Happy Family: ಕುಟುಂಬದ ಸಂತೋಷ ಕಾಪಾಡಬೇಕು ಎಂದ್ರೆ ಈ ಅಂಶ ಮರೆಯಬೇಡಿ
ವ್ಯಕ್ತಿಯೊಬ್ಬನ ಸಂತೋಷದ ಜೀವನದ ಗುಟ್ಟು ಅಡಗಿರುವುದು ಆತನ ಕುಟುಂಬದಲ್ಲಿ(Family). ಕುಟುಂಬದಲ್ಲಿ ಖುಷಿ, ನೆಮ್ಮದಿ ಇದ್ದರೆ, ವ್ಯಕ್ತಿ ತನ್ನ ಬದುಕಿನಲ್ಲಿ ಅರ್ಧ ಯಶಸ್ಸು ಕಂಡಂತೆ ಇದೇ ಕಾರಣಕ್ಕೆ ಕುಟುಂಬ ಸದಸ್ಯರ ನಗು, ಸಂತೋಷ ಕಾಪಾಡುವುದು ಅತ್ಯವಶ್ಯಕ.
ಅನೇಕರು ಕುಟುಂಬ ಅದರ ಪಾಡಿಗೆ ಇರುತ್ತದೆ ಎಂಬ ಅಸಡ್ಡೆ ಹೊಂದಿರುತ್ತದೆ. ಆದರೆ, ಈ ನಿರ್ಲಕ್ಷ್ಯತನಕ್ಕೆ ಭಾರೀ ಬೆಲೆ ತೆತ್ತಿರುವವರನ್ನು ನಮ್ಮ ನಡುವೆ ನೋಡಿರುತ್ತೇವೆ. ಈ ಹಿನ್ನಲೆ ಕುಟುಂಬಕ್ಕೆ ಗಮನ ಕೊಡುವುದು ಅವಶ್ಯ. (Photo: pixel.com)
2/ 8
ಸಮಯ ನೀಡಿ: ಕುಟುಂಬದ ಸದಸ್ಯರಿಗೆ ಅವಶ್ಯಕವಾಗಿ ಬೇಕಾಗಿರುವುದು ನಿಮ್ಮ ದುಬಾರಿ ಉಡುಗೊರೆಗಳಲ್ಲ, ನಿಮ್ಮ ಅತ್ಯಮೂಲ್ಯ ಸಮಯ. ಕುಟುಂಬದೊಂದಿಗೆ ಸಮಯ ಕಳೆದಷ್ಟು, ಅವರನ್ನು ನೀವು, ನಿಮ್ಮನ್ನು ಅವರು ಅರ್ಥ ಮಾಡಿಕೊಳ್ಳುವಲ್ಲಿ ಸಹಾಯಕವಾಗುತ್ತದೆ. (Photo: pixel.com)
3/ 8
ಪ್ರಮುಖ ದಿನಾಂಕಗಳನ್ನು ಮರೆಯದಿರಿ: ಮದುವೆಯಾದ ಹೊಸದರಲ್ಲಿ ಇರುವ ಆಕರ್ಷಣೆ ವರ್ಷ ಕಳೆದಂತೆ ಮರೆಯಾಗುವುದು ಸಹಜ. ಇಂತಹ ಸಮಯದಲ್ಲಿ ಬರುವ ವಾರ್ಷಿಕೋತ್ಸವಗಳು, ಹುಟ್ಟುಹಬ್ಬಗಳು ನಿಮ್ಮ ಹಳೆಯ ದಿನದ ಖುಷಿಯನ್ನೆ ನೆನಪಿಸುತ್ತವೆ. ಇದೇ ಕಾರಣಕ್ಕೆ ಈ ದಿನಗಳನ್ನು ಮರೆಯದೇ ಆಚರಿಸಿ. (Photo: pixel.com)
4/ 8
ಔಟಿಂಗ್ ಮಾಡಿ: ಮಕ್ಕಳು ಶಾಲೆ, ಪಾಠದಲ್ಲಿ ಮಗ್ನರಾಗಿ, ಗಂಡ ಹೆಂಡತಿ ಕಚೇರಿ ಕೆಲಸಗಳಲ್ಲಿ ಮುಳಗಿದ್ರೆ ಅದನ್ನು ಸುಂದರ ಸಂಸಾರ ಎನ್ನಲೂ ಸಾಧ್ಯವಿಲ್ಲ. ಈ ಹಿನ್ನಲೆ ತಿಂಗಳಿಗೆ ಒಮ್ಮೆಯಾದರೂ ಚಿಕ್ಕ ಚಿಕ್ಕ ಔಟಿಂಗ್ ನಡೆಸುವುದು ಅವಶ್ಯ. (Photo: pixel.com)
5/ 8
ಸರ್ಪ್ರೈಸ್ ನೀಡಿ: ಪ್ರಮುಖ ದಿನಾಂಕಗಳ ಹೊರತಾಗಿ ಸಾಮಾನ್ಯ ದಿನಗಳಲ್ಲೇ ನಿಮ್ಮ ಸಂಗಾತಿ, ಮಕ್ಕಳಿಗೆ ವಿಶೇಷ ಅಚ್ಚರಿಯ ಉಡುಗೊರೆ ಅಥವಾ ಇನ್ನೇದರೂ ಆಯೋಜನೆಗಳನ್ನು ಮಾಡುವ ಮೂಲಕ ಅವರ ಖುಷಿ ಹೆಚ್ಚಿಸಬಹುದು. (Photo: pixel.com)
6/ 8
ಬೆನ್ನೆಲುಬಾಗಿರಿ: ಕೆಲಸದಲ್ಲೇ ಆಗಲಿ, ಮಾನಸಿಕವಾಗಲಿ ಆಸರೆ ಎಂಬುದು ಪ್ರತಿಯೊಬ್ಬರಿಗೂ ಅವಶ್ಯ. ಈ ಹಿನ್ನಲೆ ಈ ಅವರ ಕೆಲಸದಲ್ಲಿ ಸಮಸ್ಯೆಗಳಲ್ಲಿ ನೀವು ಭಾಗಿಯಾಗಿ ಅದರ ಸಮಪಾಲು ಪಡೆದರೆ ಅದು ನಿಮ್ಮ ಕುಟುಂಬದ ಬುನಾದಿಯನ್ನು ಇನ್ನಷ್ಟು ಗಟ್ಟಿ ಮಾಡುತ್ತದೆ. (Photo: pixel.com)
7/ 8
ಮಾತುಕತೆ: ಪ್ರತಿಯೊಂದು ಸಮಸ್ಯೆಗಳ ನಿವಾರಣೆಗೆ ಕುಳಿತು ಮಾತನಾಡುವುದು ಅವಶ್ಯ. ಇಂತಹ ಮಾತುಗಳು ಕಣ್ಮರೆಯಾದಾಗ ಅಂತರ ಹೆಚ್ಚುವುದು ಹೆಚ್ಚು. ಈ ಹಿನ್ನಲೆ ದಿನದಲ್ಲಿ ಸಾಧ್ಯವಾದಷ್ಟು ಎದುರಿಗೆ ಕುಳಿತು ನಿಮ್ಮ ದಿನಚರಿ ಬಗ್ಗೆ ಪರಸ್ಪರ ತಿಳಿಸಿ. (Photo: pixel.com)
8/ 8
ನಂಬಿಕೆ: ಪ್ರತಿಯೊಂದು ಸಂಬಂಧದ ಬೇರು ಈ ನಂಬಿಕೆ. ಇಂತಹ ನಂಬಿಕೆಗೆ ಘಾಸಿಯಾಗುವ ಕೆಲಸ ಮಾಡಬೇಡಿ. ಇಬ್ಬರ ನಡುವೆ ಯಾವುದೇ ಮುಚ್ಚು ಮರೆಯಿಲ್ಲದಿರುವುದು ಅವಶ್ಯ. ಈ ರೀತಿ ಮುಚ್ಚು ಮರೆ ಹೆಚ್ಚಾದಲ್ಲಿ ಅಲ್ಲಿ ಅಪನಂಬಿಕೆ ಶುರುವಾಗದೇ ಇರದು. (Photo: pixel.com)