ದೂರ್ವೆ ಹುಲ್ಲಿನ ಬಗ್ಗೆ ನಿಮಗೆ ಗೊತ್ತಿದೆ. ಇದನ್ನು ಹೆಚ್ಚಾಗಿ ಜನರು ದೇವರ ಪೂಜೆಗೆ ಬಳಸುತ್ತಾರೆ. ಗಣೇಶ ದೇವರಿಗೆ ಅರ್ಪಿಸಲು ಬಳಸುತ್ತಾರೆ. ಯಾರು ಗಣಪತಿಯ ಪೂಜೆ, ಭಕ್ತಿಯ ಆಚರಣೆ ಮಾಡುತ್ತಾರೋ ಅವರಿಗೆ ದೂರ್ವೆಯ ಮಹತ್ವ ಗೊತ್ತಿದೆ. ಇದನ್ನು ಗರಿಕೆ ಎಂದು ಕರೆಯುತ್ತಾರೆ. ಈ ಗರಿಕೆಯು ದೇವರಿಗೆ ಹಾಗೂ ಆರೋಗ್ಯಕ್ಕೆ ಶ್ರೇಷ್ಠವಾಗಿದೆ. ಗರಿಕೆಯ ರಸ ಕುಡಿದರೆ ಆರೋಗ್ಯ ವರ್ಧಕ ಎಂದು ಹೇಳಲಾಗುತ್ತದೆ.
ಚರ್ಮದ ಆರೋಗ್ಯ ಕಾಪಾಡುತ್ತದೆ. ಎಸ್ಜಿಮಾ, ಸೋರಿಯಾಸಿಸ್, ಗಾಯ ಮತ್ತು ಶಿಲೀಂಧ್ರ ಸೋಂಕು ಸೇರಿ ಹಲವು ಚರ್ಮ ರೋಗಗಳ ಸಮಸ್ಯೆ ತೊಡೆದು ಹಾಕಲು ಪ್ರಯೋಜನಕಾರಿಯಾಗಿದೆ. ಗರಿಕೆಯು ಉರಿಯೂತದ ಗುಣಲಕ್ಷಣ ಹೊಂದಿದೆ. ಇದು ಚರ್ಮದ ದದ್ದು, ಎಸ್ಜಿಮಾ, ತುರಿಕೆ ಸಮಸ್ಯೆ ತಡೆಯುತ್ತದೆ. ಖಾಲಿ ಹೊಟ್ಟೆಯಲ್ಲಿ ಇದರ ರಸ ಸೇವಿಸಿದರೆ ದೇಹ ನಿರ್ವಿಷವಾಗುತ್ತದೆ. ಹಲ್ಲಿನ ಆರೋಗ್ಯ ಕಾಪಾಡುತ್ತದೆ. ಬಾಯಿ ಹುಣ್ಣು, ಗಾಯದ ಸಮಸ್ಯೆ ತಡೆಯುತ್ತದೆ.