ಆದರೆ ಈ ಹಬ್ಬದಂದು ಕೆಲವರು ಎಲ್ಲಿ ಬಣ್ಣ ಹಚ್ಚುತ್ತಾರೋ ಎಂದು ಮನೆಯಿಂದ ಹೊರಗೆ ಬರಲು ಹಿಂಜರಿಯುತ್ತಾರೆ. ಏಕೆಂದರೆ ಕೆಲವು ಕೆಮಿಕಲ್ ಮಿಶ್ರಿತ ಬಣ್ಣಗಳಿಂದ ತ್ವಚೆ ಹಾಳಾಗುತ್ತದೆ. ಅಲ್ಲದೇ ಬಟ್ಟೆ ಕೂಡ ಕೊಳಕಾಗುತ್ತದೆ ಎಂಬ ಭಯ ಹೊಂದಿರುತ್ತಾರೆ. ಆದರೆ ಈ ಭಯವನ್ನು ಬಿಟ್ಟು ಈ ಬಾರಿ ಹೋಳಿಯನ್ನು ಸಂಭ್ರಮದಿಂದ ಆಚರಿಸಿ, ಏಕೆಂದರೆ ನಿಮ್ಮ ಬಟ್ಟೆ ಮೇಲಾದ ಕಲೆಗಳನ್ನು ತೆಗೆದು ಹಾಕಲು ಒಂದಷ್ಟು ಟಿಪ್ಸ್ ಅನ್ನು ನಾವು ಇಂದು ನಿಮಗೆ ನೀಡುತ್ತಿದ್ದೇವೆ.
ವಿಂಡೋ ಕ್ಲೀನರ್: ವಿಂಡೋ ಕ್ಲೀನರ್ ಬಗ್ಗೆ ಸಾಕಷ್ಟು ಮಂದಿಗೆ ತಿಳಿದಿರುವುದಿಲ್ಲ. ಸಾಮಾನ್ಯವಾಗಿ ಇದನ್ನು ಬಟ್ಟೆ ಒಗೆಯಲು ಸಹ ಬಳಸಬಹುದು. ಇದರಲ್ಲಿ ಅಮೋನಿಯಾ-ಆಧಾರಿತ ಸ್ಪ್ರೇ-ಆನ್ ವಿಂಡೋ ಕ್ಲೀನರ್ ಇರುತ್ತದೆ. ಬಟ್ಟೆಯ ಮೇಲೆ ಬಣ್ಣದ ಕಲೆಗಳು ಎಲ್ಲಿದೆಯೋ ಅಲ್ಲಿ ವಿಂಡೋ ಕ್ಲೀನರ್ ಸ್ಪ್ರೇ ಮಾಡಿ, 15-20 ನಿಮಿಷಗಳ ಕಾಲ ಬಿಡಿ. ನಂತರ ಬಟ್ಟೆಯನ್ನು ನಿಮ್ಮ ಕೈಗಳಿಂದ ಉಜ್ಜಿ ತೊಳೆಯಿರಿ.