Early Puberty: ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಋತುಮತಿಯಾಗಲು ಕಾರಣವೇನು? ತಜ್ಞರು ಏನ್ ಹೇಳ್ತಾರೆ?

ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಹುಡುಗಿಯರು ಋತುಮತಿಯಾಗುತ್ತಿದ್ದಾರೆ. ವಿಚಿತ್ರವೆನ್ನಿಸಿದರೂ ಇದು ಸತ್ಯ. ಮುಟ್ಟಿನ ಅವಧಿಯು ಪ್ರಾರಂಭವಾಗುವುದು 14 ರಿಂದ 16 ವರ್ಷಗಳ ನಡುವೆ ಇತ್ತು. ಆದರೆ ಈಗ ಋತುಮತಿಯಾಗುವುದು ಅತೀ ಬೇಗ ಅಂದ್ರೆ 9 ರಿಂದ 12 ವರ್ಷ ವಯಸ್ಸಿನಲ್ಲಿ ಪ್ರಾರಂಭವಾಗುತ್ತಿದೆ. ಇದು ಹಲವು ಸಮಸ್ಯೆ ಉಂಟು ಮಾಡುತ್ತಿದೆ.

First published:

  • 18

    Early Puberty: ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಋತುಮತಿಯಾಗಲು ಕಾರಣವೇನು? ತಜ್ಞರು ಏನ್ ಹೇಳ್ತಾರೆ?

    ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಎಂಟು ಮತ್ತು ಒಂಭತ್ತನೇ ವಯಸ್ಸಿನಲ್ಲೇ ಋತುಮತಿಯಾಗುತ್ತಿದ್ದಾರೆ. ಇದು ಹಲವು ಸಮಸ್ಯೆ ತಂದೊಡ್ಡುತ್ತಿದೆ ಅಂತಾರೆ ತಜ್ಞರು. ಹಿಗೆ ಅತೀ ಚಿಕ್ಕ ವಯಸ್ಸಿನಲ್ಲಿ ಋತುಮತಿಯಾಗುವುದರ ಹಿಂದೆ ಹಲವು ಕಾರಣಗಳೂ ಇವೆ ಅಂತಾರೆ ತಜ್ಞರು.

    MORE
    GALLERIES

  • 28

    Early Puberty: ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಋತುಮತಿಯಾಗಲು ಕಾರಣವೇನು? ತಜ್ಞರು ಏನ್ ಹೇಳ್ತಾರೆ?

    ಹುಡುಗಿಯರಲ್ಲಿ ಋತುಮತಿಯಾಗುವ ಆರಂಭಿಕ ಅವಧಿ ಯಾವೆಲ್ಲಾ ಸಮಸ್ಯೆ ತಂದೊಡ್ಡುತ್ತದೆ. ಈ ದಿನಗಳಲ್ಲಿ ಹುಡುಗಿಯರಲ್ಲಿ ಮೊದಲ ಪಿರಿಯಡ್ ಆರಂಭವನ್ನು ಮೆನಾರ್ಚೆ ಎಂದು ಕರೆಯುತ್ತಾರೆ. ಮೆನಾರ್ಚೆ ಸಾಮಾನ್ಯವಾಗಿ 10 ರಿಂದ 16 ವರ್ಷ ವಯಸ್ಸಿನ ನಡುವೆ ಸಂಭವಿಸುತ್ತದೆ. ಈ ದಿನಗಳಲ್ಲಿ ಋತುಚಕ್ರದ ಸರಾಸರಿ ವಯಸ್ಸು 12.4 ವರ್ಷಗಳು ಅಂತಾರೆ ತಜ್ಞರು.

    MORE
    GALLERIES

  • 38

    Early Puberty: ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಋತುಮತಿಯಾಗಲು ಕಾರಣವೇನು? ತಜ್ಞರು ಏನ್ ಹೇಳ್ತಾರೆ?

    ಹುಡುಗಿಯರಲ್ಲಿ ಮೆನಾರ್ಚೆ ಕ್ರಿಯೆಯು ಆನುವಂಶಿಕ ಕಾರಣಗಳಿಂದ ಉಂಟಾಗುವ ಸಾಧ್ಯತೆ ಹೆಚ್ಚು. ಹುಡುಗಿಯ ತಾಯಿ ಅಥವಾ ಅಜ್ಜಿಯು ಚಿಕ್ಕ ವಯಸ್ಸಿನಲ್ಲಿಯೇ ಋತುಮತಿಯಾಗಿದ್ದರೆ ಮೊಮ್ಮಕ್ಕಳು ಸಹ ಬೇಗ ಋತುಮತಿಯಾಗುತ್ತಾರೆ. ಇದರ ಜೊತೆಗೆ ಹಲವು ಅಂಶಗಳಿವೆ.

    MORE
    GALLERIES

  • 48

    Early Puberty: ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಋತುಮತಿಯಾಗಲು ಕಾರಣವೇನು? ತಜ್ಞರು ಏನ್ ಹೇಳ್ತಾರೆ?

    ಮೆನಾರ್ಚೆಗೆ ಮುಖ್ಯ ಕಾರಣ ಹೆಚ್ಚು ಟಿವಿ, ಮೊಬೈಲ್, ಕಂಪ್ಯೂಟರ್ ನೋಡುವುದು ಅಂತಾರೆ ತಜ್ಞರು. ಹುಡುಗಿಯರು ಚಿಕ್ಕ ವಯಸ್ಸಿನಲ್ಲಿ ಹೆಚ್ಚು ನಿರಂತರವಾಗಿ ಮೊಬೈಲ್, ಟಿವಿ, ಲ್ಯಾಪ್ಟಾಪ್ ಪರದೆ ನೋಡಿದರೆ ಮೆಲಟೋನಿನ್ ಬಿಡುಗಡೆ ಹಲವು ಗಂಟೆ ವಿಳಂಬವಾಗುತ್ತದೆ. ಇದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಡಿಸಿಂಕ್ರೊನೈಸ್ ಆಗಿರಬಹುದು.

    MORE
    GALLERIES

  • 58

    Early Puberty: ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಋತುಮತಿಯಾಗಲು ಕಾರಣವೇನು? ತಜ್ಞರು ಏನ್ ಹೇಳ್ತಾರೆ?

    ಅನಾರೋಗ್ಯಕರ ಪ್ರತಿಕ್ರಿಯೆಗಳು ಹಾರ್ಮೋನುಗಳ ಅಸಮತೋಲನ ಮತ್ತು ಮೆದುಳಿನ ಉರಿಯೂತ ಉಂಟು ಮಾಡುತ್ತವೆ. ಟ್ಯಾಬ್ಲೆಟ್‌ ಮತ್ತು ಸ್ಮಾರ್ಟ್‌ಫೋನ್‌ ಗಳ ಅನಿಯಮಿತ ಬಳಕೆ ಹಾರ್ಮೋನ್ ಮಟ್ಟ ಬದಲಾಯಿಸಿ, ಅಕಾಲಿಕ ಪ್ರೌಢಾವಸ್ಥೆಯ ಅಪಾಯ ಹೆಚ್ಚಿಸುತ್ತದೆ. ದೈಹಿಕ ನಿಷ್ಕ್ರಿಯತೆಯೂ ಕಾರಣ. ಹೆಚ್ಚು ಮೊಬೈಲ್ ನೋಡುವುದು ದೈಹಿಕ ಚಟುವಟಿಕೆ ಕೊರತೆಯಿಂದ ಪ್ರೌಢಾವಸ್ಥೆಯ ಹೈಪೋಥಾಲಾಮಿಕ್ ಪಿಟ್ಯುಟರಿ ಸೆಟ್ ಪಾಯಿಂಟ್ ಬದಲಾಗಿ ಪ್ರಿಪ್ಯುಬರ್ಟಲ್ ಹಂತ ತಲುಪಿ, ಮೆನಾರ್ಚೆಗೆ ಕಾರಣವಾಗುತ್ತಿದೆ.

    MORE
    GALLERIES

  • 68

    Early Puberty: ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಋತುಮತಿಯಾಗಲು ಕಾರಣವೇನು? ತಜ್ಞರು ಏನ್ ಹೇಳ್ತಾರೆ?

    ಹೆಚ್ಚು ತ್ವರಿತ ಆಹಾರ ಮತ್ತು ಸಂಸ್ಕರಿಸಿದ ಆಹಾರ ಸೇವನೆಯು ಮೆನಾರ್ಚೆಗೆ ಕಾರಣವಾಗುತ್ತಿದೆ. ಕಳಪೆ ಪೌಷ್ಟಿಕಾಂಶ ಆಹಾರ ಸೇವನೆಯು ಮಕ್ಕಳು ಪ್ರೌಢಾವಸ್ಥೆ ಬೇಗನೆ ಪ್ರವೇಶಿಸುವಂತೆ ಮಾಡುತ್ತದೆ. ಸಂಸ್ಕರಿಸಿದ ಮತ್ತು ತ್ವರಿತ ಆಹಾರವು ಸಾಮಾನ್ಯ ದೈಹಿಕ ಬೆಳವಣಿಗೆಗೆ ಅಡ್ಡಿ ಉಂಟು ಮಾಡುತ್ತದೆ.

    MORE
    GALLERIES

  • 78

    Early Puberty: ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಋತುಮತಿಯಾಗಲು ಕಾರಣವೇನು? ತಜ್ಞರು ಏನ್ ಹೇಳ್ತಾರೆ?

    ಸ್ಥೂಲಕಾಯ ಹೊಂದಿರುವ ಮಕ್ಕಳಲ್ಲಿ ಅತಿಯಾದ ಲೆಪ್ಟಿನ್ ಸ್ರವಿಸುವಿಕೆ ಮತ್ತು ಲೈಂಗಿಕ ಹಾರ್ಮೋನ್ ಮಟ್ಟ ಹೆಚ್ಚಿಸುತ್ತದೆ. ಇದು ಆರಂಭಿಕ ಪ್ರೌಢಾವಸ್ಥೆಯ ಬೆಳವಣಿಗೆಗೆ ಕಾರಣವಾಗುತ್ತದೆ. ಇದು ಎಲ್ಲಾ ರೋಗಗಳ ಅಪಾಯ ಹೆಚ್ಚಿಸುತ್ತದೆ. ಪಿಸಿಓಎಸ್ , ಟೈಪ್ 2 ಡಯಾಬಿಟಿಸ್, ದೈಹಿಕ ಬೆಳವಣಿಗೆ ಎತ್ತರ ಕಡಿಮೆ ಆಗುವ ಸಮಸ್ಯೆ ಹೆಚ್ಚು.

    MORE
    GALLERIES

  • 88

    Early Puberty: ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಋತುಮತಿಯಾಗಲು ಕಾರಣವೇನು? ತಜ್ಞರು ಏನ್ ಹೇಳ್ತಾರೆ?

    ಹಾಗಾಗಿ ಮೆನಾರ್ಚೆ ಸಮಸ್ಯೆ ತಪ್ಪಿಸಲು ಮತ್ತು ಆರೋಗ್ಯಕರ ಜೀವನಕ್ಕಾಗಿ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಮೊಬೈಲ್, ಲ್ಯಾಪ್ ಟಾಪ್ ಹೆಚ್ಚಿನ ಬಳಕೆ ನಿಲ್ಲಿಸಿ. ಪೌಷ್ಟಿಕ ಆಹಾರ ಸೇವಿಸುವುದು, ಹೆಚ್ಚು ನೀರು ಸೇವನೆ, ದೈಹಿಕವಾಗಿ ಸಕ್ರಿಯವಾಗಿರುವುದು, ಉತ್ತಮ ಜೀವನಶೈಲಿ ರೂಢಿಸಿಕೊಳ್ಳಿ. ಇದು ಮೆನಾರ್ಚೆ ಸಮಸ್ಯೆ ತಪ್ಪಿಸುತ್ತದೆ.

    MORE
    GALLERIES