Kitchen Hacks: ಪಾಸ್ತಾ ಬೇಯಿಸಿದ ನೀರು ಬಿಸಾಡಬೇಡಿ, ಹೀಗೆ ಯೂಸ್ ಮಾಡ್ಬೋದು ನೋಡಿ
Pasta Water Re Use: ಸಾಮಾನ್ಯವಾಗಿ ಪಾಸ್ತಾ ಬೇಯಿಸಲು ಹೆಚ್ಚು ನೀರು ಬಳಕೆ ಮಾಡಲಾಗುತ್ತದೆ, ಆದರೆ ಅದರಲ್ಲಿ ಉಳಿದ ನೀರನ್ನು ಬಿಸಾಡಲಾಗುತ್ತದೆ. ಹಲವಾರು ಜನರಿಗೆ ಈ ಪಾಸ್ತಾ ನೀರಿನ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ. ಹೌದು, ಪಾಸ್ತಾ ಬೇಯಿಸಿದ ನೀರಿನಿಂದ ಏನೆಲ್ಲಾ ಪ್ರಯೋಜನವಿದೆ ಎಂಬುದು ಇಲ್ಲಿದೆ.
ಪಾಸ್ತಾವನ್ನು ಬಹುತೇಕ ಎಲ್ಲರ ಮನೆಗಳಲ್ಲಿ ಮಾಡುತ್ತಾರೆ. ಮಕ್ಕಳಿಗೆ ಪಾಸ್ತಾ ಎಂದರೆ ಬಹಳ ಇಷ್ಟ. ಅದರಲ್ಲೂ ಗಡಿ ಬಿಡಿಯ ಜೀವನಶೈಲಿಯಲ್ಲಿ ಪಾಸ್ತಾ ಹೆಚ್ಚು ಸಹಾಯಕ ಎನ್ನಬಹುದು.
2/ 9
ಪಾಸ್ತಾ ನೀರನ್ನು ಬಳಸಲು ಸುಲಭವಾದ ಮತ್ತು ಬುದ್ಧಿವಂತ ಮಾರ್ಗ ಎಂದರೆ ಗಟ್ಟಿಯಾದ ಸಾಸ್ಅನ್ನು ಸರಿ ಮಾಡಲು ಬಳಸುವುದು. ನಿಮ್ಮ ಆಯ್ಕೆಯ ಕೆಂಪು ಅಥವಾ ಬಿಳಿ ಸಾಸ್ಗೆ ಪಾಸ್ತಾ ನೀರನ್ನು ಸೇರಿಸಿ. ಪಾಸ್ತಾ ನೀರಿನಲ್ಲಿನ ಪಿಷ್ಟ ಮತ್ತು ಉಪ್ಪು ಇರುವುದರಿಂದ ಸಾಸ್ ಮೆತ್ತಗಾಗುತ್ತದೆ.
3/ 9
ತರಕಾರಿಗಳನ್ನು ಬೇಯಿಸಲು ಪಾಸ್ತಾ ನೀರನ್ನು ನೀವು ಸುಲಭವಾಗಿ ಮರುಬಳಕೆ ಮಾಡಬಹುದು. ಹೆಚ್ಚು ಕೆಲಸ ಮಾಡದೆ ನೀರನ್ನು ಸಂರಕ್ಷಿಸಲು ಇದು ಸರಳ ಮಾರ್ಗವಾಗಿದೆ. ಮತ್ತೊಂದು ಮಿತವ್ಯಯದ ಉಪಾಯವೆಂದರೆ ಪಾಸ್ತಾವನ್ನು ಕುದಿಸುವಾಗ ತರಕಾರಿಗಳನ್ನು ಸರಳವಾಗಿ ಸ್ಟೀಮ್ ಮಾಡಬಹುದು.
4/ 9
ಪಾಸ್ತಾ ಬೇಯಿಸಿದ ನೀರನ್ನು ಸ್ವಲ್ಪ ಬಿಸಿ ಮಾಡಿ, ಒಂದು ಬಕೆಟ್ಗೆ ಸುರಿದುಕೊಂಡು ನಿಮ್ಮ ಎರಡು ಪಾದಗಳನ್ನು ಅದರಲ್ಲಿ 10- 15 ನಿಮಿಷಗಳವರೆಗೆ ಅದ್ದಿ ಇಟ್ಟುಕೊಂಡರೆ ನಿಮ್ಮ ಕಾಲು ನೋವು, ಊತ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
5/ 9
ಪಾಸ್ತಾ ಬೇಯಿಸಿದ ನೀರನ್ನು ಯಾವುದೇ ಆಹಾರ ಪದಾರ್ಥಗಳಿಗೆ ಸೇರಿಸಿದರೆ ಅದರ ರುಚಿ ಹೆಚ್ಚಾಗುತ್ತದೆ. ಹಾಗೆಯೇ ಅನ್ನ ಮಾಡುವಾಗ ಸಹ ಇದರ ನೀರನ್ನು ಹಾಕಿ ಬೇಯಿಸಿ.
6/ 9
ಚಪಾತಿ ಹಿಟ್ಟು ಕಲಸುವಾಗ ನೀರನ್ನು ಹಾಕುವುದು ಸಾಮಾನ್ಯ, ಆದರೆ ನೀವು ಸಹ ಚಪಾತಿ ಹಿಟ್ಟನ್ನು ಕಲಸುವಾಗ ಪಾಸ್ತಾ ಬೇಯಿಸಿದ ನೀರನ್ನು ಹಾಕಿದರೆ ಚಪಾತಿಯ ರುಚಿ ಹೆಚ್ಚಾಗುತ್ತದೆ.
7/ 9
ಗಿಡಗಳಿಗೆ ಪಾಸ್ತಾ ಬೇಯಿಸಿದ ನೀರನ್ನು, ಎರಡು ವಾರಕ್ಕೆ ಒಮ್ಮೆ ಗೊಬ್ಬರದ ರೂಪದಲ್ಲಿ ಹಾಕಬಹುದು. ಇದು ಗಿಡಗಳ ಬೆಳವಣಿಗೆಗೆ ಹೆಚ್ಚು ಸಹಾಯಕ. ಪೋಷಕಾಂಶಗಳು ಮತ್ತು ಅಧಿಕ ಪ್ರಮಾಣದ ವಿಟಮಿನ್ ಅಂಶಗಳು ಇರುವುದರಿಂದ ಗಿಡಗಳು ಸಮೃದ್ಧವಾಗಿ ಬೆಳೆಯುತ್ತದೆ.
8/ 9
ಇನ್ನು ಅನ್ನ ಬೇಯಿಸುವಾಗ ಪಾಸ್ತಾ ನೀರನ್ನು ಹಾಕುವಂತೆ, ಬೇಳೆಗಳನ್ನು ಬೇಯಿಸುವಾಗ ಸಹ ಹಾಕಬಹುದು. ಇದು ಬೇಳೆ ಬೇಗ ಬೇಯಲು ಸಹಾಯ ಮಾಡುವುದಲ್ಲದೇ, ಅದರ ರುಚಿಯನ್ನು ಸಹ ಹೆಚ್ಚಿಸುತ್ತದೆ.
9/ 9
ಈ ಎಲ್ಲಾದ್ದಕ್ಕಿಂತ ಮತ್ತೊಂದು ಮುಖ್ಯ ಅಂಧ ಎಂದರೆ ಸೂಪ್ ಮಾಡುವಾಗ ಪಾಸ್ತಾ ನೀರನ್ನು ಹಾಕಿ, ಇದು ಸೂಪ್ನ ರುಚಿಯನ್ನು ಹೆಚ್ಚಿಸುತ್ತದೆ.