ಹಿಂದೂ ಕ್ಯಾಲೆಂಡರ್ ಪ್ರಕಾರ ಯುಗಾದಿ ಹಬ್ಬದ ದಿನದಿಂದ ಹೊಸ ವರ್ಷ ಆರಂಭವಾಗುತ್ತದೆ. ಈ ಬಾರಿ ಯುಗಾದಿ ಹಬ್ಬ ಮಾರ್ಚ್ 22ರಂದು ಬುಧವಾರ ಆಚರಿಸಲಾಗುತ್ತದೆ. ಯುಗಾದಿಯನ್ನು ಚೈತ್ರ ಮಾಸದ ಆರಂಭದಲ್ಲೇ ಆಚರಿಸಲಾಗುತ್ತದೆ. ಈ ಹಬ್ಬವನ್ನು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಆಚರಿಸಲಾಗುತ್ತದೆ. ಜೊತೆಗೆ ಉತ್ತರ ಭಾರತದಲ್ಲಿಯೂ ಕೂಡ ಆಚರಣೆ ಮಾಡಲಾಗುತ್ತದೆ. ವಿಶೇಷವೆಂದರೆ ಈ ಹಬ್ಬದ ದಿನ ಎಲ್ಲರೂ ಎಣ್ಣೆ ಸ್ನಾನ ಮಾಡುತ್ತಾರೆ. ಯುಗಾದಿ ದಿನ ಅಭ್ಯಂಜನ ಅಥವಾ ಅಭ್ಯಂಗ ಅಥವಾ ಎಣ್ಣೆ ಸ್ನಾನಕ್ಕೆ ಹೆಚ್ಚಿನ ಮಹತ್ವವಿದೆ.
ಹಣೆ: ಹಣೆಯ ಎಡದಿಂದ ಬಲಭಾಗಕ್ಕೆ ತೋರುಬೆರಳು, ಮಧ್ಯದ ಬೆರಳು ಮತ್ತು ಉಂಗುರದ ಬೆರಳಿನಿಂದ ಎಣ್ಣೆ ಹಚ್ಚಿ. ಹಣೆಗೆ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ ಇದರಿಂದ ನಿಮಗೆ ರಿಲಾಕ್ಸ್ ಆಗುತ್ತದೆ. ಜೊತೆಗೆ ನಿಮ್ಮ ಕಣ್ಣಿನ ಎರಡೂ ರೆಪ್ಪೆಗಳಿಗೆ ಎಣ್ಣೆಯನ್ನು ಹಚ್ಚಬೇಕು. ಎಣ್ಣೆಯನ್ನು ಹಚ್ಚುವಾಗ ರೆಪ್ಪೆಯ ಮೇಲೆ ಬೆರಳುಗಳನ್ನು ಇಟ್ಟು ಮೂಗಿನ ಮೇಲಿಂದ ಕಿವಿಯ ಕಡೆಗೆ ಎಳೆಯಬೇಕು.