Moringa Leaves: ಮಹಿಳೆಯರ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ನುಗ್ಗೆಸೊಪ್ಪು ರಾಮಬಾಣ

ನುಗ್ಗೆಕಾಯಿ ಸೊಪ್ಪಿನ ಬಗ್ಗೆ ನಿಮಗೆಲ್ಲಾ ಗೊತ್ತಿದೆ. ಹೆಚ್ಚಿನ ಜನರು ನುಗ್ಗೆಕಾಯಿಯ ರುಚಿ ಸವಿದಿದ್ದಾರೆ. ಆದರೆ ನುಗ್ಗೆಕಾಯಿ ಸೊಪ್ಪಿನ ಸೇವನೆ ಮಾಡಿರಲ್ಲ. ನುಗ್ಗೆಕಾಯಿ ಸೊಪ್ಪು ಸಾಕಷ್ಟು ಪೋಷಕಾಂಶಗಳಿಂದ ಕೂಡಿದೆ. ಇದು ಹಲವು ಆರೋಗ್ಯ ಪ್ರಯೋಜನ ನೀಡುತ್ತದೆ. ಇದರ ಸೇವನೆ ದೇಹಕ್ಕೆ ಲಾಭಕಾರಿ. ಇದನ್ನು ಹೇಗೆ ಸೇವಿಸುವುದು ಅಂತಾ ನೋಡೋಣ.

First published:

  • 18

    Moringa Leaves: ಮಹಿಳೆಯರ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ನುಗ್ಗೆಸೊಪ್ಪು ರಾಮಬಾಣ

    ನಮ್ಮ ಸುತ್ತಲೂ ಕಾಣಸಿಗುವ ನುಗ್ಗೆಕಾಯಿ ಸೊಪ್ಪು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತವೆ. ಮತ್ತು ನಮ್ಮನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತವೆ. ಮೊರಿಂಗಾದ ಎಲೆಗಳು ಮಹಿಳೆಯರ ದೇಹದ ಸಂಪೂರ್ಣ ಆರೋಗ್ಯಕ್ಕೆ ಸಹಾಯ ಮಾಡುತ್ತವೆ. ನುಗ್ಗೆಕಾಯಿ ಸೊಪ್ಪಿನ ಪುಡಿ ಮತ್ತು ಕ್ಯಾಪ್ಸುಲ್ ಸಹ ಇದೆ.

    MORE
    GALLERIES

  • 28

    Moringa Leaves: ಮಹಿಳೆಯರ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ನುಗ್ಗೆಸೊಪ್ಪು ರಾಮಬಾಣ

    ನುಗ್ಗೆಕಾಯಿ ಸೊಪ್ಪನ್ನು ಯಾವ ರೂಪದಲ್ಲಿ, ವಿಧಾನದಲ್ಲಿ ಸೇವಿಸಬೇಕು ಎಂಬುದನ್ನು ತಿಳಿಯುವುದು ತುಂಬಾ ಮುಖ್ಯ. ಮೊರಿಂಗಾ ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಅಮೈನೋ ಆಮ್ಲಗಳು, ಪೊಟ್ಯಾಸಿಯಮ್, ಕಬ್ಬಿಣ, ಸತು ಮತ್ತು ಕ್ಯಾಲ್ಸಿಯಂ, ಖನಿಜ, ವಿಟಮಿನ್ ಎ, ಸಿ, ಇ ಮತ್ತು ಬಿ ಸಮೃದ್ಧವಾಗಿದೆ.

    MORE
    GALLERIES

  • 38

    Moringa Leaves: ಮಹಿಳೆಯರ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ನುಗ್ಗೆಸೊಪ್ಪು ರಾಮಬಾಣ

    ನುಗ್ಗೆಕಾಯಿ ಸೊಪ್ಪು ಕ್ವೆರ್ಸೆಟಿನ್ ಅನ್ನು ಹೊಂದಿದೆ. ಇದು ಉತ್ಕರ್ಷಣ ನಿರೋಧಕವಾಗಿದೆ. ಇದು ಹಿಸ್ಟಮೈನ್ ಪ್ರತಿಕ್ರಿಯೆ ತಡೆಯುತ್ತದೆ. ಹಿಸ್ಟಮೈನ್‌ ಅಲರ್ಜಿ ಲಕ್ಷಣ ಪ್ರಚೋದಿಸುತ್ತದೆ. ಇದನ್ನು ತಡೆಯುತ್ತದೆ. ಎಲೆಗಳು ಕ್ಲೋರೊಜೆನಿಕ್ ಆಮ್ಲ ಹೊಂದಿವೆ. ಇದು ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ.

    MORE
    GALLERIES

  • 48

    Moringa Leaves: ಮಹಿಳೆಯರ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ನುಗ್ಗೆಸೊಪ್ಪು ರಾಮಬಾಣ

    ಮೊರಿಂಗಾ ಎಲೆಗಳ ಬಳಕೆ ಬಗ್ಗೆ ತಿಳಿಯುವುದು ಮುಖ್ಯ. ನುಗ್ಗೆಕಾಯಿ ಸೊಪ್ಪನ್ನು ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ. ಮೊರಿಂಗಾ ಎಲೆಗಳನ್ನು ಪ್ರತಿದಿನ ಸೇವಿಸಬಹುದು. ಚಮಚ ಮೊರಿಂಗಾ ಎಲೆಗಳ ಚಹಾ ಕುಡಿಯಬಹುದು. ಸ್ಮೂಥಿ, ಓಟ್ ಮೀಲ್ ನಲ್ಲಿ ಮೊರಿಂಗಾ ಪುಡಿ ಸೇರಿಸಿ ಸೇವಿಸಬಹುದು. ದಿನಕ್ಕೆ 500 ಮಿಗ್ರಾಂನಿಂದ 2 ಗ್ರಾಂ ಕ್ಯಾಪ್ಸುಲ್ ಸೇವಿಸಬಹುದು.

    MORE
    GALLERIES

  • 58

    Moringa Leaves: ಮಹಿಳೆಯರ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ನುಗ್ಗೆಸೊಪ್ಪು ರಾಮಬಾಣ

    ಮೊರಿಂಗಾ ಎಲೆಗಳು ರಕ್ತಹೀನತೆ ಸಮಸ್ಯೆ ನಿವಾರಿಸುತ್ತದೆ. ಜೀವಕೋಶಗಳಿಗೆ ಆಮ್ಲಜನಕ ಸಾಗಿಸಲು ಸಾಕಷ್ಟು ಆರೋಗ್ಯಕರ ಕೆಂಪು ರಕ್ತ ಕಣಗಳು ಬೇಕು. ರಕ್ತಹೀನತೆ ಆಯಾಸ, ತಲೆತಿರುಗುವಿಕೆ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ. ಮೊರಿಂಗಾ ಎಲೆಗಳು ಸಾಂಪ್ರದಾಯಿಕ ಕಬ್ಬಿಣದ ಪೂರಕಗಳಿಗಿಂತ ಹೆಚ್ಚು ಕಬ್ಬಿಣ ಒದಗಿಸುತ್ತವೆ. ರಕ್ತಹೀನತೆ ಸಮಸ್ಯೆ ತಡೆಯುತ್ತದೆ.

    MORE
    GALLERIES

  • 68

    Moringa Leaves: ಮಹಿಳೆಯರ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ನುಗ್ಗೆಸೊಪ್ಪು ರಾಮಬಾಣ

    ಹಾಲುಣಿಸುವ ತಾಯಂದಿರ ಆರೋಗ್ಯಕ್ಕೆ ನುಗ್ಗೆಸೊಪ್ಪು ಲಾಭಕಾರಿ. ಹೊಸ ತಾಯಂದಿರಲ್ಲಿ ಎದೆಹಾಲಿನ ಪ್ರಮಾಣ ಹೆಚ್ಚಿಸುತ್ತದೆ. ದಿನಕ್ಕೆ 250 ಮಿಲಿಗ್ರಾಂಗಿಂತ ಹೆಚ್ಚು ಮೊರಿಂಗಾ ಎಲೆಗಳನ್ನು ಸೇವಿಸಿದರೆ ಹೆಚ್ಚು ಎದೆಹಾಲು ಉತ್ಪಾದಿಸುತ್ತಾರೆ. ಎದೆ ಹಾಲಿನ ಪೌಷ್ಟಿಕಾಂಶದ ಗುಣ ಹೆಚ್ಚುತ್ತದೆ.

    MORE
    GALLERIES

  • 78

    Moringa Leaves: ಮಹಿಳೆಯರ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ನುಗ್ಗೆಸೊಪ್ಪು ರಾಮಬಾಣ

    ನುಗ್ಗೆಸೊಪ್ಪು ಸೇವನೆ ತೂಕ ನಷ್ಟಕ್ಕೆ ಸಹಾಯಕ. ಫೈಬರ್ ಮತ್ತು ಪ್ರೋಟೀನ್ ಅನ್ನು ಹೊಂದಿದೆ. ಮಲಬದ್ಧತೆ ಮತ್ತು ಉಬ್ಬುವಿಕೆ ಸಮಸ್ಯೆಗೆ ಪರಿಹಾರ ನೀಡುತ್ತವೆ. ಎಲೆಗಳನ್ನು ಗಂಜಿ ಅಥವಾ ಸ್ಮೂಥಿ ಅಥವಾ ಸೂಪ್‌ ಜೊತೆ ಬೆರೆಸಿ ಸೇವಿಸಿದರೆ ದೇಹವನ್ನು ಚೆನ್ನಾಗಿ ಪೋಷಿಸುತ್ತದೆ. ಹಸಿವು ಕಡಿಮೆಯಾಗುತ್ತದೆ. ತೂಕ ನಿಯಂತ್ರಿಸುತ್ತದೆ.

    MORE
    GALLERIES

  • 88

    Moringa Leaves: ಮಹಿಳೆಯರ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ನುಗ್ಗೆಸೊಪ್ಪು ರಾಮಬಾಣ

    ಋತುಬಂಧ ಸಮಸ್ಯೆ ತಡೆಗೆ ನುಗ್ಗೆಸೊಪ್ಪು ಸೇವನೆ ಸಹಕಾರಿ. ಸಸ್ಯ ಪ್ರೋಟೀನ್‌ನ ಮೂಲ, ಹಾರ್ಮೋನುಗಳ ಸಮತೋಲನ ಕಾಪಾಡುತ್ತದೆ. ದೇಹದಿಂದ ವಿಷವನ್ನು ತೆಗೆದು ಹಾಕುತ್ತದೆ. ಹೆಚ್ಚುವರಿ ಈಸ್ಟ್ರೊಜೆನ್ ತೊಡೆದು ಹಾಕುತ್ತದೆ. ಅವಧಿಯ ಸೆಳೆತವನ್ನು ಕಡಿಮೆ ಮಾಡುತ್ತದೆ.

    MORE
    GALLERIES