ಮೂಗಿನ ಅಂಚುಗಳಲ್ಲಿ ನೇರವಾಗಿ ರಕ್ತ ಸಂಚಾರವನ್ನು ಮೆದುಳಿಗೆ ವರ್ಗಾಯಿಸುವಂತಹ ರಕ್ತನಾಳಗಳು ಇವೆ. ಈ ಹಿನ್ನೆಲೆ ಮೂಗಿನ ಹೊಳ್ಳೆಯಲ್ಲಿ ನಿರ್ದಾಕ್ಷಿಣ್ಯವಾಗಿ ಕೂದಲನ್ನು ತೆಗೆದರೆ ಅದರಿಂದ ಮೆದುಳಿಗೂ ಕೂಡ ಹಾನಿಯಾಗುವ ಸಾಧ್ಯತೆ ಇದೆ. ಹಾಗಾಗಿ ಒಂದು ವೇಳೆ ಮೂಗಿನ ಹೊಳ್ಳೆಯಿಂದ ಕೂದಲನ್ನು ತೆಗೆಯಲು ಮುಂದಾದರೆ, ಇದು ನೇರವಾಗಿ ದೇಹದ ರೋಗ ನಿರೋಧಕ ಶಕ್ತಿ ಮೇಲೆ ಪ್ರಭಾವ ಬೀರುವ ಜೊತೆಗೆ ಮೆದುಳಿಗೆ ಉಂಟಾಗುವ ರಕ್ತ ಸಂಚಾರದಲ್ಲಿ ವ್ಯತ್ಯಾಸ ಮಾಡುತ್ತದೆ. ಇದರಿಂದ ಸಾವೂ ಸಂಭವಿಸುವ ಸಾಧ್ಯತೆ ಹೆಚ್ಚು.