2017ರಲ್ಲಿ ಕೇಂದ್ರ ಸರ್ಕಾರ ಈ ಪಟ್ಟಿಗೆ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಸಹ ಪ್ರಯಾಣಿಕರಿಗೆ ದೈಹಿಕ, ಮಾತುಕಟತೆ ಮೂಲಕ ಅಥವಾ ಇನ್ನಾವುದೇ ಆಕ್ಷೇಪಾರ್ಹ ವರ್ತನೆಯಿಂದ ಕಿರುಕುಳ ನೀಡುವ ಅಥವಾ ಪ್ರಯಾಣಕ್ಕೆ ಅಡ್ಡಿಪಡಿಸಲು ಪ್ರಯತ್ನಿಸುವ ಪ್ರಯಾಣಿಕರನ್ನು ನೊ-ಫ್ಲೈ ಪಟ್ಟಿಯಲ್ಲಿ ಇರಿಸಲಾಗುತ್ತದೆ. ಪ್ರಯಾಣಿಕರೊಬ್ಬರು ದೂರು ನೀಡಿದ ನಂತರ, ತನಿಖೆಯ ನಂತರವೇ ಅವರನ್ನು ಹಾರಾಟ ನಿಷೇಧ ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಹೇಳಲಾಗಿದೆ.