ತೂಕ ಇಳಿಸಿಕೊಳ್ಳಲು ಬಯಸುವ ಜನರು ಆಹಾರದ ಜೊತೆಗೆ ಸಲಾಡ್ ತಿನ್ನುವುದು ಎಷ್ಟು ಮುಖ್ಯ ಎಂಬುವುದನ್ನು ತಿಳಿದುಕೊಳ್ಳಿ. ಏಕೆಂದರೆ ಆಹಾರವು ತೂಕದ ಹೆಚ್ಚು ಮೇಲೆ ಪರಿಣಾಮ ಬೀರುತ್ತದೆ. ಆಹಾರದಿಂದಲೇ ತೂಕ ಇಳಿಕೆಯಾಗಲು ಮತ್ತು ಹೆಚ್ಚಾಗಲು ಆರಂಭವಾಗುತ್ತದೆ. ಆಹಾರವಾಗಿ ಸರಿಯಾದ ಪದಾರ್ಥಗಳನ್ನು ಸೇವಿಸಿದರೆ ತೂಕವನ್ನು ಬೇಗ ಇಳಿಸಿಕೊಳ್ಳಬಹುದು ಮತ್ತು ಅತಿಯಾದ ಎಣ್ಣೆಯಿಂದ ಕರಿದ-ಹುರಿದ ಪದಾರ್ಥಗಳನ್ನು ತಿಂದರೆ ತೂಕ ಹೆಚ್ಚಳದ ಸಮಸ್ಯೆ ಎದುರಾಗುತ್ತದೆ.
ತರಕಾರಿಗಳು, ಹಣ್ಣುಗಳು, ಡ್ರೈ ಫ್ರೂಟ್ಸ್ ಮತ್ತು ಬೀಜಗಳನ್ನು ಮಿಶ್ರಣ ಮಾಡುವ ಮೂಲಕ ಸಲಾಡ್ಗಳನ್ನು ತಯಾರಿಸಬಹುದು. ಸಲಾಡ್ಗಳು ಪ್ರೋಟೀನ್ನಲ್ಲಿ ಸಮೃದ್ಧವಾಗಿವೆ ಮತ್ತು ಅವುಗಳಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಅಲ್ಲದೇ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ನಾರಿನಂಶ ಹೇರಳವಾಗಿರುವುದರಿಂದ ಹೊಟ್ಟೆ ತುಂಬಾ ಹೊತ್ತು ತುಂಬಿ ಆಹಾರ ಸೇವನೆ ಕಡಿಮೆ ಮಾಡುತ್ತದೆ. ಈ ಸಲಾಡ್ಗಳ ಪರಿಣಾಮವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಕಾಬೂಲ್ ಕಡಲೆ ಸಲಾಡ್: ನೀವು ಕಾಬೂಲ್ ಕಡಲೆ ಮತ್ತು ಅನ್ನವನ್ನು ಬಹಳ ರುಚಿಯಾಗಿದೆ ಎಂದು ತಿನ್ನುತ್ತೀರಿ. ಕಾಬೂಲ್ ಕಡಲೆ ಸಲಾಡ್ ಮಾಡುವುದು ಹೇಗೆ ಎಂದು ಮೊದಲು ತಿಳಿದುಕೊಳ್ಳಿ. ಈ ಸಲಾಡ್ ಮಾಡಲು, 2 ಕಪ್ ಕಡಲೆಯನ್ನು ನೆನೆಸಿ, ನಂತರ ಅವುಗಳನ್ನು ಕುದಿಸಿ ಮತ್ತು ಫಿಲ್ಟರ್ ಮಾಡಿ, ದೊಡ್ಡ ಪಾತ್ರೆಯಲ್ಲಿ ಹಾಕಿಕೊಳ್ಳಿ. ಅದರಲ್ಲಿ ಮೂರು-ನಾಲ್ಕನೇ ಕಪ್ ಟೊಮೆಟೊ ಮತ್ತು ಒಂದು ಕಪ್ ಸೌತೆಕಾಯಿಯನ್ನು ಕತ್ತರಿಸಿ ಹಾಕಿ. ಈಗ ಮೂಕ್ಕಾಲು ಕಪ್ ಹಸಿರು ಈರುಳ್ಳಿ, ಅರ್ಧ ಕಪ್ ಪುದೀನ ಎಲೆಗಳು ಮತ್ತು ಅರ್ಧ ಕಪ್ ಕೊತ್ತಂಬರಿ ಸೊಪ್ಪುಗಳನ್ನು ಕತ್ತರಿಸಿ ಬ್ಲೆಂಡರ್ನಲ್ಲಿ ಪುಡಿಮಾಡಿ. ಎಲ್ಲಾ ಪದಾರ್ಥಗಳನ್ನು ದೊಡ್ಡ ಬಟ್ಟಲಿನಲ್ಲಿ ಹಾಕಿ ಮಿಶ್ರಣ ಮಾಡಿ. ಈಗ ನಿಮ್ಮ ಸಲಾಡ್ ಸವಿಯಲು ಸಿದ್ಧವಾಗಿದೆ.
ಎಗ್ ಸಲಾಡ್: ಮೊಟ್ಟೆಗಳು ಪ್ರೋಟೀನ್ನ ಉತ್ತಮ ಮೂಲವಾಗಿದೆ ಮತ್ತು ಕಡಿಮೆ ಕ್ಯಾಲೋರಿಗಳನ್ನು ಸಹ ಹೊಂದಿದೆ. ತೂಕ ನಷ್ಟಕ್ಕೆ ಈ ಸಲಾಡ್ ತಿನ್ನಬಹುದು. ಎಗ್ ಸಲಾಡ್ ಮಾಡಲು 4 ಬೇಯಿಸಿದ ಮೊಟ್ಟೆಗಳನ್ನು ತೆಗೆದುಕೊಳ್ಳಿ. 4 ಮಧ್ಯಮ ಗಾತ್ರದ ಟೊಮ್ಯಾಟೊ, 2 ಈರುಳ್ಳಿ ಮತ್ತು 3 ಬೆಳ್ಳುಳ್ಳಿ ಎಸಳುಗಳನ್ನು ಸಹ ತೆಗೆದುಕೊಳ್ಳಿ. ಎಲ್ಲಾ ವಸ್ತುಗಳನ್ನು ಕತ್ತರಿಸಿ ದೊಡ್ಡ ಬಟ್ಟಲಿನಲ್ಲಿ ಹಾಕಿ. ಒಂದು ಚಮಚ ಆಲಿವ್ ಎಣ್ಣೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕರಿಮೆಣಸು ಮಿಶ್ರಣ ಮಾಡಿ. ಇದನ್ನು ಸಲಾಡ್ನೊಂದಿಗೆ ಮಿಕ್ಸ್ ಮಾಡಿ. ಇಷ್ಟವಿದ್ದರೆ ರುಚಿ ಹೆಚ್ಚಿಸಲು ಬಿಳಿ ಎಳ್ಳನ್ನು ಕೂಡ ಸೇರಿಸಬಹುದು.
ಫ್ರೂಟ್ ಸಲಾಡ್: ಫೈಬರ್, ಪ್ರೊಟೀನ್ ಮತ್ತು ವಿಟಮಿನ್ ಸೇರಿದಂತೆ ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಫ್ರೂಟ್ ಸಲಾಡ್ ತೂಕ ನಷ್ಟದ ಮೇಲೆ ಉತ್ತಮ ಪರಿಣಾಮವನ್ನುಬೀರುತ್ತದೆ. ಇದನ್ನು ಮಾಡಲು, ಒಂದು ಕಪ್ ಸಿಪ್ಪೆ ತೆಗೆದು ಕತ್ತರಿಸಿದ ಕಿವಿ ಫ್ರೂಟ್ ಅನ್ನು ಒಂದು ಪಾತ್ರೆಯಲ್ಲಿ ಹಾಕಿ. ಅದಕ್ಕೆ ಅರ್ಧ ಕೆಂಪು ಸೇಬು, 6 ಸ್ಟ್ರಾಬೆರಿ, ಒಂದು ಕಿತ್ತಳೆ ಮತ್ತು ಅರ್ಧ ಕಪ್ ವಾಲ್ನಟ್ಗಳನ್ನು ಕತ್ತರಿಸಿ ಮಿಶ್ರಣ ಮಾಡಿ. ಬಳಿಕ ಒಂದೂವರೆ ಕಪ್ ಮೊಸರನ್ನು ತೆಗೆದುಕೊಂಡು ಅದರಲ್ಲಿ 2 ಚಮಚ ಜೇನುತುಪ್ಪವನ್ನು ಬೆರೆಸಿ ಈಗ ಬಟ್ಟಲಿಗೆ ಹಾಕಿ. ನಂತರ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿದರೆ, ಫ್ರೂಟ್ ಸಲಾಡ್ ಸವಿಯಲು ಸಿದ್ಧ.