ಮಾವಿನ ಹಣ್ಣನ್ನು ಕೈಯಲ್ಲಿ ಹಿಡಿದು ಅದರ ರಸವನ್ನು ಸವಿಯುವುದೇ ಒಂದು ವಿಶಿಷ್ಟ ಅನುಭವ. ಆದರೆ ಇಂದು ಅನೇಕ ಮಂದಿ ಹೆಚ್ಚಿನ ಆರೋಗ್ಯಕ್ಕಾಗಿ ಮತ್ತು ಫ್ಯಾಷನ್ಗಾಗಿ ಮಾವಿನಹಣ್ಣನ್ನು ಜ್ಯೂಸ್ನಂತೆ ತಯಾರಿಸಿ ಕುಡಿಯುತ್ತಾರೆ. ಇದು ಫೈಬರ್ ನಷ್ಟಕ್ಕೆ ಕಾರಣವಾಗುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ತ್ವರಿತ ಏರಿಕೆಯಾಗುತ್ತದೆ. ಆದ್ದರಿಂದ, ಹಣ್ಣನ್ನು ನೇರವಾಗಿ ತಿನ್ನಬೇಕು.