ಕಣ್ಣು ಹೀಗೆ ಬಡಿದುಕೊಳ್ಳುವುದರ ಅರ್ಥ ಒಳ್ಳೆಯದು ಅಥವಾ ಕೆಟ್ಟದು ಆಗಬಹುದು ಎಂದು ನಂಬಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಲಗಣ್ಣು ಬಡಿದುಕೊಳ್ಳುವುದು ಪುರುಷರಿಗೆ ಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದ ಅವರಿಗೆ ಒಳ್ಳೆಯದಾಗುತ್ತದೆ. ಅವರ ಆಸೆ ಈಡೇರುತ್ತದೆ, ಹಣ ಸಿಗುತ್ತದೆ ಎನ್ನಲಾಗುತ್ತದೆ. ಒಂದು ವೇಳೆ ಎಡಗಣ್ಣು ಬಡಿದುಕೊಂಡರೆ ಹಾನಿಗೊಳಗಾಗುವ ಸಾಧ್ಯತೆ ಇವೆ. ಅವರ ಶತ್ರುವು ಅವರನ್ನು ನೋಯಿಸಬಹುದು ಎಂದು ಹೇಳಲಾಗುತ್ತದೆ.