Hot Water: ಬಿಸಿ ನೀರನ್ನು ಬೆಳಗ್ಗೆ ಕುಡಿದ್ರೆ ಒಳ್ಳೆಯದಾ? ರಾತ್ರಿ ಮಲಗುವ ವೇಳೆ ಕುಡಿದ್ರೆ ಆರೋಗ್ಯಕರನಾ?
Health Benefits of Hot Water: ನಮ್ಮಲ್ಲಿ ಹೆಚ್ಚಿನವರು ಬೆಳಗ್ಗೆ ಎದ್ದ ಕೂಡಲೇ ಬಿಸಿನೀರು ಕುಡಿಯುತ್ತಾರೆ. ಸ್ನಾನಕ್ಕೂ ಬಿಸಿನೀರು ಬಳಸುತ್ತಾರೆ. ಬಿಸಿನೀರು ನಮ್ಮ ದೇಹಕ್ಕೆ ಶಾಖವನ್ನು ನೀಡುವುದು ಮಾತ್ರವಲ್ಲದೆ ಹಲವಾರು ರೀತಿಯಲ್ಲಿ ಪ್ರಯೋಜಕಾರಿಯೂ ಹೌದು.
ಬಿಸಿನೀರು ಕುಡಿಯುವುದರಿಂದ ಆರೋಗ್ಯಕಾರಿ ಪ್ರಯೋಜನಗಳಿವೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಕೊರೊನಾ ಕಾಲದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿದ ಅನೇಕರು ಬಿಸಿನೀರು ಕುಡಿಯುವ ಅಭ್ಯಾಸ ಬೆಳೆಸಿಕೊಂಡರು.
2/ 5
ರಾತ್ರಿಯಾಗಲಿ, ಬೆಳಗ್ಗೆಯಾಗಲಿ ಬಿಸಿ ನೀರು ಕುಡಿಯುವುದು ಯಾವಗಲೂ ಆರೋಗ್ಯಕರ. ರಾತ್ರಿ ಬಿಸಿ ನೀರು ಕುಡಿಯುವುದರಿಂದ ಉತ್ತಮ ನಿದ್ದೆ ಬರುತ್ತದೆ. ತೂಕವನ್ನು ಕಳೆದುಕೊಳ್ಳಲು ಜನರು ಬೆಳಗ್ಗೆ ಬಿಸಿನೀರನ್ನು ಕುಡಿಯುತ್ತಾರೆ.
3/ 5
ಬಿಸಿನೀರು ಕುಡಿಯುವುದರಿಂದ ತೂಕ ಇಳಿಯುತ್ತದೆ. ಬಿಸಿ ನೀರು ದೇಹದ ಅಧಿಕ ಕೊಬ್ಬನ್ನು ಕಡಿಮೆ ಮಾಡುತ್ತದೆ. ಸ್ಥೂಲಕಾಯತೆ ಅಥವಾ ಕೊಲೆಸ್ಟ್ರಾಲ್ ಸಮಸ್ಯೆ ಇರುವವರಿಗೆ ಬಿಸಿನೀರು ತುಂಬಾ ಉಪಯುಕ್ತವಾಗಿದೆ.
4/ 5
ಮಾನಸಿಕ ಖಿನ್ನತೆ ಇರುವವರು ಬಿಸಿನೀರನ್ನು ಕುಡಿಯುವುದು ಉತ್ತಮ. ಇದು ಖಿನ್ನತೆಯ ಸಮಸ್ಯೆಗೆ ಪರಿಹಾರ ನೀಡುತ್ತದೆ. ರಾತ್ರಿ ಮಲಗುವ ಮುನ್ನ ಉಗುರುಬೆಚ್ಚನೆಯ ನೀರನ್ನು ಕುಡಿಯುವುದರಿಂದ ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ. ನಾವು ಒತ್ತಡ ಅಥವಾ ನಿದ್ರೆಯ ಸಮಸ್ಯೆಗಳನ್ನು ಹೊಂದಿದ್ದರೆ, ಬಿಸಿನೀರನ್ನು ಕುಡಿಯುವುದು ಸಹಾಯಕವಾಗಿರುತ್ತದೆ.
5/ 5
ಬಿಸಿನೀರು ಕುಡಿಯುವುದರಿಂದ ಅಜೀರ್ಣ ಸಮಸ್ಯೆ ನಿವಾರಣೆಯಾಗಿ, ಜೀರ್ಣಕ್ರಿಯೆ ಸುಧಾರಿಸುತ್ತದೆ. ಬಿಸಿ ನೀರು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಆದ್ದರಿಂದ, ಹೊಟ್ಟೆ ಅಥವಾ ಜೀರ್ಣಾಂಗ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆ ಇದ್ದರೆ ಬಿಸಿನೀರಿನ ಬಳಕೆ ತುಂಬಾ ಉಪಯುಕ್ತವಾಗಿದೆ.