ಈ ವಿಶ್ವದಲ್ಲಿ ನಾವು ವಾಸಿಸುವ ಏಕೈಕ ಸ್ಥಳವೆಂದರೆ ಭೂಮಿ. ಬೇರೆ ಏಳೆಂಟು ಗ್ರಹಗಳಿದ್ದರೂ ಯಾವುದೂ ನಮಗೆ ಅನುಕೂಲಕರವಾಗಿಲ್ಲ. ಅನಂತ ಬ್ರಹ್ಮಾಂಡದಲ್ಲಿ ಈ ರೀತಿಯ ಇನ್ನೊಂದು ಗ್ರಹವಿದೆಯೇ ಎಂಬುದು ಇನ್ನೂ ಖಚಿತವಾಗಿ ತಿಳಿದು ಬಂದಿಲ್ಲ. ಇದ್ದರೂ ಆ ಗ್ರಹಗಳಿಗೆ ಹೋಗುವುದು ಅಷ್ಟು ಸುಲಭವಲ್ಲ. ಇದೆಲ್ಲಾ ಆಗುವ ವಿಚಾರಗಳೇ ಅಲ್ಲ. ಆದ್ದರಿಂದ ಭೂಮಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಎಚ್ಚರಿಕೆಯಿಂದ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ ಪ್ರತಿ ವರ್ಷ ಏಪ್ರಿಲ್ 22ರಂದು ವಿಶ್ವ ಭೂಮಿ ದಿನವನ್ನು ಆಚರಿಸುತ್ತೇವೆ. ಈ ಮೂಲಕ ಭೂಮಿಯನ್ನು ಹೇಗೆ ರಕ್ಷಿಸಬೇಕು ಎಂಬುವುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.