ಸ್ಲಿಮ್ ಮತ್ತು ಫಿಟ್ ಆಗಿ ಕಾಣಲು ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ? ತೂಕವನ್ನು ಹೆಚ್ಚಿಸಿಕೊಳ್ಳುವುದು ಬಹಳ ಸುಲಭ, ಆದರೆ ತೂಕವನ್ನು ಕಳೆದುಕೊಳ್ಳುವುದು ತುಂಬಾ ಕಷ್ಟ, ಆದರೆ ನಿಯಮಿತವಾಗಿ ಆಹಾರ ಕ್ರಮ ಮತ್ತು ವ್ಯಾಯಾಮ ಮಾಡುವುದರ ಮೂಲಕ ತೂಕವನ್ನು ಕಳೆದುಕೊಳ್ಳಬಹುದು. ಆದರೆ ನೀವು ಬೇಗನೆ ತೂಕ ಇಳಿಸಿಕೊಳ್ಳಲು ಬಯಸಿದರೆ, ಈ ಎರಡು ವಿಷಯಗಳನ್ನು ಮಾತ್ರ ಫಾಲೋ ಮಾಡಿದರೆ ಸಾಲದು. ಕೆಲವು ಸುಲಭವಾದ ಕೆಲಸವನ್ನು ಮಾಡುವ ಮೂಲಕ ನೀವು ಖಂಡಿತವಾಗಿಯೂ ನಿಮ್ಮ ಈ ಕನಸನ್ನು ನನಸಾಗಿಸಿ ಕೊಳ್ಳಬಹುದು.
ತೂಕವನ್ನು ಕಳೆದುಕೊಳ್ಳುವ ಬಗ್ಗೆ ಹೆಚ್ಚು ಒತ್ತಡ ಹೇರಬೇಡಿ: ನಾವು ಯಾವುದನ್ನಾದರೂ ಹೆಚ್ಚು ಯೋಚಿಸುತ್ತಿದ್ದರೆ, ಅದು ನಮ್ಮನ್ನು ಹೆಚ್ಚು ಕಾಡುತ್ತದೆ ಮತ್ತು ಅದರ ಹಿಮ್ಮುಖ ಪರಿಣಾಮವನ್ನು ತೋರಿಸಲು ಪ್ರಾರಂಭಿಸುತ್ತದೆ. ಆದ್ದರಿಂದ ನೀವು ತೂಕವನ್ನು ಕಳೆದುಕೊಳ್ಳಲು ಬಯಸಿದರೆ, ಮೊದಲು ಹಗಲು ರಾತ್ರಿ ಅದರ ಬಗ್ಗೆ ಯೋಚಿಸುವುದು ಮತ್ತು ಚಿಂತಿಸುವುದನ್ನು ನಿಲ್ಲಿಸಿ. ಏಕೆಂದರೆ ದೈಹಿಕ ಹಾಗೂ ಮಾನಸಿಕ ಅಂಶಗಳು ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ನಿಮ್ಮನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ: ಒಂದು ವಾರದಲ್ಲಿಯೇ ನೀವು ತೂಕವನ್ನು ಇಳಿಸಿಕೊಳ್ಳಲು ಇಷ್ಟಪಟ್ಟರೆ, ನೀವು ಅನೇಕ ಸಂದರ್ಭಗಳಲ್ಲಿ ನಿಮ್ಮನ್ನು ನಿಯಂತ್ರಿಸಿಕೊಳ್ಳಬೇಕಾಗುತ್ತದೆ. ಅದರಲ್ಲಿಯೂ ವಿಶೇಷವಾಗಿ ಜಂಕ್ ಫುಡ್, ಸ್ವೀಟ್ಸ್ ಮತ್ತು ತಿಂಡಿ ತಿನ್ನುವಾಗ ನಿಮ್ಮನ್ನು ನೀವು ನಿಯಂತ್ರಣದಲ್ಲಿಟ್ಟುಕೊಳ್ಳುವುದರಿಂದ ತೂಕವನ್ನು ಇಳಿಸಿಕೊಳ್ಳಬಹುದು. ಹೊರಗೆ ಇವುಗಳನ್ನು ತಿನ್ನುವ ಬದಲು ನೀವು ಎಲ್ಲಿಗೆ ಹೋದರೂ, ಮನೆಯ ಊಟವನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸಿ. ಅಲ್ಲದೇ ಹಸಿವಾದಾಗ ನಟ್ಸ್, ಡ್ರೈ ಫ್ರೂಟ್ಸ್, ಹಣ್ಣುಗಳು, ಮೊಳಕೆಕಾಳು ಇತ್ಯಾದಿಗಳನ್ನು ತಿನ್ನಿ