Mouth Ulcers: ಈ ಮನೆಮದ್ದುಗಳನ್ನು ಬಳಸಿದ್ರೆ ಬಾಯಿಹುಣ್ಣು ಮಂಗಮಾಯವಾಗುತ್ತೆ
Home Remedies For Mouth Ulcers: ನಮ್ಮ ಆಹಾರದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸಹ ಬಾಯಿಹುಣ್ಣು ಕಾಣಿಸಿಕೊಳ್ಳುತ್ತದೆ. ಅದು ಹೆಚ್ಚು ನೋವು ಕಾಡುತ್ತದೆ. ಅದಕ್ಕೆ ಪರಿಹಾರ ನಮ್ಮ ಮನೆಯಲ್ಲಿದೆ. ಕೆಲ ಮನೆಮದ್ದುಗಳನ್ನು ಬಳಸಿ ನಾವು ಈ ಬಾಯಿಹುಣ್ಣಿಗೆ ಪರಿಹಾರ ಪಡೆಯಬಹುದು.
ಪೋಷಕಾಂಶಗಳ ಕೊರತೆ, ಪ್ರತಿರೋಧಕ ಶಕ್ತಿ ಕಡಿಮೆ ಇರುವುದು, ಅಲರ್ಜಿ, ಒತ್ತಡ ಮತ್ತು ಉರಿಯೂತದಿಂದಲೂ ಬಾಯಿಯಲ್ಲಿ ಹುಣ್ಣು ಬರಬಹುದು. ಹೊಟ್ಟೆಯ ಕೆಲವು ಸಮಸ್ಯೆಗಳಿಂದಲೂ ಬಾಯಿಯಲ್ಲಿ ಹುಣ್ಣು ಉಂಟಾಗಬಹುದು.
2/ 7
ಪರಿಶುದ್ಧ ತೆಂಗಿನ ಎಣ್ಣೆಯನ್ನು ಬಳಸಿ ಬಾಯಿ ಮುಕ್ಕಳಿಸಬೇಕು. ಬೆಳಗ್ಗೆ ಹಲ್ಲುಜ್ಜಿದ ಬಳಿಕ ಹೀಗೆ ಮಾಡುವುದು ಹೆಚ್ಚಿನ ಪ್ರಯೋಜನ ನೀಡುತ್ತದೆ. 10 ನಿಮಿಷ ಕಾಲ ಎಣ್ಣೆಯನ್ನು ಬಾಯಿಯಲ್ಲೇ ಇಟ್ಟುಕೊಂಡು ಅತ್ತಿಂದಿತ್ತ ತಿರುಗಿಸುವುದು ಬಾಯಿ ಹುಣ್ಣು ಹೋಗಲಾಡಿಸಲು ಸಹಕಾರಿ.
3/ 7
ವಿಟಮಿನ್ ಕೊರತೆಯಿಂದಾಗಿ ಬಾಯಿಯಲ್ಲಿ ಹುಣ್ಣು ಉಂಟಾಗುತ್ತದೆ. ಹಾಗಾಗಿ ಹಣ್ಣುಗಳನ್ನು ಹೆಚ್ಚು ಸೇವನೆ ಮಾಡಬೇಕು, ಇವುಗಳಲ್ಲಿ ಹೆಚ್ಚು ವಿಟಮಿನ್ ಇರುತ್ತದೆ. ಉದಾಹರಣೆಗೆ ವಿಟಮಿನ್ ಸಿ ಹೆಚ್ಚಿರುವ ಕಿತ್ತಳೆ ತಿನ್ನಬಹುದು.
4/ 7
ಕೆಲ ಸೋಂಕುಗಳ ಕಾರಣದಿಂದ ಬಾಯಿಹುಣ್ಣು ಸಮಸ್ಯೆ ಉಂಟಾಗಬಹುದು. ಅದಕ್ಕೆ ನೀವು 2 ತುಳಸಿ ಎಲೆಗಳನ್ನು ಜಗಿಯುವುದರಿಂದ ಬಾಯಿಹುಣ್ಣು ಬೇಗ ಶಮನವಾಗುತ್ತದೆ.
5/ 7
ಒಂದು ಚಮಚ ನೀರಿಗೆ ಸ್ವಲ್ಪ ಅರಿಶಿನ ಪುಡಿಯನ್ನು ಹಾಕಿ ಪೇಸ್ಟ್ ಮಾಡಿಕೊಂಡು ಹುಣ್ಣಿನ ಮೇಲೆ ಹಚ್ಚಿ. ಇದು ನಂಜುನಿರೋಧಕವಾಗಿರುವುದರಿಂದ ಸೋಂಕುಗಳನ್ನು ಹೋಗಲಾಡಿಸುತ್ತದೆ.
6/ 7
ಹೈಡ್ರೋಜನ್ ಪೆರಾಕ್ಸೈಡ್ ಬಳಸಿ ನೀವು ಬಾಯಿ ಮುಕ್ಕಳಿಸುವುದರಿಂದ ಸೋಂಕನ್ನು ನಾಶ ಮಾಡಿ, ಬಾಯಿ ಹುಣ್ಣಿಗೆ ಪರಿಹಾರ ನೀಡುತ್ತದೆ.
7/ 7
ಪ್ರತಿಯೊಂದು ಸಮಸ್ಯೆಗೂ ನಾವು ತಿನ್ನುವ ಆಹಾರವು ಪ್ರಮುಖ ಕಾರಣ ಹೀಗಾಗಿ ಪೋಷಕಾಂಶಗಳು ಇರುವಂತಹ ಸಮತೋಲಿತ ಆಹಾರ ಸೇವನೆ ಮಾಡಬೇಕು ಎಂದರೆ ಹಣ್ಣುಗಳು, ತರಕಾರಿಗಳನ್ನು ಹೆಚ್ಚು ತಿನ್ನಿ.