Drinking Water: ನೀರು ಕುಡಿಯಲು ಹಿಂಜರಿಯುತ್ತೀರಾ? ಈ ಅನಾರೋಗ್ಯ ನಿಮ್ಮನ್ನು ಕಾಡೋದ್ರಲ್ಲಿ ಅನುಮಾನವಿಲ್ಲ

ಆರೋಗ್ಯಕರ ಜೀವನಕ್ಕೆ ದೇಹವನ್ನು ಹೈಡ್ರೀಕರಿಸುವುದು ತುಂಬಾ ಮುಖ್ಯ. ಹೆಚ್ಚು ನೀರು ಕುಡಿಯುವುದು ನಿಮ್ಮ ಆರೋಗ್ಯ ವೃದ್ಧಿಸುತ್ತದೆ. ಸಮಯ ಮತ್ತು ಅಗತ್ಯಕ್ಕೆ ಅನುಗುಣವಾಗಿ ನೀರು ಕುಡಿದರೆ, ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಕಾಡಲ್ಲ. ಆದರೆ ನೀರು ಕುಡಿಯದೇ ಹೋದರೆ ಯಾವೆಲ್ಲಾ ಸಮಸ್ಯೆಗಳು ನಿಮ್ಮನ್ನು ಸುತ್ತುವರೆಯುತ್ತವೆ ನೋಡೋಣ.

First published:

  • 18

    Drinking Water: ನೀರು ಕುಡಿಯಲು ಹಿಂಜರಿಯುತ್ತೀರಾ? ಈ ಅನಾರೋಗ್ಯ ನಿಮ್ಮನ್ನು ಕಾಡೋದ್ರಲ್ಲಿ ಅನುಮಾನವಿಲ್ಲ

    ನೀರು ಕುಡಿಯದೇ ಹೋದರೆ ಮೂಡ್ ಸ್ವಿಂಗ್ ಉಂಟಾಗುತ್ತದೆ. ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ದೇಹ ಬಿಸಿಯಾಗುತ್ತದೆ. ವಾಂತಿ, ಬೇಧಿ ಸಮಸ್ಯೆ ಕಾಡುತ್ತದೆ. ಮಲಬದ್ಧತೆ ಮತ್ತು ಮೂತ್ರಪಿಂಡದ ಕಲ್ಲು ಸಮಸ್ಯೆ ಕಾಡುತ್ತದೆ. ಮಾನವನ ಆರೋಗ್ಯಕ್ಕೆ ಮಾತ್ರವಲ್ಲದೇ, ಪ್ರಾಣಿಗಳು ಮತ್ತು ಸಸ್ಯಗಳು, ಪಕ್ಷಿಗಳಿಗೂ ನೀರು ಬೇಕು.

    MORE
    GALLERIES

  • 28

    Drinking Water: ನೀರು ಕುಡಿಯಲು ಹಿಂಜರಿಯುತ್ತೀರಾ? ಈ ಅನಾರೋಗ್ಯ ನಿಮ್ಮನ್ನು ಕಾಡೋದ್ರಲ್ಲಿ ಅನುಮಾನವಿಲ್ಲ

    ಹೀಗಾಗಿ ನೀರಿನ ಮಹತ್ವ ಅರಿತು ಅದನ್ನು ಸಂರಕ್ಷಿಸಬೇಕಿದೆ. ಪ್ರತಿ ವರ್ಷ ವಿಶ್ವ ಜಲ ದಿನ ಆಚರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ವಿಶ್ವಸಂಸ್ಥೆಯ ಸಂಸ್ಥೆಯ ನಿರ್ದೇಶನದ ಮೇರೆಗೆ ವಿಶ್ವದಾದ್ಯಂತ ಮಾರ್ಚ್ 22 ರಂದು ವಿಶ್ವ ಜಲ ದಿನ ಆಚರಿಸುತ್ತಾರೆ. ನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ಮತ್ತು ನೈರ್ಮಲ್ಯದ ಬಗ್ಗೆ ತಿಳಿಸಲಾಗುತ್ತದೆ.

    MORE
    GALLERIES

  • 38

    Drinking Water: ನೀರು ಕುಡಿಯಲು ಹಿಂಜರಿಯುತ್ತೀರಾ? ಈ ಅನಾರೋಗ್ಯ ನಿಮ್ಮನ್ನು ಕಾಡೋದ್ರಲ್ಲಿ ಅನುಮಾನವಿಲ್ಲ

    ನೀರು ಕುಡಿಯುವುದರಿಂದ ನಿಮ್ಮ ಕೀಲುಗಳು, ಬೆನ್ನುಹುರಿ ಮತ್ತು ಕರುಳಿನ ಆರೋಗ್ಯ ಚೆನ್ನಾಗಿಡಲು ಸಹಾಯ ಮಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ಮಹಿಳೆ ಪ್ರತಿದಿನ ಎರಡೂವರೆ ಲೀಟರ್ ನೀರು ಕುಡಿಯಬೇಕು. ದೇಹದ ಪ್ರತಿಯೊಂದು ಭಾಗಕ್ಕೂ ನೀರು ಬೇಕು. ದೇಹ, ಕೀಲುಗಳು, ಬೆನ್ನುಹುರಿ, ಕರುಳಿನ ಆರೋಗ್ಯಕ್ಕೆ ನೀರು ಎಷ್ಟು ಮುಖ್ಯ ಎಂದು ತಿಳಿಯೋಣ.

    MORE
    GALLERIES

  • 48

    Drinking Water: ನೀರು ಕುಡಿಯಲು ಹಿಂಜರಿಯುತ್ತೀರಾ? ಈ ಅನಾರೋಗ್ಯ ನಿಮ್ಮನ್ನು ಕಾಡೋದ್ರಲ್ಲಿ ಅನುಮಾನವಿಲ್ಲ

    ದೇಹದಲ್ಲಿ ನೀರಿನ ಕೊರತೆಯು ಕೀಲು ನೋವುಂಟು ಮಾಡುವ ಅಪಾಯ ಹೆಚ್ಚು. ದೇಹದಿಂದ ವಿಷ ಹೊರಹಾಕಲು ಜಲಸಂಚಯನ ಅತ್ಯಗತ್ಯ. ಉರಿಯೂತದ ವಿರುದ್ಧ ಹೋರಾಡಲು ಸಹಕಾರಿ. ಕೀಲುಗಳನ್ನು ನಯಗೊಳಿಸುವ ಸೈನೋವಿಯಲ್ ದ್ರವವು ಮುಖ್ಯವಾಗಿ ನೀರಿನಿಂದ ಕೂಡಿದೆ. ಈ ದ್ರವವು ಕೀಲುಗಳ ನಡುವಿನ ಘರ್ಷಣೆ ಕಡಿಮೆ ಮಾಡುತ್ತದೆ.

    MORE
    GALLERIES

  • 58

    Drinking Water: ನೀರು ಕುಡಿಯಲು ಹಿಂಜರಿಯುತ್ತೀರಾ? ಈ ಅನಾರೋಗ್ಯ ನಿಮ್ಮನ್ನು ಕಾಡೋದ್ರಲ್ಲಿ ಅನುಮಾನವಿಲ್ಲ

    ಹೆಚ್ಚು ನೀರು ಕುಡಿದರೆ ಗೌಟ್ ಅನ್ನು ತಡೆಯುತ್ತದೆ. ತೂಕ ನಿಯಂತ್ರಿಸುತ್ತದೆ. ಸ್ನಾಯು ಸೆಳೆತ ಕಡಿಮೆ ಮಾಡುತ್ತದೆ. ನೀವು ಸಾಕಷ್ಟು ನೀರು ಕುಡಿಯದಿದ್ದರೆ ನಿರ್ಜಲೀಕರಣ ಸಮಸ್ಯೆಯಾಗಿ ಇದು ಸ್ನಾಯು ಸೆಳೆತ ಸಮಸ್ಯೆ ಹೆಚ್ಚಿಸುತ್ತದೆ. ಇದರಿಂದ ಕೀಲು ನೋವು, ರಕ್ತದ ಪ್ರಮಾಣದಲ್ಲಿ ಇಳಿಕೆ, ಉರಿಯೂತ ಉಂಟಾಗುತ್ತದೆ. ಇದನ್ನು ತಪ್ಪಿಸಲು ದಿನವೂ ಹೆಚ್ಚು ನೀರು ಕುಡಿಯಿರಿ.

    MORE
    GALLERIES

  • 68

    Drinking Water: ನೀರು ಕುಡಿಯಲು ಹಿಂಜರಿಯುತ್ತೀರಾ? ಈ ಅನಾರೋಗ್ಯ ನಿಮ್ಮನ್ನು ಕಾಡೋದ್ರಲ್ಲಿ ಅನುಮಾನವಿಲ್ಲ

    ದೇಹದಲ್ಲಿ ನೀರಿನ ಕೊರತೆಯು ಬೆನ್ನುಹುರಿ ಸಮಸ್ಯೆ ಉಂಟು ಮಾಡುತ್ತದೆ. ದೇಹದಲ್ಲಿ ಜಲಸಂಚಯನ ಆಗದಿದ್ದರೆ ಡಿಸ್ಕ್ಗಳಲ್ಲಿ ದ್ರವದ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಒತ್ತಡ ಹೆಚ್ಚುತ್ತದೆ. ಇದು ಉರಿಯೂತ ಸಮಸ್ಯೆ ಉಂಟು ಮಾಡುತ್ತದೆ. ನಿರ್ಜಲೀಕರಣ ಬೆನ್ನುನೋವಿಗೆ ಕಾರಣವಾಗುತ್ತದೆ. ಹರ್ನಿಯೇಟೆಡ್ ಡಿಸ್ಕ್ ಸಮಸ್ಯೆ ಕೂಡ ತಲೆದೋರಬಹುದು.

    MORE
    GALLERIES

  • 78

    Drinking Water: ನೀರು ಕುಡಿಯಲು ಹಿಂಜರಿಯುತ್ತೀರಾ? ಈ ಅನಾರೋಗ್ಯ ನಿಮ್ಮನ್ನು ಕಾಡೋದ್ರಲ್ಲಿ ಅನುಮಾನವಿಲ್ಲ

    ಉಸಿರು ದುರ್ವಾಸನೆ, ಕಪ್ಪು ಮೂತ್ರ, ಸದಾ ಸುಸ್ತು, ತಲೆನೋವು, ಒಣ ಚರ್ಮ, ಸ್ನಾಯು ಸೆಳೆತ, ಒಣ ಕಣ್ಣು, ತಲೆತಿರುಗುವಿಕೆ ಸಮಸ್ಯೆಗಳು ನೀಇರಿನ ಕೊರತೆಯಿಂದ ಉಂಟಾಗುತ್ತವೆ. ನಿರ್ಜಲೀಕರಣದಿಂದ ಸೆರೆಬ್ರೊಸ್ಪೈನಲ್ ದ್ರವದ ಸಾಂದ್ರತೆ ಕಡಿಮೆಯಾಗಿ ಇದು ಬೆನ್ನುಹುರಿ ಸಮಸ್ಯೆ ಹೆಚ್ಚಿಸುತ್ತದೆ. ಬೆನ್ನುಹುರಿ ಬಲಪಡಿಸಲು ಹಣ್ಣು ಮತ್ತು ತರಕಾರಿ ತಿನ್ನಿ. 1.5 ಲೀಟರ್ ನೀರನ್ನು ಕುಡಿಯಿರಿ.

    MORE
    GALLERIES

  • 88

    Drinking Water: ನೀರು ಕುಡಿಯಲು ಹಿಂಜರಿಯುತ್ತೀರಾ? ಈ ಅನಾರೋಗ್ಯ ನಿಮ್ಮನ್ನು ಕಾಡೋದ್ರಲ್ಲಿ ಅನುಮಾನವಿಲ್ಲ

    ಕರುಳಿನ ಆರೋಗ್ಯ ಕೆಡದಿರಲು ಸದಾ ದೇಹವನ್ನು ಹೈಡ್ರೀಕರಿಸಿ. ಹೆಚ್ಚು ನೀರು ಕುಡಿಯುವ ಜನರಲ್ಲಿ ಜಠರಗರುಳಿನ ಸೋಂಕು ಕಡಿಮೆ. ಹೈಡ್ರೀಕರಿಸಿದ ಸ್ಥಿತಿಯು ಹಲವು ಆರೋಗ್ಯ ಪ್ರಯೋಜನ ನೀಡುತ್ತದೆ. ಕರುಳಿನ ಚಲನೆಗೆ ನೀರು ಬೇಕು. ನೀರಿದ್ದರೆ ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ. ಮಲಬದ್ಧತೆ ತಡೆಯುತ್ತದೆ.

    MORE
    GALLERIES