ಹೆಚ್ಚಿನ ಜನರು ಅಡುಗೆಯನ್ನು ತ್ವರಿತವಾಗಿ ಮಾಡಲು ದೊಡ್ಡ ಬೆಂಕಿಯಲ್ಲಿ ಬೇಯಿಸುತ್ತಾರೆ. ಆದರೆ ಹೀಗೆ ಮಾಡುವುದರಿಂದ ಹೆಚ್ಚು ಗ್ಯಾಸ್ ವ್ಯರ್ಥವಾಗುತ್ತದೆ. ಮಧ್ಯಮ ಉರಿಯಲ್ಲಿ ಅಡುಗೆ ಮಾಡುವುದರಿಂದ ಗ್ಯಾಸ್ ಉಳಿತಾಯವಾಗುತ್ತದೆ. ಹಾಗೆಯೇ ಫ್ರಿಡ್ಜ್ ನಿಂದ ನೇರವಾಗಿ ತರಕಾರಿಗಳನ್ನು ತಂದು ಬೇಯಿಸಬೇಡಿ. ಕೋಣೆಯ ಉಷ್ಣಾಂಶವನ್ನು ತಲುಪಿದ ನಂತರ ಮಾತ್ರ ಬೇಯಿಸಿ. ಇಲ್ಲದಿದ್ದರೆ ಅಡುಗೆ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.. ಗ್ಯಾಸ್ ಹೆಚ್ಚು ಖರ್ಚಾಗುತ್ತದೆ. ಈ ಸಲಹೆಗಳನ್ನು ಅನುಸರಿಸಿದರೆ ಸಾಮಾನ್ಯವಾಗಿ 4 ತಿಂಗಳು ತೆಗೆದುಕೊಳ್ಳುವ ಗ್ಯಾಸ್ 6 ತಿಂಗಳವರೆಗೆ ಇರುತ್ತದೆ.