Colors: ಹೋಳಿಯ ಒಂದೊಂದು ಬಣ್ಣಕ್ಕೂ ಇದೆ ಸುಂದರ ಅರ್ಥ, ರಂಗಿನಾಟ ಆಡುವ ಮುನ್ನ ಮಹತ್ವ ತಿಳ್ಕೊಳ್ಳಿ

ಕೆಲವೊಮ್ಮೆ ನಮ್ಮ ಜೀವನದಲ್ಲಿ ಬಣ್ಣಗಳೇ ಇಲ್ಲದಿದ್ದರೇ ಹೇಗಿರುತ್ತದೆ ಎಂದು ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಜೀವನ ಎಂದ ಮೇಲೆ ಎಲ್ಲ ರೀತಿಯ ಬಣ್ಣಗಳು ಸಹ ಇರಬೇಕು. ಆಗಲೇ ಬದುಕು ಸುಂದರವಾಗಿರುತ್ತದೆ. ಸದ್ಯ ಬಣ್ಣಗಳ ಹಬ್ಬ ಹೋಳಿಯಲ್ಲಿ ಯಾವ ಬಣ್ಣ ಯಾವುದರ ಸಂಕೇತ ಸೂಚಿಸುತ್ತದೆ ಎಂಬ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

First published:

  • 16

    Colors: ಹೋಳಿಯ ಒಂದೊಂದು ಬಣ್ಣಕ್ಕೂ ಇದೆ ಸುಂದರ ಅರ್ಥ, ರಂಗಿನಾಟ ಆಡುವ ಮುನ್ನ ಮಹತ್ವ ತಿಳ್ಕೊಳ್ಳಿ

    ಹೋಳಿ ಹಬ್ಬ ಭಾರತದ ಸಂಸ್ಕೃತಿಯ ಸಂಕೇತ. ಈ ಹಬ್ಬವನ್ನು ಜನ ಬಹಳ ಅದ್ದೂರಿಯಾಗಿ ಆಚರಿಸುತ್ತಾರೆ. ಅದರಲ್ಲಿಯೂ ಉತ್ತರ ಭಾರತದಲ್ಲಿ ಈ ಹಬ್ಬವನ್ನು ಆಚರಿಸುವುದು ಹೆಚ್ಚು. ಹೋಳಿ ಎಂದಾಕ್ಷಣ ಮೊದಲು ಎಲ್ಲರಿಗೂ ಮೊದಲು ನೆನಪಾಗುವುದೇ ಬಣ್ಣ. ಒಬ್ಬರು ಮತ್ತೊಬ್ಬರಿಗೆ ಬಣ್ಣ ಹಚ್ಚುವುದು. ಮೈಗೆಲ್ಲಾ ಬಣ್ಣದ ಕಲರವು ಆ ದಿನ ಹೋಳಿ ಹಬ್ಬಕ್ಕೆ ಕಲೆ ನೀಡುತ್ತದೆ.

    MORE
    GALLERIES

  • 26

    Colors: ಹೋಳಿಯ ಒಂದೊಂದು ಬಣ್ಣಕ್ಕೂ ಇದೆ ಸುಂದರ ಅರ್ಥ, ರಂಗಿನಾಟ ಆಡುವ ಮುನ್ನ ಮಹತ್ವ ತಿಳ್ಕೊಳ್ಳಿ

    ಕೆಲವೊಮ್ಮೆ ನಮ್ಮ ಜೀವನದಲ್ಲಿ ಬಣ್ಣಗಳೇ ಇಲ್ಲದಿದ್ದರೇ ಹೇಗಿರುತ್ತದೆ ಎಂದು ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಜೀವನ ಎಂದ ಮೇಲೆ ಎಲ್ಲ ರೀತಿಯ ಬಣ್ಣಗಳು ಸಹ ಇರಬೇಕು. ಆಗಲೇ ಬದುಕು ಸುಂದರವಾಗಿರುತ್ತದೆ. ಸದ್ಯ ಬಣ್ಣಗಳ ಹಬ್ಬ ಹೋಳಿಯಲ್ಲಿ ಯಾವ ಬಣ್ಣ ಯಾವುದರ ಸಂಕೇತ ಸೂಚಿಸುತ್ತದೆ ಎಂಬ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    MORE
    GALLERIES

  • 36

    Colors: ಹೋಳಿಯ ಒಂದೊಂದು ಬಣ್ಣಕ್ಕೂ ಇದೆ ಸುಂದರ ಅರ್ಥ, ರಂಗಿನಾಟ ಆಡುವ ಮುನ್ನ ಮಹತ್ವ ತಿಳ್ಕೊಳ್ಳಿ

    ಕೆಂಪು: ಹೋಳಿ ಹಬ್ಬದ ದಿನ ಜನ ಮೊದಲು ಆಯ್ಕೆ ಮಾಡುವುದೇ ಕೆಂಪು. ಏಕೆಂದರೆ ಇದು ಶುಭದ ಸಂಕೇತ. ಕೆಂಪು ಬಣ್ಣವನ್ನು ಶಕ್ತಿ, ಉತ್ಸಾಹ, ಮಹತ್ವಾಕಾಂಕ್ಷೆಯ ಸಂಕೇತವೆಂದು ಭಾವಿಸಲಾಗುತ್ತದೆ. ಇಷ್ಟೇ ಅಲ್ಲ ಕೆಂಪು ಬಣ್ಣವನ್ನು ಎಲ್ಲ ಶುಭ ಕಾರ್ಯಗಳಲ್ಲಿ ಕೂಡ ಬಳಸಲಾಗುತ್ತದೆ.

    MORE
    GALLERIES

  • 46

    Colors: ಹೋಳಿಯ ಒಂದೊಂದು ಬಣ್ಣಕ್ಕೂ ಇದೆ ಸುಂದರ ಅರ್ಥ, ರಂಗಿನಾಟ ಆಡುವ ಮುನ್ನ ಮಹತ್ವ ತಿಳ್ಕೊಳ್ಳಿ

    ಹಳದಿ: ಹಳದಿ ಬಣ್ಣವನ್ನು ಸ್ನೇಹ ಮತ್ತು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಸ್ನೇಹಿತರಿಗೆ ಯಾವ ಬಣ್ಣ ಹಚ್ಚುವುದು ಎಂದು ಯೋಚಿಸುತ್ತಿದ್ದರೆ, ಹಳದಿ ಬಣ್ಣವನ್ನು ಹಚ್ಚಿ. ಹಳದಿ ಬಣ್ಣವು ಸಖಾ ಭಾವವನ್ನು ಸೂಚಿಸುತ್ತದೆ. ಹಳದಿ ಬಣ್ಣವನ್ನು ಗುಣಪಡಿಸುವುದು, ಶಾಂತಿ ಮತ್ತು ಸಮೃದ್ಧಿಯ ಸಂಕೇತವೆಂದು ಸಹ ಹೇಳಲಾಗುತ್ತದೆ. ಹಳದಿ ಬಣ್ಣವನ್ನು ದೇವತೆಗಳ ಅಚ್ಚುಮೆಚ್ಚಿನ ಬಣ್ಣ ಎಂದು ಸಹ ಹೇಳಲಾಗುತ್ತದೆ.

    MORE
    GALLERIES

  • 56

    Colors: ಹೋಳಿಯ ಒಂದೊಂದು ಬಣ್ಣಕ್ಕೂ ಇದೆ ಸುಂದರ ಅರ್ಥ, ರಂಗಿನಾಟ ಆಡುವ ಮುನ್ನ ಮಹತ್ವ ತಿಳ್ಕೊಳ್ಳಿ

    ಕೇಸರಿ: ಕೇಸರಿ ಬಣ್ಣವು ಆರೋಗ್ಯಕರ ದೇಹ ಮತ್ತು ಮನಸ್ಸನ್ನು ಸಂಕೇತಿಸುತ್ತದೆ. ಇದು ಆಧ್ಯಾತ್ಮಿಕತೆಯ ಸಂಕೇತ ಕೂಡ ಹೌದು. ಇದು ಧಾರ್ಮಿಕ ಜ್ಞಾನ, ಸಂಯಮ ಮತ್ತು ವೈರಾಗ್ಯವನ್ನು ಸೂಚಿಸುವ ಬಣ್ಣವಾಗಿದೆ. ಅಲ್ಲದೇ ಕೇಸರಿ ಬಣ್ಣ ಶುಭ ಸಂಕಲ್ಪದ ಸಂಕೇತ ಸಹ ಆಗಿದೆ. ಈ ಬಣ್ಣವು ರಾಷ್ಟ್ರದ ಬಗ್ಗೆ ಧೈರ್ಯ ಮತ್ತು ನಿಸ್ವಾರ್ಥ ಭಾವನೆಗಳನ್ನು ತೋರಿಸುತ್ತದೆ.

    MORE
    GALLERIES

  • 66

    Colors: ಹೋಳಿಯ ಒಂದೊಂದು ಬಣ್ಣಕ್ಕೂ ಇದೆ ಸುಂದರ ಅರ್ಥ, ರಂಗಿನಾಟ ಆಡುವ ಮುನ್ನ ಮಹತ್ವ ತಿಳ್ಕೊಳ್ಳಿ

    ಹಸಿರು: ಹಸಿರು ಬಣ್ಣವು ತಂಪಾದತೆ, ತಾಜಾತನ ಮತ್ತು ಸಕಾರಾತ್ಮಕತೆಯನ್ನು ಸಂಕೇತಿಸುತ್ತದೆ. ಹಸಿರು ಪ್ರಕೃತಿಯ ಸೌಂದರ್ಯವನ್ನು ಸೂಚಿಸುತ್ತದೆ. ಬಯಲು ಪ್ರದೇಶಗಳು, ಪರ್ವತಗಳು ಸದಾ ಹಚ್ಚ ಹಸಿರು ಬಣ್ಣದಿಂದ ಕೂಡಿದ್ದು, ಸಕಾರಾತ್ಮಕ ಭಾವನೆ ಮೂಡಿಸುತ್ತದೆ. ಹಸಿರು ಮನಸ್ಸಿಗೆ ಶಾಂತಿ ನೀಡುತ್ತದೆ. ಹಸಿರು ಆತ್ಮವಿಶ್ವಾಸ, ಸಂತೋಷ ಮತ್ತು ತಂಪನ್ನು ನೀಡುತ್ತದೆ.

    MORE
    GALLERIES