ಹಾಗಲಕಾಯಿ ಅಂತ ಹೇಳಿದ ಕೂಡಲೇ ಮೊದಲಿಗೆ ನೆನಪಿಗೆ ಬರೋದು ಕಹಿ ಅಂತ. ಅದಾದ ಮೇಲೆ ಇದರಿಂದಾಗುವ ಪ್ರಯೋಜನಗಳು ಹಲವಾರು. ಹಾಗಾದ್ರೆ ಈ ಹಾಗಲಕಾಯಿಯಲ್ಲಿ ಇರುವ ಕಹಿಯನ್ನು ಹೇಗೆ ತೆಗೆಯುವುದು ಅಂತ ಗೊತ್ತಾ?
2/ 9
ಮೊದಲಿಗೆ ಹಾಗಲಕಾಯಿಯ ಒಳಗೆ ಇರುವ ಬೀಜಗಳನ್ನು ತೆಗೆದುಹಾಕಿ. ಒಳಗಿನ ಪದರವನ್ನು ಚೆನ್ನಾಗಿ ವಾಶ್ ಮಾಡಿ. ಆಗ ಕಹಿ ಸ್ವಲ್ಪ ಹೋಗಿರುತ್ತದೆ.
3/ 9
ಅಡುಗೆ ಮಾಡುವ ಅರ್ಧ ಗಂಟೆ ಅಥವಾ ಒಂದು ಗಂಟೆಯ ಮೊದಲು ಹಾಗಲಕಾಯಿಯನ್ನು ಒಂದು ಕಪ್ ಮೊಸರಿನಲ್ಲಿ ನೆನೆಸಿಡಿ. ಆಗ ಕಹಿಯು ಕಡಿಮೆ ಆಗಿರುತ್ತದೆ.
4/ 9
ಹಾಗಲಕಾಯಿಯ ಸಿಪ್ಪೆಯನ್ನು ಸಂಪೂರ್ಣವಾಗಿ ಸುಲಿಯಬೇಕು. ಆಗ ಅದ್ರಲ್ಲಿರುವ ಕಹಿಯು ಕಡಿಮೆ ಆಗುತ್ತದೆ. ಬೇಕಾದಲ್ಲಿ ಆ ಸಿಪ್ಪೆಯಿಂದ ಜ್ಯೂಸ್ ಮಾಡಿಕೊಂಡು ಕುಡಿಯಬಹುದು.
5/ 9
10 ರಿಂದ 15 ನಿಮಿಷಗಳ ಕಾಲ ಉಪ್ಪು ನೀರಿನಲ್ಲಿ ಈ ಹಾಗಲಕಾಯಿಯನ್ನು ತುಂಡು ಮಾಡಿ ನೆನೆಸಿಡಿ. ಉಪ್ಪಿನಲ್ಲಿ ಸೋಡಿಯಂ ಅಂಶ ಇರೋದ್ರಿಂದ ಕಹಿಯನ್ನು ಈಸಿಯಾಗಿ ತೆಗೆದು ಹಾಕುತ್ತದೆ.
6/ 9
ಹಾಗಲಕಾಯಿಯನ್ನು ಸಣ್ಣದಾಗಿ ಕತ್ತರಿಸಿ, ಹುಣಸೆ ಹಣ್ಣಿನ ರಸದೊಂದಿಗೆ ನೆನೆಸಿಡಿ. ಇದರಲ್ಲಿ 10 ನಿಮಿಷಗಳ ಕಾಲ ನೆನೆಸಿಟ್ಟ ನಂತರ ಕಹಿಯು ಮಾಯವಾಗುತ್ತದೆ. ತದನಂತರ ನೀವು ಅಡುಗೆಯನ್ನು ಮಾಡಬಹುದು.
7/ 9
ನೀವು ಹಾಗಲಕಾಯಿಯ ಅಡುಗೆಯನ್ನು ಮಾಡುವಾಗ ಅದಕ್ಕೆ ಸಕ್ಕರೆ ಅಥವಾ ಬೆಲ್ಲವನ್ನು ಸೇರಿಸಬೇಕು. ಅದ್ರಲ್ಲಿರುವ ಕಹಿಯನ್ನು ಹೋಗಲಾಡಿಸಲು ಇದು ಉತ್ತಮ ಮಾರ್ಗ.
8/ 9
ಆಲೂಗಡ್ಡೆ, ನುಗ್ಗೆ ಕಾಯಿ, ಈರುಳ್ಳಿ ಹೀಗೆ ಹಲವಾರು ತರಕಾರಿಗಳ ಸಮ್ಮಿಶ್ರಣ ಮಾಡೋದ್ರಿಂದ ಹಾಗಲಕಾಯಿಯಲ್ಲಿ ಇರುವ ಕಹಿಯು ಗೊತ್ತಾಗೋದಿಲ್ಲ. ಹಾಗೆಯೇ ಇದು ಆರೋಗ್ಯಕ್ಕೂ ಕೂಡ ಉತ್ತಮ.
9/ 9
ನೀವು ಹಾಗಲಕಾಯಿ ತುಂಡುಗಳನ್ನು ಸಕ್ಕರೆ ಮತ್ತು ವಿನೆಗರ್ನಲ್ಲಿಯೂ ನೆನೆಸಿಡಬಹುದು. 10 ರಿಂದ 15 ನಿಮಿಷಗಳ ಕಾಲ ನೆನೆಸಿಟ್ಟ ನಂತರ ಹಾಗಲಕಾಯಿಯಲ್ಲಿರುವ ಕಹಿಯು ಅಟೋಮ್ಯಾಟಿಕ್ ಮಾಯವಾಗಿರುತ್ತದೆ.
First published:
19
Bitter Melon: ಹಾಗಲಕಾಯಿಯ ಕಹಿಯನ್ನು ಹೇಗೆ ತೆಗಿಯುತ್ತಾರೆ ಗೊತ್ತಾ? ಇಲ್ಲಿದೆ ಈಸಿ ಟ್ರಿಕ್ಸ್, ನೀವೂ ಟ್ರೈ ಮಾಡಿ