ಮಳೆಗಾಲ, ಬೇಸಿಗೆ ಕಾಲ, ಚಳಿಗಾಲ, ಯಾವುದೇ ಸೀಸನ್ ನಲ್ಲಿ ಸೊಳ್ಳೆಗಳ ಕಾಟ ಸಾಮಾನ್ಯ. ಈ ಸಮದರ್ಭದಲ್ಲಿ ಸೊಳ್ಳೆಗಳು ಜನರನ್ನು ಕಚ್ಚುವುದು ಸಹಜ. ಅದರಲ್ಲೂ ಮಾನ್ಸೂನ್ ಮತ್ತು ಬೇಸಿಗೆಯಲ್ಲಿ ರಾತ್ರಿ ಸಮಯದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿಯೇ ಇರುತ್ತದೆ. ಹಾಗಿದ್ರೆ ಈ ಸೊಳ್ಳೆಗಳು ಏಕೆ ಕಚ್ಚುತ್ತವೆ, ಇದರಿಂದಾಗುವ ಬದಲಾವಣೆಗಳಿಗೆ ಕಾರಣ ಏನು ಎಂಬುದನ್ನು ತಿಳಿದಿದ್ದೀರಾ? ಇದರ ಹಿಂದೆಯೂ ಒಂದು ಕುತೂಹಲಕಾರಿ ಕಥೆಯಿದೆ.
ಇನ್ನು ಸೊಳ್ಳೆಗಳಲ್ಲಿ ಎರಡು ವಿಧವಿದೆ. ಈ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಷಯವೇ, ಆದರೆ ಅದರಲ್ಲಿ ಗಂಡು ಸೊಳ್ಳೆಗಳು ಕಚ್ಚುವುದಿಲ್ಲ ಮತ್ತು ಅವುಗಳಿಂದ ಯಾವುದೇ ರೀತಿಯ ರೋಗಗಳು ಸಹ ಬರುವುದಿಲ್ಲ. ಅದೇ ಹೆಣ್ಣು ಸೊಳ್ಳೆಗಳು ಕಚ್ಚಿದ್ರೆ ರೋಗಗಳು ಬಂದೇ ಬರುತ್ತದೆ. ಅವು ಮನುಷ್ಯರಿಗೆ ಕಚ್ಚಿ ರಕ್ತವನ್ನು ಹೀರುತ್ತವೆ. ಅದೇ ರೀತಿ ಈ ಹೆಣ್ಣು ಸೊಳ್ಳೆಗಳು ರಕ್ತವಿಲ್ಲದೆ ಮೊಟ್ಟೆಗಳನ್ನು ಇಡಲು ಸಾಧ್ಯವೇ ಇಲ್ಲ.