ದೇಹದ ತೂಕ ಹೆಚ್ಚಿಸಿಕೊಂಡ ಬಳಿಕ ಇನ್ನು ನನಗೆ, ನನ್ನ ಈ ದೇಹದ ತೂಕವನ್ನು ಇಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಜೀವನದಲ್ಲಿ ಜಿಗುಪ್ಸೆಯನ್ನು ಹೊಂದದಿರಿ. ಇದಕ್ಕಾಗಿ ಸರಿಯಾದ ಆಹಾರ ಪದ್ಧತಿ ಹಾಗೂ ಜೀವನಶೈಲಿ ಯನ್ನು ಅನುಸರಿಸಿಕೊಂಡು ಹೋಗುವುದರ ಜೊತೆಗೆ, ದಿನನಿತ್ಯ ವ್ಯಾಯಾಮವನ್ನು ಮಾಡುವ ಮೂಲಕ ಖಂಡಿತವಾಗಿಯೂ ಆರೋಗ್ಯಕರವಾದ ದೇಹವನ್ನು ಹೊಂದಬಹುದು. ಇದರ ಜೊತೆಗೆ ನಿಮ್ಮ ಮೇಲೆ ನಿಮಗೆ ಆತ್ಮವಿಶ್ವಾಸ ಇರಬೇಕು.