ಸಾಮಾನ್ಯ ಲಕ್ಷಣಗಳು: ವೃಷಣ ಕ್ಯಾನ್ಸರ್ ಅನ್ನು ಪತ್ತೆಹಚ್ಚಲು ಯಾವುದೇ ನಿರ್ದಿಷ್ಟ ಲಕ್ಷಣಗಳಿಲ್ಲ. ಈ ರೋಗಲಕ್ಷಣಗಳು ಸಾಮಾನ್ಯ ದೈಹಿಕ ಕಾಯಿಲೆಗಳಿಗೆ ಹೋಲುತ್ತವೆ. ಆದರೆ, ಅದರ ಅರಿವಿದ್ದರೆ ತಕ್ಷಣ ತಿಳಿಯಬಹುದು. ಅವುಗಳೆಂದರೆ, ಮೂತ್ರ ವಿಸರ್ಜನೆಯ ತೊಂದರೆ, ಆಗಾಗ ಮೂತ್ರ ವಿಸರ್ಜನೆಯ ಅಗತ್ಯತೆ, ವಿಶೇಷವಾಗಿ ರಾತ್ರಿಯಲ್ಲಿ, ಮೂತ್ರ ಅಥವಾ ವೀರ್ಯದಲ್ಲಿ ರಕ್ತ, ಮೂತ್ರ ವಿಸರ್ಜನೆ ಸಮಯದಲ್ಲಿ ತೀವ್ರವಾದ ನೋವು, ಶ್ರೋಣಿ ಕುಹರದ ನೋವು, ಬೆನ್ನು ನೋವು ಮತ್ತು ತೊಡೆಯ ನೋವು. ಈ ರೀತಿಯ ಲಕ್ಷಣಗಳು ವೃಷಣ ಕ್ಯಾನ್ಸರ್ಗೆ ಕಾರಣವಾಗಬಹುದು.