ಮಕಾ ರೂಟ್‌ನ ಇತರ ಆರೋಗ್ಯ ಪ್ರಯೋಜನಗಳು: ಶಕ್ತಿಯನ್ನು ಹೆಚ್ಚಿಸುತ್ತದೆ: ಮಕಾ ರೂಟ್ ಶಕ್ತಿ, ತ್ರಾಣವನ್ನು ಹೆಚ್ಚಿಸುವುದಲ್ಲದೆ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಏಕೆಂದರೆ ಇದು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್ ಮತ್ತು ಫೈಬರ್ ಅನ್ನು ಹೊಂದಿರುತ್ತದೆ. ಹಾಗೆಯೇ ಇದು ನಿರಂತರ ಶಕ್ತಿಯ ವರ್ಧಕದಂತೆ ಕಾರ್ಯ ನಿರ್ವಹಿಸುತ್ತದೆ. ಜೊತೆಗೆ ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಸುಧಾರಿಸುತ್ತದೆ ಹಾಗೂ ದೈಹಿಕ ಚಟುವಟಿಕೆಯ ಸಮಯದಲ್ಲಿ ಸಹಿಷ್ಣುತೆಯನ್ನು ಸುಧಾರಿಸುತ್ತದೆ.
ಮನಸ್ಥಿತಿಯನ್ನು ಸುಧಾರಿಸುತ್ತದೆ: ಫ್ಲೇವನಾಯ್ಡ್‌ಗಳು ಮತ್ತು ಫೈಟೊನ್ಯೂಟ್ರಿಯೆಂಟ್‌ಗಳಲ್ಲಿ ಸಮೃದ್ಧವಾಗಿರುವ ಮಕಾ ರೂಟ್ ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹಾರ್ಮೋನುಗಳು ಮತ್ತು ಡೋಪಮೈನ್ ಮತ್ತು ಸಿರೊಟೋನಿನ್‌ನಂತಹ ನರಪ್ರೇಕ್ಷಕಗಳನ್ನು ನಿಯಂತ್ರಿಸುತ್ತದೆ, ಇದರಿಂದಾಗಿ ಮನಸ್ಥಿತಿಯನ್ನು ಸುಧಾರಿಸುತ್ತದೆ. ಅಲ್ಲದೇ ಇದು ಮೂಳೆಯ ಆರೋಗ್ಯವನ್ನು ಸಹ ಬಲಪಡಿಸುತ್ತದೆ.
ಅಪಾಯಗಳು ಮತ್ತು ಅಡ್ಡ ಪರಿಣಾಮಗಳು: ಇದನ್ನು ಸಾಮಾನ್ಯವಾಗಿ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ, ಮಕಾ ರೂಟ್ ಕನಿಷ್ಠ ಅಪಾಯಗಳನ್ನು ಹೊಂದಿರುತ್ತದೆ ಮತ್ತು ಗರ್ಭಿಣಿಯಾಗಲು ಪ್ರಯತ್ನಿಸುತ್ತಿರುವ ಮತ್ತು ಅಧಿಕ ಋತುಚಕ್ರದ ರಕ್ತಸ್ರಾವ ಸಮಸ್ಯೆಯನ್ನು ಅನುಭವಿಸುತ್ತಿರುವ ಮಹಿಳೆಯರು ಮತ್ತು ತೀವ್ರ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ಇದನ್ನು ತಿನ್ನದಿದ್ದರೆ ಒಳ್ಳೆಯದು.