ಸಿಹಿಯಿಂದ ಹಿಡಿದು ಕಾಸ್ಟ್ಲಿ ಗ್ರೇವಿಗಳವರೆಗೂ, ಅನೇಕ ಮಂದಿ ಆಹಾರದಲ್ಲಿ ಪರಿಮಳ ಹೆಚ್ಚಿಸಲು ಅಡುಗೆಗೆ ಗೋಡಂಬಿಯನ್ನು ಬಳಸುತ್ತಾರೆ. ಗೋಡಂಬಿಯನ್ನು ಹುರಿಯುವಾಗ ಅದರ ಪರಿಮಳಕ್ಕೆ ಅದೆಷ್ಟೋ ಮಂದಿಯ ಬಾಯಲ್ಲಿ ನೀರು ಬರುತ್ತದೆ. ಅಷ್ಟೇ ಅಲ್ಲದೇ ಗೋಡಂಬಿಯಲ್ಲಿ ಪೋಷಕಾಂಶಗಳೂ ಹೇರಳವಾಗಿವೆ. ಪೊಟ್ಯಾಸಿಯಮ್, ವಿಟಮಿನ್ ಇ, ಬಿ6 ಮತ್ತು ಫೋಲಿಕ್ ಆಮ್ಲದಂತಹ ವಿವಿಧ ಸೂಕ್ಷ್ಮ ಪೋಷಕಾಂಶಗಳು ಗೋಡಂಬಿಯಲ್ಲಿ ಅಡಗಿರುವುದರಿಂದ ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜೊತೆಗೆ ಗೋಡಂಬಿಯಲ್ಲಿ ಶೇಕಡಾ 75 ಕ್ಕಿಂತ ಹೆಚ್ಚು ಒಲೀಕ್ ಆಮ್ಲವಿದ್ದು, ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.
ಮನೆಯಲ್ಲಿ ಹಬ್ಬ ಹರಿದಿನ ಸೇರಿದಂತೆ, ವಿಶೇಷ ಸಂದರ್ಭಗಳಲ್ಲಿ ಗೋಡಂಬಿ ಇಲ್ಲದೇ ಅದೆಷ್ಟೋ ಮಹಿಳೆಯರು ಅಡುಗೆಯೇ ಮಾಡುವುದಿಲ್ಲ. ಅಲ್ಲದೇ ವಿಶೇಷ ಸಂದರ್ಭಗಳು ಬಂದಾಗ ಕಡಿಮೆ ಬೆಲೆಗೆ ಹೆಚ್ಚಿನ ಗೋಡಂಬಿ ಕೊಳ್ಳುವ ಅಭ್ಯಾಸವನ್ನು ಕೆಲ ಮಂದಿ ಹೊಂದಿರುತ್ತಾರೆ. ಒಂದೇ ಬಾರಿಗೆ ಹೆಚ್ಚು ಗೋಡಂಬಿ ಖರೀದಿಸಿ ಮನೆಯಲ್ಲಿಟ್ಟುಕೊಂಡಾಗ ಅದು ಕೆಡದಂತೆ ನೋಡಿಕೊಳ್ಳುವುದು ತುಂಬಾ ಕಷ್ಟ. ಸಾಮಾನ್ಯವಾಗಿ, ಮನೆಯಲ್ಲಿ ಸಾಕಷ್ಟು ಗೋಡಂಬಿ ಇದ್ದರೆ, ಅವುಗಳು ಸಾಕಷ್ಟು ದಿನಗಳ ಕಾಲ ಉಳಿಯುವುದಿಲ್ಲ. ಜೊತೆಗೆ ಅದರ ರುಚಿ ಕೂಡ ಕಡಿಮೆ ಆಗುತ್ತದೆ. ಆದ್ದರಿಂದ ಈ ಪರಿಸ್ಥಿತಿ ಬರಬಾರದು ಎಂದರೆ ಈ ಟಿಪ್ಸ್ ಫಾಲೋ ಮಾಡಿ.
ರೆಫ್ರಿಜರೇಟಿಂಗ್: ನೀವು ಗೋಡಂಬಿಯನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿದ್ದರೆ, ಅವುಗಳನ್ನು ಗಾಳಿಯಾಡದ ಕಂಟೇನರ್ನಲ್ಲಿ ಬಿಗಿಯಾಗಿ ರೆಫ್ರಿಜರೇಟರ್ನಲ್ಲಿ ಇರಿಸುವುದು ಒಳ್ಳೆಯದು. ಈ ರೀತಿ ಸಂಗ್ರಹಿಸಿಟ್ಟ ಗೋಡಂಬಿ ಸುಮಾರು 6 ತಿಂಗಳವರೆಗೆ ಕೆಡುವುದಿಲ್ಲ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)