ಚಳಿಗಾಲವಾಗರಲಿ ಅಥವಾ ಬೇಸಿಗೆ ಕಾಲ ಆಗಿರಗಲಿ, ತ್ವಚೆಯನ್ನು ಸಮರ್ಪಕವಾಗಿ ತೇವಗೊಳಿಸುವುದು ಬಹಳ ಮುಖ್ಯ. ದೇಹವನ್ನು ತೇವವಾಗಿಡಲು ವಿವಿಧ ಕ್ರೀಂಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ನಾವೆಲ್ಲರೂ ನೈಸರ್ಗಿಕವಾಗಿ ಬಳಸುವ ಕ್ರೀಮ್ಗಳಲ್ಲಿ ಬಾಡಿ ಲೋಷನ್ ಕೂಡ ಒಂದು. ಏಕೆಂದರೆ ಬಾಡಿ ಲೋಷನ್ ದೇಹವನ್ನು ತೇವಾಂಶದಿಂದ ಇಡಲು ಸಹಾಯ ಮಾಡುತ್ತದೆ. ಆದರೆ, ಬಾಡಿಲೋಷನ್ ಬಳಸಲು ಸರಿಯಾದ ಸಮಯ ಯಾವುದು? ಮಾಯಿಶ್ಚರೈಸರ್ಗಳನ್ನು ಯಾವಾಗ ಬಳಸಬೇಕು ಎಂದು ನಿಮಗೆ ಗೊತ್ತಾ? ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಡಲು ಈ ಬಾಡಿ ಲೋಷನ್‌ಗಳನ್ನು ಹೇಗೆ ಬಳಸಬೇಕು. ಈ ಎಲ್ಲ ಗೊಂದಲಕ್ಕೆ ತಜ್ಞರು ಒಂದಷ್ಟು ಟಿಪ್ಸ್ ನೀಡಿದ್ದಾರೆ. ಅವು ಇಲ್ಲಿದೆ ನೋಡಿ.