1. ಹಾರಾಟ (Flying) : ನೀವು ಕನಸಿನಲ್ಲಿ ಹಾರಾಡುತ್ತಿದ್ರೆ, ಸಂತೋಷವಾಗಿರುತ್ತೀರಿ ಅನ್ನೋ ನಂಬಿಕೆ. ಕನಸಿನಲ್ಲಿ ನೀವು ಸೂಪರ್ ಮ್ಯಾನ್, ಬ್ಯಾಟ್ ಮ್ಯಾನ್ ಅಥವಾ ಪ್ಯಾರಾಚೂಟ್ ನಲ್ಲಿ ವಿಹರಿಸುತ್ತಿದ್ರೆ ಮುಂದಿನ ದಿನಗಳಲ್ಲಿ ವಿಶೇಷವಾಗ ಬದಲಾವಣೆ ಆಗಲಿದೆ ಎಂದರ್ಥ. ಇದರೊಂದಿಗೆ ಬಣ್ಣಗಳ ಜೊತೆ ಆಟ, ಲಾಂಗ್ ಡ್ರೈವಿಂಗ್ ಇಂತಹ ಕನಸುಗಳು ಒಳ್ಳೆಯ ಸಂಕೇತ ಎಂದು ಹೇಳಲಾಗುತ್ತದೆ.
2. ಬೀಳೋದು (Falling) ಕೆಲವೊಮ್ಮೆ ಕನಸಿನಲ್ಲಿ ಮೇಲಿಂದ ಬಿದ್ದಂತೆ, ಯಾರೋ ನಮ್ಮನ್ನು ತಳ್ಳಿದಂತೆ ಅನುಭವವಾಗಿ ಎಚ್ಚರವಾಗಿರುತ್ತದೆ. ಈ ವಿಧದ ಕನಸಿಗಳಿಗೆ ಪ್ರತ್ಯೇಕವಾದ ಅರ್ಥಗಳಿವೆ. ಮೇಲಿಂದ ನೀವೇ ಬೀಳುತ್ತಿದ್ರೆ ಕೆಲವರ ಸಂಪರ್ಕವನ್ನು ಕಳೆದುಕೊಳ್ಳುತ್ತಿದ್ದೀರಿ ಎಂದರ್ಥ. ಅದೇ ನಿಮ್ಮನ್ನ ಯಾರೋ ತಳ್ಳುತ್ತಿದ್ರೆ ನೀವು ಒತ್ತಡದಲ್ಲಿದ್ದು, ನಿಮ್ಮ ಮಾನಸಿಕ ನಿಯಂತ್ರಣ ಕಳೆದುಕೊಳ್ಳುತ್ತಿರುವ ಸೂಚನೆ ಇರಬಹುದು. ಕುಳಿತ ಸ್ಥಳದಿಂದಲೇ ಆಯತಪ್ಪಿದ ಕನಸು ಬಿದ್ರೆ ನಿಮ್ಮ ಮೇಲಿನ ಕಂಟ್ರೋಲ್ ನೀವೇ ಕಳೆದುಕೊಳ್ಳುತ್ತಿರುವ ಸನ್ನೆ ಇರಬಹುದು. ಕನನಸಿನಲ್ಲಿ ಬ್ಯಾಲೆನ್ಸ್ ಮಾಡಲು ಪ್ರಯತ್ನಿಸಿದ್ರೆ ಸಮಸ್ಯೆಗಳು ಎದುರಾಗಲಿವೆ ಅಥವಾ ನಿಮ್ಮ ದಿನಚರಿ ಬದಲಾಗಬಹುದು.
5. ಟ್ರ್ಯಾಪ್: (Being trapped): ಕನಸಿನಲ್ಲಿ ಯಾವುದೇ ಬಲೆ, ವ್ಯೂಹ ಅಥವಾ ಪ್ರಾಣಿಗಳ ಕೈಯಲ್ಲಿ ಸಿಲುಕಿದ್ರೆ, ಅದು ನಿಮ್ಮ ಫ್ರೆಂಡ್, ಫ್ಯಾಮಿಲಿ ಸಂಬಂಧಗಳ ಬಹುದೊಡ್ಡ ಬದಲಾವಣೆ ಆಗಬಹುದು. ಆಳವಾದ ಕಣಿವೆಯಲ್ಲಿ ಬಿದ್ದಂತೆ ಕನಸು ಕಂಡ್ರೆ ನಿಮ್ಮ ಪ್ರತಿದಿನದ ಚಟುವಟಿಕೆ, ನಡವಳಿಕೆ, ಹವ್ಯಾಸಗಳನ್ನು ಬದಲಿಸಿಕೊಳ್ಳಿ. ನಿಮ್ಮನ್ನ ನೀವೇ ಮೌಲ್ಯಮಾಪನ ಮಾಡಿಕೊಳ್ಳೋದು ಉತ್ತಮ ಮನೋತಜ್ಞರು ಹೇಳುತ್ತಾರೆ.
6. ಹಲ್ಲು ಕಳೆದುಕೊಳ್ಳುವಿಕೆ: (Losing teet):h ಹಲ್ಲು ಮುರಿಯೋದು ಅಥವಾ ಹಲ್ಲು ಕಿತ್ತುಕೊಂಡಂತೆ ಕನಸು ಬಿದ್ರೆ ನೀವು ಕೆಲವರಿಂದ ತಿರಸ್ಕರಿಸಲ್ಪಡುತ್ತೀರಿ ಎಂದರ್ಥ. ನಿಮ್ಮ ಜೀವನದಲ್ಲಿ ಇಂತಹ ಭಯಗಳಿದ್ದರೂ, ಈ ರೀತಿಯ ಕನಸುಗಳು ಬರಬಹುದು. ಅಂದ್ರೆ ಬೇರೆಯವರ ಅಭಿಪ್ರಾಯಗಳಿಗೆ ನೀವು ಬದ್ಧವಾಗುವ ಗುಣವನ್ನ ಬದಲಿಸಿಕೊಳ್ಳೋದು ಉತ್ತಮ. ಈ ತರಹದ ಕನಸು ಬರುತ್ತಿದ್ರೆ ನಿಮ್ಮನ್ನು ನೀವು ಪ್ರೀತಿಸೋದನ್ನ ಕಲಿಯಬೇಕು ಎಂದರ್ಥ.