ಕಾಫಿ ಕುಡಿಯಲು ಉತ್ತಮ ಸಮಯ ಯಾವುದು?: ಬೆಳಿಗ್ಗೆ ಕಾಫಿ ಕುಡಿಯುವುದರಿಂದ ನೀವು ದಿನವಿಡೀ ನಿರೀಕ್ಷಿಸುವ ಲಾಭವನ್ನು ಪಡೆಯಲು ಸಾಧ್ಯವಿಲ್ಲ. ಏಕೆಂದರೆ ನಿಮ್ಮ ದೇಹದಲ್ಲಿ ಕಾರ್ಟಿಸೋಲ್ ಮಟ್ಟವು ಬೆಳಿಗ್ಗೆ ಅತ್ಯಧಿಕವಾಗಿರಬೇಕು. ಇದು ಒಬ್ಬನನ್ನು ಎಚ್ಚರವಾಗಿ ಮತ್ತು ಶಕ್ತಿಯುತವಾಗಿಡುವ ಅಣು ಎಂದು ತಿಳಿದಿದೆ. ಆದರೆ ಬೆಳಿಗ್ಗೆ ಎದ್ದಾಗ ಕಾಫಿ ಕುಡಿಯುವುದರಿಂದ ಕಾರ್ಟಿಸೋಲ್ ಉತ್ಪಾದನೆಯನ್ನು ಕಡಿಮೆ ಮಾಡಬಹುದು.
ಆದ್ದರಿಂದ, ನೀವು ಪ್ರತಿ ಬಾರಿ ಕಾಫಿ ಕುಡಿಯುವಾಗ ಆದಷ್ಟು ಕಡಿಮೆ ಪ್ರಮಾಣದಲ್ಲಿ ಕುಡಿಯುವುದು ಉತ್ತಮ. ಅಂತೆಯೇ, ನಿಮ್ಮ ಸಂಜೆಯ ಕಾಫಿಯನ್ನು ತಡವಾಗಿ ತೆಗೆದುಕೊಳ್ಳಬೇಡಿ. ಇದನ್ನು ತಡವಾಗಿ ತೆಗೆದುಕೊಂಡರೆ ನಿದ್ರಾಹೀನತೆಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. (Disclaimer: ಮೇಲಿನ ಲೇಖನದ ವರದಿಯು ತಜ್ಞರು ಹೇಳಿದಂತ ಮತ್ತು ಸಾರ್ವಜನಿಕರ ಅಭಿಪ್ರಾಯದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)