Most Amazing Bosses: ಒಳ್ಳೆಯ ಬಾಸ್ ಎನಿಸಿಕೊಳ್ಳಬೇಕೆಂದರೆ ಈ 5 ಗುಣಗಳನ್ನು ಹೊಂದಿರಬೇಕು..
Amazing boss: ನೀವು ಒಬ್ಬ/ಒಬ್ಬಳು ಉತ್ತಮ ನಾಯಕ/ನಾಯಕಿ ಎನಿಸಿಕೊಳ್ಳಬೇಕಾದರೆ ಕೆಲವೊಂದು ಗುಣಗಳನ್ನು ಹೊಂದಿರಬೇಕು. ಅದ್ಭುತ ಬಾಸ್ ಆಗಲು ಬಯಸುವವರು ಈ 5 ಸಣ್ಣ ಅಭ್ಯಾಸಗಳನ್ನು ತಪ್ಪದೇ ಅನುಸರಿಸಿದರೆ ಒಳಿತು.
ಎಲ್ಲರೂ ಒಳ್ಳೆಯ ಬಾಸ್ ಆಗಲು ಸಾಧ್ಯವಿಲ್ಲ.. ಎಲ್ಲರ ಪ್ರೀತಿಗೆ ಪಾತ್ರರಾಗಲು, ಎಲ್ಲರಲ್ಲಿ ಒಬ್ಬರಾಗಲು ಪ್ರಯತ್ನಿಸುವುದರಿಂದ ಏನನ್ನೂ ಕಳೆದುಕೊಳ್ಳುವುದಿಲ್ಲ. ಈ ಚಿಕ್ಕ ಸೂಕ್ಷ್ಮ ಕೌಶಲ್ಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ನಿಮ್ಮ ಉದ್ಯೋಗಿಗಳೊಂದಿಗೆ ಬೆರೆತರೆ ಅವರೂ ನಿಮ್ಮನ್ನು ಗೌರವಿಸುತ್ತಾರೆ.
2/ 6
ಬಾಸ್ ಆಗಿ ನೀವೇ ಕೆಲಸ ಮಾಡದೇ ಇರುವುದು ಉದ್ಯೋಗಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅವರು ಕೆಲಸ ಮಾಡಲು ಅಥವಾ ತಮ್ಮ 100% ನೀಡಲು ಹಿಂದೇಟು ಹಾಕುತ್ತಾರೆ. ಕಾರ್ಯಕ್ಷಮತೆಯ ವಿಷಯಕ್ಕೆ ಬಂದಾಗ ಒಬ್ಬ ಶ್ರೇಷ್ಠ ಬಾಸ್ ಸಾಮಾನ್ಯವಾಗಿ ಕೆಲಸಕಾರರಿಗೆ ಸರಿಸಮನಾಗಿ ಕೆಲಸ ಮಾಡುತ್ತಾನೆ.
3/ 6
ಒಳ್ಳೆಯ ಬಾಸ್ ಯಾವಾಗಲೂ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಾರೆ. ನಿಮ್ಮ ಕೆಲಸಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುತ್ತಾರೆ. ಕೆಲಸಗಾರರಿಗೆ ತೊಂದರೆ ಆಗುವ ವಿಷಯಗಳನ್ನು ಬದಲಾಯಿಸುತ್ತಾರೆ.
4/ 6
ನಾಯಕತ್ವದ ಜೊತೆಗೆ ಆಶಾವಾದಿ ಧೋರಣೆ ಇರಬೇಕು. ಯೋಜನೆಯ ಬಗ್ಗೆ ಬಾಸ್ ಗೇ ವಿಶ್ವಾಸವಿಲ್ಲದಿದ್ದರೆ, ಅದು ಒಟ್ಟಾರೆಯಾಗಿ ನಿಮ್ಮ ತಂಡದಲ್ಲಿ ಕಾಣುತ್ತದೆ. ಒಳ್ಳೆಯ ಮೇಲಧಿಕಾರಿಗಳು ಯಾವಾಗಲೂ ನಗು ಮುಖವನ್ನು ಹೊಂದಿರುತ್ತಾರೆ. ತಂಡವು ಕೈಗೊಂಡ ಕೆಲಸದ ಬಗ್ಗೆ ತುಂಬಾ ಆಶಾವಾದಿಯಾಗಿರುತ್ತಾರೆ.
5/ 6
ಉತ್ತಮ ನಾಯಕ ಯಾವಾಗಲೂ ಅಗತ್ಯವಿದ್ದಲ್ಲಿ ಅವರ ತಂಡಕ್ಕೆ ಕಲಿಸುತ್ತಾರೆ. ಕೆಲಸವನ್ನು ಸ್ವತಃ ಮಾಡುವ ಮೂಲಕ ಒಂದು ಉದಾಹರಣೆಯನ್ನು ಸೆಟ್ ಮಾಡುತ್ತಾರೆ. ಜ್ಞಾನವನ್ನು ತಮ್ಮಲ್ಲಿಯೇ ಇಟ್ಟುಕೊಳ್ಳದೆ ಹಂಚಿಕೊಳ್ಳುತ್ತಾರೆ.
6/ 6
ಪ್ರತಿಯೊಬ್ಬ ಮನುಷ್ಯನು ವಿಭಿನ್ನ. ಪ್ರತಿಯೊಬ್ಬ ಉದ್ಯೋಗಿಗೆ ತನ್ನದೇ ಆದ ಸಾಮರ್ಥ್ಯವಿದೆ. ಬಾಸ್ ಅವನ/ಅವಳ ವ್ಯಕ್ತಿತ್ವವನ್ನು ಗಮನಿಸಿ ಗೌರವದಿಂದ ಕಾಣಬೇಕು. ಅಷ್ಟೇ ಅಲ್ಲ ಮಾನವೀಯತೆಯನ್ನು ಗೌರವಿಸುವುದು ಕೂಡ ಬಹಳ ಮುಖ್ಯ. ಉದ್ಯೋಗಿಗಳೂ ಸಾಧಾರಣ ಮನುಷ್ಯರೇ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ.