ಕೇರಳ ಶೈಲಿಯ ಫಿಶ್ ಫ್ರೈ ಮಾಡಲು ಬೇಕಾಗುವ ಸಾಮಾಗ್ರಿಗಳು: ಮೀನು - ಅರ್ಧ ಕೆಜಿ, ಈರುಳ್ಳಿ - 10, ಚಿಲ್ಲಿ ಪೌಡರ್ - ಒಂದು ಚಮಚ, ಗರಂ ಮಸಾಲಾ ಪುಡಿ - 2 ಚಮಚ, ಬೆಳ್ಳುಳ್ಳಿ - 4, ಶುಂಠಿ - ಸ್ವಲ್ಪ, ಪುದೀನ, ಕೊತ್ತಂಬರಿ ಸೊಪ್ಪು - ಸ್ವಲ್ಷ, ಕರಿಬೇವಿನ ಸೊಪ್ಪು - 2 ಗೊಂಚಲು, ಟೊಮೆಟೊ - 2, ಹಸಿರು ಮೆಣಸಿನಕಾಯಿ - 2, ಉಪ್ಪು - ಅಗತ್ಯಕ್ಕೆ ತಕ್ಕಷ್ಟು, ಎಣ್ಣೆ - 2 ಚಮಚ.
ಬಾಣಲೆಯನ್ನು ಒಲೆಯಲ್ಲಿ ಇಟ್ಟು 2 ಚಮಚ ಎಣ್ಣೆ ಹಾಕಿ. ನಂತರ ಕತ್ತರಿಸಿದ ಈರುಳ್ಳಿ ಹಾಕಿ ಫ್ರೈ ಮಾಡಿ. ಈರುಳ್ಳಿ ಚೆನ್ನಾಗಿ ಹುರಿದ ನಂತರ ಟೊಮೆಟೋ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ ಫ್ರೈ ಮಾಡಿ. ಸ್ವಲ್ಪ ಹೊತ್ತು ಹುರಿದ ನಂತರ ಸಣ್ಣಗೆ ಹೆಚ್ಚಿದ ಪುದೀನಾ, ಕತ್ತರಿಸಿದ ಕೊತ್ತಂಬರಿ ಸೊಪ್ಪು, ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ. ನಂತರ ದೋಸೆ ತವ್ವಾದಲ್ಲಿ ಮಸಾಲೆ ಮೀನನ್ನು ಸೇರಿಸಿ ಮತ್ತು ಎರಡೂ ಬದಿಗಳಲ್ಲಿ ಲಘುವಾಗಿ ಬೇಯಿಸಿ.