ಎಷ್ಟೇ ರೀತಿ ಮಾಂಸಾಹಾರಗಳಿದ್ದರೂ, ಜನ ಹೆಚ್ಚಾಗಿ ಕೋಳಿ ಮಾಂಸವನ್ನೇ ಸೇವಿಸುತ್ತಾರೆ. ಇತರ ಮಾಂಸಗಳಿಗೆ ಹೋಲಿಸಿದರೆ, ಕೋಳಿ ಬೆಲೆ ಕೂಡ ಕಡಿಮೆ. ವೀಕೆಂಡ್ ಬಂದ್ರೆ ಮೂರು ಹೊತ್ತು ಬಿರಿಯಾನಿ ತಿನ್ನುವವರಿದ್ದಾರೆ. ಅಲ್ಲದೇ ಗ್ರಾಹಕರನ್ನು ಸೆಳೆಯಲು ಹಲವಾರು ರೆಸ್ಟೂರೆಂಟ್ಗಳು, ಹೋಟೆಲ್ಗಳಿದೆ. ಚಿಕನ್ ಪ್ರಿಯರಿಗೆಂದೇ ನಾನಾ ವೆರೈಟಿ ಫುಡ್ಗಳಿದೆ. (Image credit Pixabay)
ನಗರದಲ್ಲಿ ಬಿರಿಯಾನಿ, ಫಾಸ್ಟ್ ಫುಡ್ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಎಲ್ಲೆಂದರಲ್ಲಿ ಬಿರಿಯಾನಿ ಪಾಯಿಂಟ್ಗಳು ಕಾಣಿಸುತ್ತಿವೆ. Zomato ಮತ್ತು Swiggy ಯಂತಹ ಆನ್ಲೈನ್ ಸೇವೆಗಳು ಬಿಸಿ ಬಿಸಿ ಬಿರಿಯಾನಿಯನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತಿವೆ. ಆನ್ಲೈನ್ನಲ್ಲಿ ಆರ್ಡರ್ ಮಾಡಿದ ಆಹಾರದಲ್ಲಿ ಶೇಕಡಾ 90 ರಷ್ಟು ಮಾಂಸಾಹಾರಿ ಬಿರಿಯಾನಿ ಆಗಿದೆ. (Image credit Pixabay)