ಉಪವಾಸ ಮಾಡುವಾಗ ಕೆಲವರು ಹಣ್ಣುಗಳನ್ನು ತಿನ್ನುತ್ತಾರೆ. ಇನ್ನೂ ಕೆಲವರು ನೀರು ಮಾತ್ರ ಕುಡಿಯುತ್ತಾರೆ. ಮತ್ತೆ ಕೆಲವರು ಉಪವಾಸ ಮಾಡುವಾಗ ಬೇಯಿಸಿದ ಆಲೂಗಡ್ಡೆ, ಸಜ್ಜೆ, ಗೋಧಿ ಹಿಟ್ಟು ಮತ್ತು ಮೈದಾ ಹಿಟ್ಟಿನಿಂದ ತಯಾರಿಸಿದ ಪದಾರ್ಥ ಮಾತ್ರ ತಿನ್ನುತ್ತಾರೆ. ಆದರೆ ಆಲೂಗಡ್ಡೆ ತಿಂದರೆ ತೂಕ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ಅಷ್ಟಕ್ಕೂ ಇದು ನಿಜನಾ ಎಂದು ಕಂಡುಹಿಡಿಯೋಣ ಬನ್ನಿ.
ಆಲೂಗಡ್ಡೆ ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸಲು ಆಲೂಗಡ್ಡೆ ಕಾರಣವಾಗುತ್ತದೆ. ಇನ್ಸುಲಿನ್ ಬಿಡುಗಡೆಯು ಕೊಬ್ಬಿನ ಶೇಖರಣೆಯನ್ನು ಉತ್ತೇಜಿಸುತ್ತದೆ. ಆಲೂಗಡ್ಡೆ ಪ್ರೋಟೀನ್ನ ಮೂಲವಲ್ಲ. ಉಪವಾಸದ ಸಮಯದಲ್ಲಿ ಕಡಿಮೆ ಪ್ರೋಟೀನ್ ಆಹಾರವನ್ನು ಸೇವಿಸುವುದರಿಂದ ಸ್ನಾಯುಗಳ ನಷ್ಟ ಮತ್ತು ಹೆಚ್ಚಿದ ಹಸಿವು ಉಂಟಾಗುತ್ತದೆ.