ಇದೀಗ ಈ ತಿಂಗಳಲ್ಲಿ ಯುಗಾದಿ ಆಚರಿಸಲಾಗುತ್ತದೆ. ಮುಖ್ಯವಾಗಿ ಕರ್ನಾಟಕದಲ್ಲಿ ಯುಗಾದಿಯನ್ನು ಜನ ಸಡಗರದಿಂದ ಆಚರಿಸುತ್ತಾರೆ. ಕನ್ನಡಿಗರ ದೃಷ್ಟಿಯಲ್ಲಿ ಯುಗಾದಿಯನ್ನು ಹೊಸ ವರ್ಷ ಎಂದು ಪರಿಗಣಿಸಲಾಗುತ್ತದೆ. ಸದ್ಯ ಈ ಬಾರಿ ಯುಗಾದಿಯಲ್ಲಿ ನಿಮ್ಮ ಮನೆಯ ಆವರಣದಲ್ಲಿ ಕೆಲವು ಸುಂದರವಾದ ರಂಗೋಲಿ ಡಿಸೈನ್ಗಳನ್ನು ಬಿಡಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿ. ನಿಮಗಾಗಿ ಕೆಲ ರಂಗೋಲಿ ಡಿಸೈನ್ ಟಿಪ್ಸ್ ಈ ಕೆಳಗಿದೆ ನೋಡಿ.
ಅಕ್ಕಿ ಹಿಟ್ಟಿನಿಂದ ರಂಗೋಲಿ ಮಾಡಿ: ದಕ್ಷಿಣ ಭಾರತದಲ್ಲಿ ಹೆಚ್ಚಿನವರು ಅಕ್ಕಿ ಹಿಟ್ಟಿನಿಂದ ರಂಗೋಲಿ ಮಾಡುತ್ತಾರೆ. ಅಲ್ಲಿ ರಂಗೋಲಿ ಬಿಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಅನೇಕ ಜನರು ಬೆಳಗ್ಗೆ ಬೇಗನೆ ಎದ್ದು ಮುಖ್ಯ ದ್ವಾರವನ್ನು ಸ್ವಚ್ಛಗೊಳಿಸಿ, ನಂತರ ಅಕ್ಕಿ ಹಿಟ್ಟಿನಿಂದ ರಂಗೋಲಿ ಬಿಡುತ್ತಾರೆ. ಈಗ ಯುಗಾದಿ ಹಬ್ಬ ಬರುವುದರಿಂದ ನೀವು ಕೂಡ ಮನೆಗಳ ಆವರಣದಲ್ಲಿ ರಂಗೋಲಿ ಹಾಕಲು ಬಯಸಿದರೆ, ಈ ಡಿಸೈನ್ಗಳನ್ನು ಟ್ರೈ ಮಾಡಬಹುದು.