ಬೇಸಿಗೆ ಕಾಲದಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ದೇಹ ಮತ್ತು ಮನಸ್ಸಿಗೆ ಮುದ ನೀಡುತ್ತದೆ. ಬೇಸಿಗೆ ಮಾತ್ರವಲ್ಲ ಚಳಿಗಾಲದಲ್ಲಿಯೂ ಐಸ್ ಕ್ರೀಂ ತಿನ್ನುವುದರಿಂದ ನಿಮ್ಮ ಮೂಡ್ ಉತ್ತಮವಾಗಿರುತ್ತದೆ. ಅದರಲ್ಲಿಯೂ ನೊಲೆನ್ ಗುಡ್ (ಬೆಲ್ಲ) ಐಸ್ ಕ್ರೀಮ್ ಅನ್ನು ಎಂದಾದರೂ ಟೇಸ್ಟ್ ಮಾಡಿದ್ದೀರಾ? ಈ ಐಸ್ ಕ್ರೀಮ್ ಅನ್ನು ಕೆಲವು ಪದಾರ್ಥಗಳಿಂದ ನೀವು ಮನೆಯಲ್ಲಿಯೇ ತಯಾರಿಸಬಹುದು. ಅದು ಹೇಗಪ್ಪಾ ಅಂತೀರಾ ಹಾಗಾದರೆ ಇಲ್ಲಿದೆ ನೋಡಿ ರೆಸಿಪಿ.
ಯಾವುದಾದರೂ ದೊಡ್ಡ ಕಿರಾಣಿ ಅಂಗಡಿಯಲ್ಲಿ ಐಸ್ ಕ್ರೀಮ್ ಪೌಡರ್ ಸಿಗುತ್ತದೆ. ಇಲ್ಲದಿದ್ದರೆ ಇದನ್ನು ನೀವು ಆನ್ಲೈನ್ನಲ್ಲಿ ಆರ್ಡರ್ ಮಾಡಿ ಕೂಡ ಖರೀದಿಸಬಹುದು. ಇತ್ತೀಚಿನ ದಿನಗಳಲ್ಲಿ ನೊಲೆನ್ ಗುಡ್ ಮಾರುಕಟ್ಟೆಯಲ್ಲಿ ಅಷ್ಟು ಸುಲಭವಾಗಿ ಸಿಗುತ್ತಿಲ್ಲ. ಹಾಗಾಗಿ ಬೆಲ್ಲದ ಪುಡಿ ಸಿಕ್ಕರೆ ಸ್ವಲ್ಪ ನೀರಿನಲ್ಲಿ ಕುದಿಸಿ ಲಿಕ್ವಿಡ್ ಮಾಡಿಕೊಳ್ಳಬಹುದು. ಇದಲ್ಲದೇ, ನೀವು ಇ-ಕಾಮರ್ಸ್ ಮತ್ತು ಗ್ಲಾಸರಿ ವೆಬ್ಸೈಟ್ಗಳಲ್ಲಿ ಮೊಲಸ್ಸೇಸ್ (ಕಬ್ಬಿನ ಹಾಲಿನಿಂದ ತಯಾರಿಸುವ ಸಿಹಿ ಪದಾರ್ಥ) ಸುಲಭವಾಗಿ ಕಾಣಬಹುದು.