ಚರ್ಮದ ಆರೈಕೆ ವಿಚಾರಕ್ಕೆ ಬಂದಾಗ ಶಿಶುಗಳ ಚರ್ಮದ ಬಗ್ಗೆ ವಿಶೇಷ ಗಮನ ಹರಿಸಬೇಕು. ನವಜಾತ ಶಿಶುವಿನ ಚರ್ಮವು ವಯಸ್ಕರ ಚರ್ಮಕ್ಕಿಂತ 30% ತೆಳ್ಳಗಿರುತ್ತದೆ. ಆದ್ದರಿಂದ ಅದು ಬೇಗನೆ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಅಷ್ಟೇ ಅಲ್ಲದೇ ಅಲರ್ಜಿಗಳು, ದದ್ದುಗಳು ಸೇರಿದಂತೆ ವಿವಿಧ ಸಮಸ್ಯೆಗಳು ಮಕ್ಕಳಿಗೆ ಸುಲಭವಾಗಿ ಬರಬಹುದು. ಹಾಗಾಗಿ ಶಿಶುಗಳಿಗೆ ಮೀಸಲಾದ ಉತ್ಪನ್ನಗಳನ್ನು ಮಾತ್ರ ಬಳಸಬೇಕು. ಆದರೆ ಅವುಗಳಲ್ಲಿ ಕೆಲವು ರಾಸಾಯನಿಕಗಳು ಸೇರಿರುತ್ತದೆ. ಆದ್ದರಿಂದ ಮಗುವಿನ ಚರ್ಮದ ಆರೈಕೆ ಉತ್ಪನ್ನಗಳನ್ನು ಆಯ್ಕೆಮಾಡುವ ಮುನ್ನ ವೈದ್ಯರ ಸಲಹೆಯ ಅಗತ್ಯವಿರುತ್ತದೆ. ಮಗುವಿನ ಚರ್ಮದ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಎಂಬುದರ ಕುರಿತು ವೈದ್ಯರ ನೀಡಿದ ಕೆಲ ಶಿಫಾರಸುಗಳು ಮತ್ತು ಮಾರ್ಗದರ್ಶನಗಳು ಈ ಕೆಳಗಿನಂತಿದೆ.
ಶಿಶುಗಳ ತ್ವಚೆಯ ಆರೈಕೆಯ ವಿಷಯಕ್ಕೆ ಬಂದಾಗ, ವೈದ್ಯರು ತಮ್ಮ ಚರ್ಮವನ್ನು ದೀರ್ಘಕಾಲದವರೆಗೆ ತೇವಗೊಳಿಸುವಂತೆ ಚರ್ಮದ ಆರೈಕೆಯ ದಿನಚರಿಯನ್ನು ಅನುಸರಿಸಲು ಶಿಫಾರಸು ಮಾಡುತ್ತಾರೆ. ನವಜಾತ ಶಿಶುವಿಗೆ ಸೂಕ್ತವಾದ ಚರ್ಮದ ಆರೈಕೆಯ ಕಟ್ಟುಪಾಡುಗಳನ್ನು ಕಂಡುಹಿಡಿಯುವುದು ಸುಲಭವಲ್ಲ. ಹಾಗಾಗಿ ಮಕ್ಕಳ ತಜ್ಞರು ಸೇರಿದಂತೆ ವಿವಿಧ ಹೆಸರಾಂತ ಆಸ್ಪತ್ರೆಗಳಲ್ಲಿನ ಮಕ್ಕಳ ತಜ್ಞರು ಮತ್ತು ಸಲಹೆಗಾರರು ಮಕ್ಕಳ ತ್ವಚೆಯ ಆರೈಕೆಯನ್ನು ಸೂಚಿಸುವ 3 ವಿಷಯಗಳ ಬಗ್ಗೆ ನಮಗೆ ತಿಳಿಸಿದ್ದಾರೆ.
ಸಾಕಷ್ಟು ಮಾಯಿಶ್ಚರೈಸರ್: ಮಾಯಿಶ್ಚರೈಸರ್ ವಯಸ್ಕರಿಗೆ ಮಾತ್ರ ಚರ್ಮದ ಆರೈಕೆ ಉತ್ಪನ್ನವಲ್ಲ. ಇದು ಮಗುವಿಗೆ ಸಹ ಬಹಳ ಮುಖ್ಯವಾಗಿದೆ. ಬೆಚ್ಚಗಿನ ಅಥವಾ ಬಿಸಿನೀರಿನಲ್ಲಿ ಸ್ನಾನ ಮಾಡುವುದು, ಬಟ್ಟೆಯ ಹಲವು ಪದರಗಳನ್ನು ಧರಿಸುವುದು, ತೆವಳುವುದು ಮತ್ತು ಓಡುವುದು ಚರ್ಮವನ್ನು ತ್ವರಿತವಾಗಿ ಶಾಖಕ್ಕೆ ಒಡ್ಡುತ್ತದೆ, ಇದು ತೇವಾಂಶವನ್ನು ಕಳೆದುಕೊಂಡು ಒಣಗಲು ಕಾರಣವಾಗುತ್ತದೆ.
ವೈದ್ಯರು ಶಿಫಾರಸು ಮಾಡಿದ ಮಗುವಿನ ಚರ್ಮದ ಆರೈಕೆ ಉತ್ಪನ್ನಗಳನ್ನು ಖರೀದಿಸಿ ಮತ್ತು ಬಳಸಿ, ಅದು ಮೃದುವಾದ ಮತ್ತು ಚರ್ಮದಿಂದ ತೇವಾಂಶನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ವಿಶಿಷ್ಟವಾಗಿ, ಶಿಶುಗಳಿಗೆ ಮಾರಾಟವಾಗುವ ಉತ್ಪನ್ನಗಳಲ್ಲಿ ಹಾಲಿನ ಪ್ರೋಟೀನ್, ವಿಟಮಿನ್ ಇ, ವಿಟಮಿನ್ ಬಿ 5, ಅಲೋವೆರಾ ಮತ್ತು ವಿವಿಧ ಚರ್ಮದ ಪೋಷಕಾಂಶಗಳು ಸೇರಿವೆ. ಇವುಗಳಲ್ಲಿ ಚರ್ಮಕ್ಕೆ ಸಮಸ್ಯೆಯನ್ನು ಉಂಟು ಮಾಡುವ ಯಾವುದೇ ವಸ್ತುಗಳು ಅಥವಾ ರಾಸಾಯನಿಕಗಳು ಇರುವುದಿಲ್ಲ ಎಂಬುವುದು ಗಮನಾರ್ಹ ವಿಚಾರವಾಗಿದೆ. ಬೇಬಿ ಲೋಷನ್ ಅನ್ನು ದೇಹಕ್ಕೆ ಮತ್ತು ಕ್ರೀಮ್ ಅನ್ನು ಮುಖಕ್ಕೆ ಬಳಸಬೇಕು.