ಈ ಬಗ್ಗೆ ಡಾ.ಬ್ರಿಜೇಶ್ ಶುಕ್ಲಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅನೇಕ ಮಂದಿ ಮದ್ಯದ ಜೊತೆಗೆ ಜಂಕ್ ಫುಡ್ ಸೇವಿಸುತ್ತಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಪರಿಣಾಮವಾಗಿ, ಅವರು ವಿವಿಧ ರೀತಿಯ ದೇಹದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿಯೂ ಹೆಚ್ಚಾಗಿ ಯಕೃತ್ತಿನ ಸಮಸ್ಯೆಗಳಿಗೆ ಒಳಗಾಗಿದ್ದಾರೆ. ಯಕೃತ್ತು ಹಿಗ್ಗುವಿಕೆ, ಸ್ಥೂಲಕಾಯತೆ, ಉಸಿರಾಟದ ತೊಂದರೆ, ಎದೆ ಬಡಿತ, ಹೃದ್ರೋಗದ ಅಪಾಯ ಹೆಚ್ಚಾಗಿ ಕಂಡು ಬರಲಿದೆ.