ಗರ್ಭಾವಸ್ಥೆಯಲ್ಲಿ ದೇಹದ ಹಾರ್ಮೋನುಗಳ ಬದಲಾವಣೆ ಆಗುತ್ತದೆ. ದೇಹದ ನೀರಿನ ಮಟ್ಟವು ಹೆಚ್ಚಾಗಿ ಇದು ಮಗು, ಜರಾಯು, ಆಮ್ನಿಯೋಟಿಕ್ ದ್ರವ ಮತ್ತು ತಾಯಿಯ ರಕ್ತದ ಕಡೆಗೆ ಚಲಿಸುತ್ತದೆ. ಗರ್ಭಾಶಯವು ಶ್ರೋಣಿಯ ಅಭಿಧಮನಿ ಮತ್ತು ವೆನಾ ಕ್ಯಾವದ ಮೇಲೆ ಒತ್ತಡ ಹಾಕುತ್ತದೆ. ಇದು ರಕ್ತವನ್ನು ಕಾಲುಗಳಿಂದ ಹೃದಯಕ್ಕೆ ಸರಿಯಾಗಿ ಪಂಪ್ ಮಾಡಲಾಗಲ್ಲ. ದ್ರವವು ಕಾಲುಗಳಲ್ಲಿ ಶೇಖರಣೆಯಾಗಿ ಪಾದಗಳು ಊದಿಕೊಳ್ಳುತ್ತವೆ.