ಇದನ್ನು ಬೆಚ್ಚಗಿನ ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ದೇಹದ ನೋವು ಕಡಿಮೆಯಾಗುತ್ತದೆ. ಅನೇಕ ಚರ್ಮ ಮತ್ತು ದೇಹದ ಸಮಸ್ಯೆಗಳನ್ನು ಗುಣಪಡಿಸಲು ಅರಿಶಿನವು ತುಂಬಾ ಉಪಯುಕ್ತವಾಗಿದೆ. ಆದರೆ ಅರಿಶಿನವನ್ನು ಹೊಕ್ಕಳಿಗೆ ಹಚ್ಚುವುದರಿಂದ ಹಲವಾರು ಪ್ರಯೋಜನಗಳಿವೆ ಎಂಬ ವಿಚಾರ ನಿಮಗೆ ತಿಳಿದಿದ್ಯಾ? ನಮ್ಮ ಈ ಮಾತುಗಳು ನಿಮಗೆ ಸ್ವಲ್ಪ ವಿಚಿತ್ರವೆನಿಸಬಹುದು. ಆದರೂ ಇದು ಸತ್ಯ. ಈ ಕಾರಣದಿಂದಾಗಿ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿರುತ್ತದೆ, ಋತುಚಕ್ರದ ನೋವು ನಿವಾರಣೆಯಾಗುತ್ತದೆ ಮತ್ತು ವೈರಲ್ ರೋಗಗಳು ಸಹ ದೂರವಾಗುತ್ತದೆ.
ಅರಿಶಿನ ಅನೇಕ ಆಂಟಿಆಕ್ಸಿಡೆಂಟ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದ್ದು, ಅದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅದಕ್ಕಾಗಿಯೇ ಹಾಲಿಗೆ ಅರಿಶಿನ ಸೇರಿಸಿ ಕುಡಿಯಲು ಸೂಚಿಸಲಾಗುತ್ತದೆ. ಇದಲ್ಲದೆ, ನೀವು ಪ್ರತಿ ರಾತ್ರಿ ನಿಮ್ಮ ಹೊಟ್ಟೆಯ ಮೇಲೆ ಅರಿಶಿನ ಹಚ್ಚಿಕೊಂಡು ಮಲಗಿ. ಇದು ತೂಕ ಇಳಿಕೆಗೂ ತುಂಬಾ ಸಹಾಯಕರವಅಗಿದೆ. (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದನ್ನು ಪರಿಶೀಲಿಸಿಲ್ಲ. ಯಾವುದೇ ಪುರಾವೆಗಳಿಲ್ಲ.)